![City](https://www.udayavani.com/wp-content/uploads/2025/02/City-1-415x249.jpg)
![City](https://www.udayavani.com/wp-content/uploads/2025/02/City-1-415x249.jpg)
Team Udayavani, Mar 29, 2019, 2:59 PM IST
ಬೆಂಗಳೂರು: ಕರ್ನಾಟಕದ ಬಾಕಿ ಉಳಿದ 3 ಲೋಕಸಭಾ ಕ್ಷೇತ್ರ ಸೇರಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ ಮತ್ತು ರಾಜಸ್ಥಾನದ ಒಟ್ಟು 11 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿನ 12ನೇ ಪಟ್ಟಿಯನ್ನು ಶುಕ್ರವಾರ ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಗಣ್ಣ ಕರಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ರಾಯಚೂರು (ಎಸ್ ಟಿ ಮೀಸಲು) ಲೋಕಸಭಾ ಕ್ಷೇತ್ರಕ್ಕೆ ರಾಜಾ ಅಮರೇಶ್ ನಾಯಕ್ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ.
ಇದನ್ನೂ ಓದಿ: ನಮ್ಮತ್ತ ಬೆಟ್ಟು ಮಾಡುವ ಬೆರಳನ್ನು ಕತ್ತರಿಸುವೆವು : ಬಿಜೆಪಿ ಅಭ್ಯರ್ಥಿ
ಜಮ್ಮು-ಕಾಶ್ಮೀರದ ಲಡಾಖ್ ಲೋಕಸಭಾ ಕ್ಷೇತ್ರಕ್ಕೆ ಜಮ್ಯಾಂಗ್ ತ್ಸೇರಿಂಗ್ ನಮ್ಗ್ಯಾಲ್, ಮಧ್ಯಪ್ರದೇಶದ ಬಾಲಾಘಾಟ್ ಕ್ಷೇತ್ರಕ್ಕೆ ಧಾಲ್ ಸಿಂಗ್ ಬಿಸೇನ್, ರಾಜ್ ಗಢ್ ಕ್ಷೇತ್ರಕ್ಕೆ ರೋಡ್ ಮಲ್, ಖರ್ಗಾಂವ್ ಮೀಸಲು ಕ್ಷೇತ್ರಕ್ಕೆ ಗಜೇಂದ್ರ ಪಟೇಲ್, ಮಹಾರಾಷ್ಟ್ರದ ಮಧಾ ಲೋಕಸಭಾ ಕ್ಷೇತ್ರಕ್ಕೆ ರಂಜೀತ್ ಸಿಂಗ್ ಹಿಂದೂರಾವ್ ನಾಯಕ್, ರಾಜಾಸ್ಥಾನ ಚುರು ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಕಾಸ್ವಾನ್, ಅಲ್ವಾರ್ ಲೋಕಸಭಾ ಕ್ಷೇತ್ರಕ್ಕೆ ಬಾಲಕ್ ನಾಥ್, ಬಾನ್ಸಾವರ್ ಕ್ಷೇತ್ರಕ್ಕೆ ಕನಕ್ ಮಲ್ ಕಠಾರ ಅವರಿಗೆ ಟಿಕೆಟ್ ನೀಡಿದೆ.
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
You seem to have an Ad Blocker on.
To continue reading, please turn it off or whitelist Udayavani.