ಜ್ಞಾನ ದೇಗುಲಕ್ಕಿಲ್ಲದ ಭಾಗ್ಯ
ಲಾಕ್‌ಡೌನ್ ಸಡಿಲಿಕೆ ಬಳಿಕವೂ ತೆರೆಯದ ಗ್ರಂಥಾಲಯಗಳು
Team Udayavani, Jun 11, 2020, 5:55 AM IST
ಉಡುಪಿ: ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಗೊಂಡು ದೇಗುಲಗಳು ಸಹಿತ ಬಹುತೇಕ ಕ್ಷೇತ್ರಗಳು ತೆರೆದುಕೊಂಡಿವೆ. ಆದರೆ ಓದುಗರ ಜ್ಞಾನ ಹೆಚ್ಚಿಸುವ ಸಾರ್ವಜನಿಕ ಗ್ರಂಥಾಲಯಗಳು ಮಾತ್ರ ಇನ್ನೂ ಸಾರ್ವಜನಿಕರಿಗೆ ಬಾಗಿಲು ತೆರೆದುಕೊಂಡಿಲ್ಲ.
ಸರಕಾರದ
ಆದೇಶ ಬಂದಿಲ್ಲ
ಗ್ರಂಥಾಲಯಗಳನ್ನು ತೆರೆದು ಸಾರ್ವಜನಿಕರ ಬಳಕೆಗೆ ನೀಡುವಂತೆ ಸರಕಾರದಿಂದ ಇದುವರೆಗೆ ಯಾವುದೇ ಆದೇಶಗಳು ಗ್ರಂಥಾಲಯ ವಿಭಾಗಕ್ಕೆ ಬಂದಿಲ್ಲ. ಹೀಗಾಗಿ ಸರಕಾರದ ಆದೇಶ ಬಾರದೆ ಗ್ರಂಥಾಲಯಗಳನ್ನು ಸಾರ್ವಜನಿಕರ ಬಳಕೆಗೆ ನೀಡುತ್ತಿಲ್ಲ. ಗ್ರಂಥಾಲಯಗಳನ್ನು ತೆರೆಯಲು ಅವಕಾಶ ನೀಡುವಂತೆ ಗ್ರಂಥಾಲಯ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಹೋಗಿದ್ದು, ಅನುಮತಿಗಾಗಿ ಕಾಯುತ್ತಿರುವುದಾಗಿ ಗ್ರಂಥಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾ.22ರಿಂದ
ಸಾರ್ವಜನಿಕ ಸೇವೆ ರದ್ದು
ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೋವಿಡ್-19 ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚಿರು ವುದರಿಂದ ಸರಕಾರ ರಾಜ್ಯದ ಎಲ್ಲ ಗ್ರಂಥಾ ಲಯಗಳನ್ನು ಮುಚ್ಚಲು ಮಾ.22ರಂದು ಆದೇಶ ನೀಡಿತ್ತು. ಜತೆಗೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳ ಎರ ವಲು ಮತ್ತು ಹಿಂಪಡೆಯುವುದು, ಗ್ರಂಥಾಲಯಗಳ ಒಳಗೆ ಕುಳಿತು ಓದುವುದು ಸೇರಿದಂತೆ ಇತರ ಸೇವೆಗಳಿಗೆ ನಿರ್ಬಂಧ ಹೇರಲಾಗಿತ್ತು.
ರಾಜ್ಯದ 7,000 ಗ್ರಂಥಾಲಯಗಳು ಬಂದ್
ಜಿಲ್ಲಾ ಕೇಂದ್ರ ಗ್ರಂಥಾಲಯ, ನಗರ ಕೇಂದ್ರ ಗ್ರಂಥಾಲಯ, ತಾಲೂಕು ಕೇಂದ್ರ ಗ್ರಂಥಾಲಯ, ಗ್ರಾ.ಪಂ ಮಟ್ಟದ ಗ್ರಂಥಾಲಯಗಳು ಸೇರಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 155 ಗ್ರಂಥಾಲಯಗಳಿವೆ. ಜಿಲ್ಲೆಯಲ್ಲಿರುವ ತಾಲೂಕುಗಳ ಗ್ರಾ.ಪಂ ವ್ಯಾಪ್ತಿಗೆ ಒಂದರಂತೆ 147 ಗ್ರಂಥಾಲಯಗಳಿವೆ. ಜಿಲ್ಲಾ ಗ್ರಂಥಾಲಯ-1, ತಾಲೂಕು ಮಟ್ಟದ ಗ್ರಂಥಾಲಯ-3, ಹಿರಿಯಡ್ಕ ಸೇವಾ ಕೇಂದ್ರ ಗ್ರಂಥಾಲಯ, ಬ್ರಹ್ಮಗಿರಿಯ ಮಕ್ಕಳ ಸಮುದಾಯ ಕೇಂದ್ರ, ಜಿಲ್ಲಾ ಕಾರಾಗೃಹ ಸೇವಾ ಕೇಂದ್ರ, ನಗರಸಭೆಯ 35 ವಾರ್ಡ್ ವ್ಯಾಪ್ತಿಯಲ್ಲಿ 9 ಗ್ರಂಥಾ ಲಯಗಳು ಕಾರ್ಯಾಚರಿಸುತ್ತಿವೆ. ರಾಜ್ಯದಲ್ಲಿ ಸುಮಾರು 7,000 ಗ್ರಂಥಾಲಯಗಳಿವೆ.
