ಮಾಜಿ ಸಚಿವ ಅನ್ಸಾರಿ ಜಾತಿ ಜಗಳ ಹಚ್ಚಲು ಷಡ್ಯಂತ್ರ ನಡೆಸಿದ್ದಾರೆ: ಯಮನೂರ ಚೌಡ್ಕಿ
Team Udayavani, Dec 19, 2021, 7:19 PM IST
ಗಂಗಾವತಿ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಜಾತಿ ಜಗಳ ಹಚ್ಚಿ ಮಜಾ ನೋಡಲು ಕಾಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಯಮನೂರ ಚೌಡ್ಕಿ ಹೇಳಿದರು.
ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಪಿನ್ ರಾವತ್ ಒಬ್ಬ ದೇಶ ಭಕ್ತ ಅವರ ವೃತ್ತ ನಿರ್ಮಾಣ ಮಾಡಿದರೆ ಇಸ್ಲಾಂಪೂರದ 150 ಕ್ಕೂ ಹೆಚ್ಚು ಗೂಂಡಾಗಳು ದೌರ್ಜನ್ಯವೆಸಗಲು ಆಗಮಿಸಿದ್ದರು ಅವರಿಗೆ ತಿಳುವಳಿಕೆ ಹೇಳದೇ ನಮ್ಮವರಿಂದಲೇ ಪತ್ರಿಕಾ ಹೇಳಿಕೆ ನೀಡಿ ನಮ್ಮ ನಮ್ಮಲ್ಲಿ ಜಗಳ ಹಚ್ಚುವುದು ಸರಿಯಲ್ಲ ಎಂದರು.
ಬೇಕಾದರೆ ನಾವೇ 10 ಲಕ್ಷ ರೂ. ಕೊಡ್ತೇವೆ ಬೇರೆಡೆಗೆ ಇಸ್ಲಾಂಪೂರ ವೃತ್ತ ನಿರ್ಮಿಸಿಕೊಳ್ಳಲಿ. ಮುಂದಿನ ಎಂಎಲ್‌ಎ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಮಾಜಿ ಸಚಿವ ಅನ್ಸಾರಿ ಇಂತಹ ಷಡ್ಯಂತ್ರ ನಡೆಸಿದ್ದಾರೆಂದು ಬಿಜೆಪಿ ಮುಖಂಡ ಯಮನೂರ ಚೌಡ್ಕಿ, ರಮೇಶ ಚೌಡ್ಕಿ , ಚಳಗೇರಿ ನಾಗರಾಜ ಹಾಗೂ ಎಸ್.ರಾಘವೇಂದ್ರ ಶೆಟ್ಟಿ ,ನವೀನಪಾಟೀಲ್ ಹೇಳಿದರು.
ಇಸ್ಲಾಂಪೂರ ರಸ್ತೆಯಲ್ಲಿ ಖಾಲಿ ಇದ್ದ ಜಾಗದಲ್ಲಿ ಬಿಪಿನ್ ರಾವತ್ ವೃತ್ತ ನಿರ್ಮಾಣ ಮಾಡಲು ಸರ್ವ ಜನಾಂಗದ ಹಿತರಕ್ಷಣಾ ವೇದಿಕೆಯವರು ಡಿ.13 ರಂದು ನಗರಸಭೆಗೆ ಮನವಿ ಪತ್ರ ಸಲ್ಲಿಸಿ ಡಿ.16 ರಂದು ವೃತ್ತ ನಿರ್ಮಾಣ ಮಾಡಿದ್ದು ಇದನ್ನು ಶಾಸಕ ಪರಣ್ಣ ಮುನವಳ್ಳಿ ಅನಾವರಣ ಮಾಡಿದ್ದಾರೆ. ಇದರಲ್ಲಿ ಪರಣ್ಣ ಮುನವಳ್ಳಿಯವರ ಪಾತ್ರ ಏನು ಇಲ್ಲ. ಜನಪ್ರತಿನಿಧಿಯಾಗಿ ಸಂಘ ಸಂಸ್ಥೆಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಜನಪ್ರತಿನಿಧಿಯ ಕರ್ತವ್ಯವಾಗಿದ್ದು ಅನ್ಸಾರಿ ಕಡೆಯವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಶಾಸಕರ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಇದನ್ನು ಹಿಂದು ಸಂಘಟನೆಗಳು ಸಹಿಸುವುದಿಲ್ಲ ಎಂದರು.
