BJP: ಬೂತ್‌ನಿಂದ ಭವಿಷ್ಯ- ಮೊದಲ ದಿನವೇ ಅಖಾಡಕ್ಕಿಳಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
Team Udayavani, Nov 11, 2023, 11:58 PM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಮರು ದಿನವೇ ಬಿ.ವೈ. ವಿಜಯೇಂದ್ರ ಅಖಾಡಕ್ಕೆ ಇಳಿದಿದ್ದು, ಬೂತ್ ಮಟ್ಟದಿಂದ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜತೆಗೆ ಸಂಘದ ವರಿಷ್ಠರ ಮಾರ್ಗದರ್ಶನ ಪಡೆಯುವು ದಕ್ಕೆ ಮುಂದಾಗಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ನಾಯಕರ ದಂಡು ಭೇಟಿ ನೀಡಿ ಶುಭಾಶಯ ಕೋರಿದೆ. ಆದರೆ ವಿಜಯೇಂದ್ರ ಮಾತ್ರ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಬ್ರಹ್ಮಣ್ಯೇಶ್ವರ ಮಂದಿರ ಸಮೀಪದ ಕುಮಾರಕೃಪಾ ಬೂತ್-40ರ ಅಧ್ಯಕ್ಷ ಶಶಿಧರ್ ಅವರ ಮನೆಗೆ ತೆರಳಿ ಶುಭಕೋರಿದರು. ಈ ಮೂಲಕ ತಾನು ತಳಹಂತದಿಂದಲೇ ಸಂಘಟನೆಗೆ ಇಳಿಯುತ್ತೇನೆ ಎಂಬ ಸಂದೇಶ ರವಾನಿಸಿದರು. ಕಾರ್ಯಕರ್ತರ ಭೇಟಿ ಬಳಿಕ ಚಾಮರಾಜಪೇಟೆಯಲ್ಲಿರುವ ಕೇಶವಕೃಪಾಕ್ಕೆ ಭೇಟಿ ನೀಡಿ ಸಂಘದ ಹಿರಿಯರ ಜತೆಗೂ ಚರ್ಚೆ ನಡೆಸಿದರು.
ಚುನಾವಣೆಯಲ್ಲಿ ಸೋತ ಅನಂತರ ನಾಯಕತ್ವ ಇಲ್ಲದೇ ಅಸಮಾಧಾನ ಗೊಂಡು ದೂರ ಉಳಿದಿದ್ದ ಕಾರ್ಯ ಕರ್ತರಿಗೆ ಇದರಿಂದ ಚೈತನ್ಯ ಲಭಿಸಿದ್ದು, ಲೋಕಸಭಾ ಚುನಾವಣೆಗೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ಪ್ರಾರಂಭವಾಗಿದೆ.
ಬೂತ್ ಅಧ್ಯಕ್ಷರಿಗೆ ಗೌರವ
ರಾಜ್ಯಾಧ್ಯಕ್ಷರಾದ ಮಾರನೇ ದಿನವೇ ಮೊದಲಿಗೆ ಬೂತ್ ಅಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿದ ಬಿ.ವೈ. ವಿಜಯೇಂದ್ರ, ಬೂತ್‌ಗಳ ಪ್ರಾಮುಖ್ಯದ ಬಗ್ಗೆ ಒತ್ತಿ ಹೇಳಿದರು.
ಈ ವೇಳೆ ಮಾತನಾಡಿ, ಎಲ್ಲ ಬೂತ್‌ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲಾಗುವುದು. ಬೂತ್ ಗೆದ್ದರೆ ದೇಶ ಗೆಲ್ಲುತ್ತೇವೆ ಎನ್ನುವುದು ಅಮಿತ್ ಶಾ, ಜೆ.ಪಿ. ನಡ್ಡಾ ವಿಶ್ವಾಸ. ಈ ನಿಟ್ಟಿನಲ್ಲಿ ಮೊದಲ ದಿನ ಬೂತ್ ಅಧ್ಯಕ್ಷರ ಮನೆಗೆ ಬಂದಿದ್ದೇನೆ. ನಮ್ಮ ಪಕ್ಷದ ಘಟಾನುಘಟಿ ನಾಯಕರು ಬೂತ್ ಅಧ್ಯಕ್ಷರಾಗಿ ಬಂದವರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಿಗುವ ಗೌರವ ಬೂತ್ ಅಧ್ಯಕ್ಷರಿಗೂ ಸಿಗುತ್ತದೆ ಎಂದರು.
