ಉಳ್ಳವರಿಗೆ ಮಾತ್ರ ವೈದ್ಯಸೇವೆ ಆತಂಕಕಾರಿ: ಪ್ರೊ| ನಂದೂರಿ
ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ
Team Udayavani, Aug 27, 2020, 3:16 PM IST
ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿ ಆಗಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಸರ್ವರಿಗೂ ಆರೋಗ್ಯ ಸೇವೆ ಸುಲಭ ರೀತಿಯಲ್ಲಿ ಸಿಗುವಂತೆ ನೋಡಿಕೊಳ್ಳುವುದು ಯುವ ವೈದ್ಯರ ಹೊಣೆಯಾಗಿದೆ ಎಂದು ಅಮೆರಿಕ ಚಿಕ್ಯಾಗೋ ವಿವಿ ವಿಜ್ಞಾನಿ ಪ್ರೊ| ನಂದೂರಿ ಪ್ರಭಾಕರ ಅಭಿಪ್ರಾಯಪಟ್ಟರು.
ಬುಧವಾರ ಬಿಎಲ್‌ಡಿಇ ವಿಶ್ವ ವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿದ ಬಿಎಲ್ ಡಿಇ ಡೀಮ್ಡ್ ವಿಶ್ವವಿದ್ಯಾಲಯ 8ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಶಿಕ್ಷಣ ಶಾಲೆ-ಕಾಲೇಜಿನಲ್ಲಿ ಕಲಿತರೆ ಮುಗಿಯವುದಿಲ್ಲ. ಕಲಿಕೆ ನಿರಂತರತೆ ಹೊಂದಿರಬೇಕು. ಅದರಲ್ಲೂ ವಿಜ್ಞಾನದ ಶಿಕ್ಷಣಕ್ಕೆ ಯಾವುದೇ ಪ್ರಾಂತ್ಯ, ದೇಶ, ಗಡಿ ರೇಖೆಗಳಿಲ್ಲ. ಅದು ಎಲ್ಲೆಡೆ ವ್ಯಾಪಿಸಿದ್ದು ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸೂಪರ್ ಸ್ಪೇಷಾಲಿಟಿ ವಿಭಾಗ ಇನ್ನೂ ದುಬಾರಿಯಾಗಿದೆ. ಇದರಿಂದ ಹಣ ಇದ್ದ ಶ್ರೀಮಂತರಿಗೆ ಮಾತ್ರ ಭವಿಷ್ಯದಲ್ಲಿ ಆರೊಗ್ಯ ಸೇವೆ, ಚಿಕಿತ್ಸೆ. ಹಣ ಇಲ್ಲದ ಬಡವರಿಗೆ ವೈದ್ಯಕೀಯ ಸೇವೆ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಪದವಿ ಮುಗಿಸಿ, ವೈದ್ಯಕೀಯ ಸೇವೆಗೆ ಸಜ್ಜಾಗಿರುವ ಯುವ ವೈದ್ಯರು ಈ ದಿಶೆಯಲ್ಲಿ ಚಿಂತನೆ ಮಾಡಬೇಕು ಎಂದರು.
ಸಾರ್ವಜನಿಕ ಸೇವೆ, ಉದ್ದಿಮೆಗಳನ್ನು ಸ್ಥಾಪಿಸಿ, ಉತ್ಕೃಷ್ಠ ಸೇವೆ ಸಲ್ಲಿಸುತ್ತಿರುವ ಆಂಧ್ರಪದೇಶ ಬಿಜೆಪಿ ರಾಜ್ಯಸಭಾ ಸದಸ್ಯ ಸಿ.ಎಂ. ರಮೇಶ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ವಿವಿ ಹಿರಿಯ ಸಂಶೋಧಕರಾದ ಡಾ| ಲತಾ ಮಳ್ಳೂರು, ಕಿರಿಯ ಸಂಶೋಧಕರಾದ ಡಾ| ಅರುಣಾ ಬಿರಾದಾರ ಅವರನ್ನು ಗೌರವಿಸಲಾಯಿತು.
