BJP: ಜಗದೀಶ ಶೆಟ್ಟರ್ ರಾಜ್ಯಸಭೆಗೆ?
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ಕಾರಣ ರಾಜೀವ್ ಚಂದ್ರಶೇಖರ್, ಸೋಮಣ್ಣ ಕೂಡ ಆಕಾಂಕ್ಷಿ
Team Udayavani, Feb 3, 2024, 10:38 PM IST
ಬೆಂಗಳೂರು: ರಾಜ್ಯಸಭಾ ಅಭ್ಯರ್ಥಿ ಆಯ್ಕೆಗೆ ಸಂಬಂಧ ಪಟ್ಟಂತೆ ಬಿಜೆಪಿಯಲ್ಲಿ ದಿನಕ್ಕೊಂದು ವಿದ್ಯಮಾನಗಳು ನಡೆಯು ತ್ತಿದ್ದು, ಇತ್ತೀಚೆಗಷ್ಟೇ “ಘರ್‌ವಾಪ್ಸಿ’ಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಸರು ತೇಲಿ ಬಂದಿದೆ. ಜತೆಗೆ ರಾಜ್ಯಸಭಾ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಚಿವ ರಾಜೀವ್ ಚಂದ್ರಶೇಖರ್, ವಿ.ಸೋಮಣ್ಣ ಹಾಗೂ ಶೆಟ್ಟರ್ ಹೆಸರು ಸೇರ್ಪಡೆಯಾಗಿದ್ದು, ವರಿಷ್ಠರು ಯಾರಿಗೆ ಮಣೆ ಹಾಕಬಹುದು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿ ಕೊಡುವ ಸಂಪ್ರದಾಯವನ್ನು ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈ ಬಿಡಲಾಗಿದೆ. ಇದರ ಬದಲಾಗಿ ಅಭ್ಯರ್ಥಿ ಯಾರೆಂಬುದನ್ನು ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚಿಸಿ ಅಂತಿಮಗೊಳಿಸುವ ಅಧಿಕಾರವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನೀಡಲಾಗಿದೆ. ಹೀಗಾಗಿ ರಾಜ್ಯಸಭಾ ಟಿಕೆಟ್ ದಿಲ್ಲಿಯಲ್ಲೇ ಅಂತಿಮಗೊಳ್ಳುವುದು ಎಂಬುದಂತೂ ಸ್ಪಷ್ಟ. ಬಿಜೆಪಿ ಮೂಲಗಳ ಪ್ರಕಾರ ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸಬೇಕೋ, ಬೇಡವೋ ಎಂಬುದಕ್ಕಿಂತ ಮೊದಲ ಅಭ್ಯರ್ಥಿ ಯಾರೆಂಬುದೇ ಇನ್ನೂ ಬಗೆಹರಿದಿಲ್ಲ. ಹಾಲಿ ಸಚಿವ ರಾಜೀವ್ ಚಂದ್ರಶೇಖರ್ ಮುಂದುವರಿಯುವ ಸಾಧ್ಯತೆ ಇದೆ ಎಂಬುದು ಕೆಲವರ ವಾದವಾದರೂ ಇನ್ನೂ ಸ್ಪಷ್ಟತೆ ಇಲ್ಲ.
ಸಭೆಯಲ್ಲಿ ಭಾಗವಹಿಸಿದ್ದ ಕೋರ್ ಕಮಿಟಿ ಸದಸ್ಯರೊಬ್ಬರ ಪ್ರಕಾರ ವರಿಷ್ಠರು ಈ ಬಾರಿ ಜಗದೀಶ್ ಶೆಟ್ಟರ್ ಹೆಸರನ್ನು ಪರಿಗಣಿಸಿದರೂ ಆಶ್ಚರ್ಯವಿಲ್ಲ. 6 ವರ್ಷ ಕಾಲ ಇದ್ದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಶೆಟ್ಟರ್ ರಾಜೀನಾಮೆ ನೀಡಿ ಬಂದಿರುವುದರಿಂದ ತತ್‌ಕ್ಷಣಕ್ಕೆ ಅವರಿಗೆ ಪುನರ್ವಸತಿ ಕಲ್ಪಿಸುವುದು ವರಿಷ್ಠರಿಗೂ ಅನಿವಾರ್ಯವಾಗಲಿದೆ. ಹೀಗಾಗಿ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಮೂಲಗಳ ಪ್ರಕಾರ ಶೆಟ್ಟರ್ ಅವರನ್ನು ಲೋಕಸಭಾ ಕಣಕ್ಕೆ ಇಳಿಸುವ ಭರವಸೆ ಸಿಕ್ಕಿಲ್ಲ. ಸ್ವತಃ ಶೆಟ್ಟರ್ ಈ ಬಗ್ಗೆ ಆಸಕ್ತರಾಗಿಲ್ಲ. ಹೀಗಾಗಿ ವಿಧಾನಸಭಾ ಚುನಾವಣ ಪೂರ್ವದಲ್ಲಿ ನೀಡಿದ್ದ ರಾಜ್ಯಸಭಾ ಆಫರ್ ಈಗ ನೆರವೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪರಿಷತ್‌ಗೆ ಮೂವರ ಹೆಸರು
ಈ ಮಧ್ಯೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸದ್ಯದಲ್ಲೇ ನಡೆಯುವ ಚುನಾವಣೆಗೆ ಮೂರು ಹೆಸರುಗಳನ್ನು ಈಗಾಗಲೇ ಕಳುಹಿಸಲಾಗಿದೆ. ಹಾಲಿ ಸದಸ್ಯ ಅ.ದೇವೇಗೌಡ, ವಿನೋದ್ ಕೆ.ಗೌಡ ಹಾಗೂ ಎ.ಎಚ್.ಆನಂದ ಅವರ ಹೆಸರನ್ನು ಕಳುಹಿಸಲಾಗಿದೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಉಳಿದ ಅಭ್ಯರ್ಥಿಗಳ ಬಗ್ಗೆ ಸದ್ಯದಲ್ಲೇ ರಾಜ್ಯ ಸಮಿತಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.