Malpe ಕಡಲತೀರದಲ್ಲಿ ಕಪ್ಪು ಬಣ್ಣದ ಟಾರ್‌ಬಾಲ್ ಪತ್ತೆ
Team Udayavani, Jun 25, 2023, 5:39 AM IST
ಮಲ್ಪೆ: ನಾಲ್ಕೈದು ದಿನಗಳಿಂದ ಮಲ್ಪೆ ಸಮುದ್ರ ತೀರದಲ್ಲಿ ಟಾರ್‌ಬಾಲ್ ಕಾಣಿಸಿಕೊಳ್ಳ ಲಾರಂಭಿಸಿದೆ. ಅಲೆಗಳೊಂದಿಗೆ ತೇಲಿ ಕೊಂಡು ಬರುವ ಡಾಮರು ರೀತಿಯಲ್ಲಿರುವ ಕಪ್ಪು ಬಣ್ಣದ ಟಾರ್‌ಬಾಲ್ ನಿಸರ್ಗ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಮಲ್ಪೆ ಬೀಚ್, ಕೊಳ, ತೊಟ್ಟಂ ಕಡಲತಡಿಯ ಉದ್ದಕ್ಕೂ ತೀರದಲ್ಲಿ ಕಾಣಿಸಿಕೊಂಡು ಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತಿದೆ.
ಕಡಲ ತೀರದಲ್ಲಿ ನೀರು ನೈಜತೆ ಯನ್ನು ಕಳೆದುಕೊಂಡು ಗಡುಸಾಗಿ ಜಲಚರಗಳ ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತಿದೆ. ಹಡಗಿನಿಂದ ಕಚ್ಚಾತೈಲ ಸೋರಿಕೆಯಾಗಿ ಸಮುದ್ರ ದಲ್ಲಿ ತೇಲಿದಾಗ ಗಾಳಿ, ಅಲೆಗಳಿಗೆ ಅದು ಈ ಜಿಡ್ಡಿನ ಚೆಂಡುಗಳಾಗಿ ಮಾರ್ಪಾಟಾಗುತ್ತವೆ. ಇದು ಜಲಚರಗಳಿಗೆ ಹೆಚ್ಚು ಅಪಾಯಕಾರಿ ಎಂದು ಮೀನುಗಾರರು ತಿಳಿಸುತ್ತಾರೆ.
ಕಡಿಮೆಯಾದ
ಗಂಗೆಯ ಕೂದಲು
ಕಳೆದೊಂದು ವಾರದಿಂದ ಸಮು ದ್ರತೀರದಲ್ಲಿ ಅಗಾಧ ಪ್ರಮಾಣದಲ್ಲಿ ತೇಲಿ ಬರುತ್ತಿದ್ದ ಶ್ಯಾವಿಗೆ ರೂಪದ ಪಾಚಿ (ಸ್ಥಳೀಯರ ಪ್ರಕಾರ ಗಂಗೆಯ ಕೂದಲು) ಕಳೆದೆರಡು ದಿನದಿಂದ ಕಡಿಮೆಯಾಗಿದೆ. 10 ವರ್ಷಗಳ ಅನಂತರ ಕಿಲೋ ಮೀಟರ್ ದೂರಕೆ à ಪಾಚಿ ವ್ಯಾಪಿಸಿತ್ತು. ಮೀನುಗಾರಿಕೆ ಮಹಾವಿದ್ಯಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದು ಪ್ರಾಣಿಜನ್ಯ ಪಾಚಿ, ಸಮುದ್ರದಲ್ಲಿ ಉಪ್ಪಿನ ಅಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಸತ್ತು ರಾಶಿಯಾಗಿ ತೇಲಿ ಸಮುದ್ರತೀರಕ್ಕೆ ಬಂದಿದೆ ಎಂದು ತಿಳಿಸಿದ್ದರು. ಹೆಚ್ಚಿನ ಸಂಶೋಧನೆಗಾಗಿ ಮಾದರಿಯನ್ನು ಕೊಂಡೊಯ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.