ಇ-ಗ್ರಂಥಾಲಯ ಬಳಕೆ
ಲಾಕ್‌ಡೌನ್ ಅವಧಿಯಲ್ಲಿ ಇ- ಗ್ರಂಥಾಲಯ ಓದುಗರ ವರದಾನ ವಾಗಿದ್ದು, 2 ತಿಂಗಳಲ್ಲಿ 1.67 ಲಕ್ಷ ಜನರು ಇ-ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಂಡು ವಿವಿಧ ಪುಸ್ತಕಗಳನ್ನು ಓದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1,139 ಮಂದಿ ಪ್ರಯೋಜನ ಪಡೆದು ಕೊಂಡಿದ್ದಾರೆ.
ಗ್ರಂಥಾಲಯ ತೆರವಿಗೆ ಆಗ್ರಹ
ಲಾಕ್‌ಡೌನ್ ಸಡಿಲದಿಂದ ಎಫ್ಡಿಎ,ಎಸ್‌ಡಿಎ, ಕೆ-ಸೆಟ್, ಕೆಎಎಸ್, ಪೊಲೀಸ್, ಅಬಕಾರಿ, ರೈಲ್ವೆ ಇನ್ನಿತರ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಲು ಸರಕಾರ ಮುಂದಾಗಿದೆ.
ಈಗಾಗಲೇ ಲಾಕ್‌ಡೌನ್ ಸಡಿಲ
ಗೊಂಡ ಹಿನ್ನೆಲೆಯಲ್ಲಿ ಗ್ರಂಥಾಲಯ ಗಳನ್ನು ಆರಂಭಿಸಲು ಪರೀಕ್ಷಾರ್ಥಿಗಳು ಆಗ್ರಹಿಸಿದ್ದಾರೆ. ಪುಸ್ತಕ ಓದುಗರು ಕೂಡ ಗ್ರಂಥಾಲಯ ತೆರವಿಗೆ ಆಗ್ರಹಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾ ರಾಗಲು ಅಭ್ಯರ್ಥಿಗಳಿಗೆ ಸಾರ್ವಜನಿಕ ಗ್ರಂಥಾಲಯದ ಅತಿ ಅಗತ್ಯ ಇರುವು ದರಿಂದ ಇನ್ನಾದರೂ ಅಧಿಕಾರಿಗಳು ಇದರತ್ತ ಗಮನಹರಿಸಬೇಕಾಗಿದೆ.
ಸಾರ್ವ ಜನಿಕರಿಗೆ ಅವಕಾಶವಿಲ್ಲ
ಸರಕಾರದ ಆದೇಶಕ್ಕಾಗಿ ಗ್ರಂಥಾಲಯಗಳು ಕಾಯುತ್ತಿವೆ. ಜಿಲ್ಲೆಯ ವಿವಿಧ ಕಡೆಗಳಲ್ಲಿನ ಗ್ರಂಥಾಲಯಗಳ ಬಾಗಿಲುಗಳನ್ನು ಆಯಾ ಗ್ರಂಥಾಲಯ ಮೇಲ್ವಿಚಾರಕರು ತೆರೆಯುತ್ತಿದ್ದಾರೆ. ಸ್ಟಾಫ್ ವೆರಿಪಿಕೇಶನ್, ಇತ್ಯಾದಿ ಚಟುವಟಿಕೆಗಳನ್ನು ಸಿಬಂದಿಗಳು, ಅಧಿಕಾರಿಗಳು ನಡೆಸುತ್ತಿದ್ದಾರೆ. ಆದರೆ ಸಾರ್ವಜನಿಕರಿಗೆ ಯಾವುದೇ ಸೇವೆಗಳಿಗೆ ಅವಕಾಶವಿಲ್ಲ .ಕೆಲವೊಂದು ಕಡೆಗಳ ಗ್ರಂಥಾಲಯ ಗಳು ಬಾಗಿಲು ತೆರೆಯುತ್ತಲೇ ಇಲ್ಲ
ಪ್ರಸ್ತಾವನೆ ಸಲ್ಲಿಕೆ
ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಗ್ರಂಥಾಲಯಗಳ ಬಾಗಿಲು ತೆರೆಯಲು ಅವಕಾಶ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಪ್ಪಿಗೆ ಸೂಚಿತ ಅನಂತರವೇ ಗ್ರಂಥಾಲಯ ತೆರೆಯಲಾಗುವುದು.
-ನಳಿನಿ ಜಿ.ಐ.,
ಮುಖ್ಯ ಗ್ರಂಥಾಲಯ ಅಧಿಕಾರಿ
ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.