ಸರ್ವ ಜನಾಂಗದ ಹಿತರಕ್ಷಣಾ ವೇದಿಕೆ, ಹಿಂದು ಸಂಘಟನೆಗಳು ದೇಶಕ್ಕಾಗಿ ಹೋರಾಡುವ ಸಂಘಟನೆಗಳಾಗಿದ್ದು ಇದುವರೆಗೂ ಬಿಜೆಪಿಯಲ್ಲಿದ್ದು ಇದೀಗ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವ ವಡ್ರಟ್ಟಿ ವೀರಭದ್ರಪ್ಪ ನಾಯಕ ಹಾಗೂ ಮನೋಹರಸ್ವಾಮಿ ಇವರು ಮಾಜಿ ಸಚಿವರನ್ನು ಪ್ಲೀಜ್ ಮಾಡಲು ವೃತ್ತ ನಿರ್ಮಾಣ ಮತ್ತು ಪರಣ್ಣ ಮುನವಳ್ಳಿ ಇಲ್ಲಸಲ್ಲದ ಮಾತುಗಳನ್ನಾಡುವುದು ಸರಿಯಲ್ಲ ಇದನ್ನು ನೋಡಿಕೊಂಡು ಹಿಂದು ಸಂಘಟನೆಗಳು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ವೃತ್ತ ನಿರ್ಮಾಣ ನಂತರ ನಡೆದ ಗೊಂದಲಗಳ ಬಗ್ಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಹಿರಂಗವಾಗಿ ಮಾತನಾಡಿ ಗೂಂಡಾಗಿರಿ ಮಾಡಲು ಬಂದಿದ್ದ 150 ಕ್ಕೂ ಹೆಚ್ಚು ಜನರಿಗೆ ಬುದ್ದಿವಾದ ಹೇಳದೇ ಹಿಂಬಾಲಕರ ಮೂಲಕ ಸುದ್ದಿಗೋಷ್ಠಿ ನಡೆಸಿ ಪರಣ್ಣ ಮುನವಳ್ಳಿ ಬಗ್ಗೆ ಹಗುರವಾಗಿ ಮಾತನಾಡಿಸುತ್ತಿದ್ದಾರೆ. ಈ ಹಿಂದೆ ದುರುಗಮ್ಮ ಹಳ್ಳದ ಪಕ್ಕದಲ್ಲಿ ಮ್ಯಾದಾರ ಕೇತೇಶ್ವರ ವೃತ್ತ ನಿರ್ಮಾಣ ಮಾಡಿದಾಗಲೂ ಇವರು ಕ್ಯಾತೆ ತೆಗೆದಿದ್ದರು. ಇಸ್ಲಾಂಪೂರದಲ್ಲಿ ಅನ್ಯ ಜಾತಿಯ ಮಹಾನೀಯರ ವೃತ್ತ ನಿರ್ಮಾಣ ಬೇಡ ಎನ್ನಲು ಇವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಪಿನ್ ರಾವತ್ ವೃತ್ತಕ್ಕೆ ಅಂಟಿಸಿರುವ ಪೇಪರ್ ಕೂಡಲೇ ಕಿತ್ತಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ. ಪ್ರತಿಯೊಂದು ಜಾತಿ ಜನಾಂಗಕ್ಕೂ ವೃತ್ತಗಳಿದ್ದು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಯಾವ ವೃತ್ತವನ್ನು ತೆರವುಗೊಳಿಸಬಾರದು. ಕೂಡಲೇ ನಗರಸಭೆ ಎಲ್ಲಾ ವೃತ್ತಗಳನ್ನು ಸರಕಾರದ ಮಟ್ಟದಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಅಧಿಕೃತ ಮಾಡಬೇಕು. ಈ ಕುರಿತು ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಮಾಡಿದ್ದು ಸೋಮವಾರ ಅಧಿವೇಶದಲ್ಲಿ ಈ ಕುರಿತು ಸರಕಾರದ ಗಮನ ಸೆಳೆದು ಎಲ್ಲಾ ವೃತ್ತಗಳನ್ನು ಅಧಿಕೃತಗೊಳಿಸಲು ಸರಕಾರದ ಮೇಲೆ ಒತ್ತಡ ತರಲಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಕಾಶಿನಾಥ ಚಿತ್ರಗಾರ, ಚನ್ನಪ್ಪ ಮಳಗಿ, ಕೆ.ವೆಂಕಟೇಶ, ಮಲ್ಲೇಶಪ್ಪ ನಾಯಕ, ಶಿವಪ್ಪ ಪೂಜಾರಿ, ವಾಸುದೇವ ನವಲಿ, ರಾಚಪ್ಪ7 ಸಿದ್ದಾಪೂರ, ಚಳಗೇರಿ ನಾಗರಾಜ,ಕೋರಿ ಚನ್ನವೀರನಗೌಡ, ಪರಶುರಾಮ ಮಡ್ಡೇರ್, ಬಸವರಾಜ ಚಲುವಾದಿ, ಸಂಗಮೇಶ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.