ಸ್ನಾತಕೋತ್ತರ ವಿಭಾಗದಲ್ಲಿ ನಮ್ರತಾ ನಾಯರ 2 ಚಿನ್ನದ ಪದಕ, ಅನುಷಾ ರೆಡ್ಡಿ, ನಯನ ಕೃಷ್ಣನಾಥ, ಯಶೋಧ ಡಿ.ಎಚ್ ತಲಾ 1 ಚಿನ್ನದ ಪದಕ ಪಡೆದರು. ಪದವಿ ವಿಭಾಗದಲ್ಲಿ ಐಶ್ವರ್ಯಾ ಹೊನವಾಡ, ಮುದಿತ್ ಶರ್ಮಾ, ಸ್ವಾತಿ ಕುಮಾರಿ, ಸಹನಾ ಚೌಕಿಮಠ ವಿವಿಧ ವಿಷಯಗಳನ್ನು ತಲಾ 1 ಚಿನ್ನದ ಪದಕ ಪಡೆದರು.
ನಡೆದ ಘಟಿಕೋತ್ಸವದಲ್ಲಿ ಆನ್‌ಲೈನ್ ಮೂಲಕ ಎಂಬಿಬಿಎಸ್ 127 ಪದವಿ ವಿಧ್ಯಾರ್ಥಿಗಳು, 61 ಸ್ನಾತಕೋತ್ತರ, 11 ಸ್ನಾತಕೋತ್ತರ ಡಿಪ್ಲೋಮಾ, 2 ಎಫ್ ಇಎಸ್‌ಎಸ್, 12 ಪಿಎಚ್‌ಡಿ, 13 ಎಂಐಟಿ ಸೇರಿದಂತೆ 226 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ| ಎಂ.ಬಿ. ಪಾಟೀಲ ವಿತರಿಸಿದರು. ಉಪ ಕುಲಪತಿ ಡಾ| ಎಂ.ಎಸ್. ಬಿರಾದಾರ, ಆಡಳಿತ ಮಂಡಳಿ ಸದಸ್ಯರಾದ ಡಾ| ಸಿ.ಕೆ. ಕೊಕಾಟೆ, ಡಾ| ಆರ್.ಎಸ್. ಮುಧೋಳ, ಡಾ| ಕುಶಾಲ ದಾಸ್, ಡಾ| ಅರವಿಂದ ಪಾಟೀಲ ಉಪಸ್ಥಿತಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ, ಬೋರ್ಡ್ ಆಫ್ ಸ್ಟಡೀಸ್ ಸದಸ್ಯರು ಮಾತ್ರ ಹಾಜರಿದ್ದರು.
ಉಜ್ಮಾಬಾನುಗೆ 8 ಚಿನ್ನದ ಪದಕ
ವಿಜಯಪುರ: ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ 8ನೇ ಘಟಿಕೋತ್ಸವದಲ್ಲಿ ನಗರದ ಪ್ರತಿಭಾವಂತೆ ಉಜ್ಮಾಬಾನು ಮುಜಾವರ 8 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ. ನಗರದ ಬಡಿಕಮಾನ್ ಪ್ರದೇಶದ ಸಿವಿಲ್ ಗುತ್ತಿಗೆದಾರ ಅಬ್ದುಲ್ ಜಬ್ಟಾರ್ ಇವರ ಪುತ್ರಿ ಉಜ್ಮಾಬಾನು ಎಂಬಿಬಿಎಸ್ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದು 8 ಚಿನ್ನದ ಪದಕಗಳ ವಿಜೇತೆ ಎನಿಸಿದ್ದಾಳೆ. ಫಾರ್ಮಾಕಾಲಾಜಿ, ಗೈನಾಕಾಲಾಜಿ, ಪಿಡಿಯಾಟ್ರಿಕ್ಸ್, ಪೆಥಾಲಾಜಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧನೆ ಮೂಲಕ ಚಿನ್ನದ ಹುಡುಗಿ ಘಟಿಕೋತ್ಸವದ ಆಕರ್ಷಣೆಯ ಕೇಂದ್ರ ಬಿಂದುವಾದರು. ತಾಳಿಕೋಟೆ ತಾಲೂಕಿನ ಪೀರಾಪುರ ಗ್ರಾಮದ ಕಾಶೀನಾಥ ಸಂಗನಗೌಡ ಬಿರಾದಾರ ಅತ್ಯುತ್ತಮ ವಿದ್ಯಾರ್ಥಿ ಎಂದು 3 ಚಿನ್ನದ ಪದಕ ಪಡೆದು ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.