ಕಾಂಗ್ರೆಸ್ ಸರಕಾರ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಯಾವುದೇ ಕಾರ್ಯಕರ್ತರು ಹೆದರಿ ಹೋರಾಟದಿಂದ ಹಿಂದೆ ಸರಿಯುವವರಲ್ಲ. ಕಾಂಗ್ರೆಸ್‌ನವರು ಏನು ಮಾಡುತ್ತಾರೋ ಮಾಡಲಿ. ಮುಂದೆ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಗಾಂಧಿನಗರ ಬೂತ್ ಅಧ್ಯಕ್ಷರ ಮನೆಗೆ ಸಾಂಕೇತಿಕ ಭೇಟಿ ನೀಡಿದ್ದೇನೆ. ಮುಂದೆ ಎಲ್ಲ ಬೂತ್‌ಗಳಿಗೆ ಭೇಟಿ ಕೊಡುತ್ತೇನೆ. ದೀಪಾವಳಿ ಸಂದರ್ಭದಲ್ಲಿ ಅವರ ಮನೆಗೆ ತೆರಳಿ, ಕುಟುಂಬದವರಿಗೆ ಶುಭ ಕೋರಲಾಗಿದೆ. ಪಕ್ಷದ ಕಾರ್ಯಕರ್ತರು ಹೋರಾಟದ ಮನೋಭಾವದಿಂದ ಹಿಂದೆ ಸರಿದಿಲ್ಲ. ಹೋರಾಟ ಬಿಜೆಪಿಯ ಪ್ರತಿ ಕಾರ್ಯಕರ್ತನ ರಕ್ತದ ಕಣ ಕಣದಲ್ಲೂ ಇದೆ. ಕಾಂಗ್ರೆಸ್‌ನವರು ಎಷ್ಟೇ ಅಬ್ಬರ ಮಾಡಿದರೂ ಅದನ್ನು ಮೀರಿ ನಮ್ಮ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ನಾವು ತಕ್ಕ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ವಾರಾಂತ್ಯದೊಳಗೆ ಶಾಸಕಾಂಗ ಸಭೆ
ದೀಪಾವಳಿ ಹಬ್ಬದ ಅನಂತರ ಪಕ್ಷದ ಅಧ್ಯಕ್ಷರ ಪದಗ್ರಹಣಕ್ಕೆ ತಯಾರಿಗಳು ನಡೆಯುತ್ತಿದ್ದು, ವಾರಾಂತ್ಯದೊಳಗಾಗಿ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆ. ವಿವಿಧ ಮಠಾಧೀಶರ ಆಶೀರ್ವಾದ ಪಡೆದ ಬಳಿಕ, ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಿ ಪದಗ್ರಹಣ ದಿನಾಂಕ ನಿಗದಿಪಡಿಸುವ ಚಿಂತನೆಯಲ್ಲಿ ವಿಜಯೇಂದ್ರ ಇದ್ದು, ಬಳಿಕ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ.
ನನ್ನನ್ನು ಹಾಗೂ ಲಿಂಗಾಯತ ಸಮುದಾಯವನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವು ದಿಲ್ಲ. ವೀರಶೈವ -ಲಿಂಗಾಯತ ಸಮುದಾಯ ಬಿಜೆಪಿ ಜತೆಗೆ ಇನ್ನಷ್ಟು ಗಟ್ಟಿಯಾಗಿ ನಿಲ್ಲಲಿದೆ. ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಮೋದಿಯವರಿಗೆ ಉಡುಗೊರೆ ನೀಡಬೇಕೆಂಬುದು ನನ್ನ ಅಪೇಕ್ಷೆ.
– ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
ನಿಮ್ಮಂತೆ ಕೆಲವು ಪ್ರಶ್ನೆಗಳು ನನ್ನನ್ನೂ ಕಾಡುತ್ತಿವೆ. ಈಗ ಉತ್ತರಿಸಿದರೆ ಅಪಾರ್ಥವಾಗುತ್ತದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂಬ ನಿಟ್ಟಿನಲ್ಲಿ ನಾನೂ ಕೆಲಸ ಮಾಡುತ್ತೇನೆ.
-ಸಿ.ಟಿ. ರವಿ, ಬಿಜೆಪಿ ನಾಯಕ
ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸು ತ್ತೇವೆ. 28 ಸ್ಥಾನ ಗೆಲ್ಲುತ್ತೇವೆ. ಆದರೆ ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯುವುದಿಲ್ಲ. ಬಿಜೆಪಿ ಯಾರ ಮೇಲೂ ನಿಂತಿಲ್ಲ.
-ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.