ರಕ್ತ ಹೆಪ್ಪುಗಟ್ಟುವಿಕೆ ಕೋವಿಡ್-19 ಹೊಸ ಮುಖ!
Team Udayavani, Apr 25, 2020, 6:45 AM IST
ನ್ಯೂಯಾರ್ಕ್: ಕೋವಿಡ್-19 ಸೋಂಕಿನ ಲಕ್ಷಣಗಳು ದಿನದಿಂದ ದಿನಕ್ಕೆ ವೈದ್ಯ ಜಗತ್ತಿಗೆ ಸವಾಲಾಗಿ ಪರಿಣಮಿಸಿವೆ. ವೈರಸ್ ದೇಹವನ್ನು ಸೇರಿಕೊಂಡ ಮೇಲೆ, ಅದು ನೇರವಾಗಿ ವಿವಿಧ ಅಂಗಾಂಗಗಳ ರಕ್ತದಲ್ಲಿ ವಿಚಿತ್ರ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ.
ಸೋಂಕಿತನ ರಕ್ತ ದಪ್ಪ ಆಗುವ, ಹೆಪ್ಪುಗಟ್ಟುವ ಹೊಸ ಆತಂಕ ಸೃಷ್ಟಿಯಾಗುತ್ತಿದೆ.49ಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಲ್ಲೇ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದ್ದು, ಈ ಬೆಳವಣಿಗೆ ಯಿಂದಾಗಿ ಅಮೆರಿಕದಲ್ಲಿ ಕೆಲವು ಸೋಂಕಿತರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಅಲ್ಲದೆ, ಕಿಡ್ನಿಗೆ ಸಂಪರ್ಕ ಬೆಸೆದ ಮೂತ್ರದ ನಳಿಕೆಗಳನ್ನೂ ವೈರಾಣುಗಳು ಹೆಪ್ಪುಗಟ್ಟಿಸುತ್ತಿವೆ.
ರಕ್ತರಹಿತ ಶ್ವಾಸಕೋಶ: ಸೋಂಕಿತನ ಶ್ವಾಸಕೋಶವು ರಕ್ತರಹಿತವಾಗಿ ಗೋಚರಿಸುವುದನ್ನು ಶ್ವಾಸಕೋಶ ತಜ್ಞರು ಗಮನಿಸಿದ್ದಾರೆ. ಪ್ರತಿಸಲ ಶ್ವಾಸಕೋಶ, ಉಸಿರನ್ನು ಎಳೆದು ಹೊರಬಿಡುವಾಗ, ಅಲ್ಲಿ ರಕ್ತದ ಚಲನೆಯೂ ಅಷ್ಟೇ ಸರಾಗವಾಗಿರುತ್ತದೆ. ಆದರೆ, ಕೋವಿಡ್-19 ಸೋಂಕಿತರ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ, ಉಸಿರಾಟಕ್ಕೆ ಕುತ್ತು ತರುತ್ತಿದೆ.
ಹೆಪ್ಪುಗಟ್ಟಿದ ರಕ್ತವನ್ನು ತೆಳುಗೊಳಿಸುವ ಔಷಧಗಳು ಇವೆಯಾದರೂ, ಆ ಪ್ರಯೋಗಕ್ಕೂ ವೈದ್ಯರು ಮುಂದಾಗುತ್ತಿಲ್ಲ. ಈ ಔಷಧದ ಪರಿಣಾಮದಿಂದಾಗಿ, ಮೆದುಳು ಅಥವಾ ಇತರೆ ಅಂಗಾಂಗಗಳಲ್ಲಿ ರಕ್ತಸ್ರಾವ ಆಗುವ ಸಾಧ್ಯ ತೆಯೂ ಇರುವುದರಿಂದ, ಆ ಬಗ್ಗೆ ಹೆಚ್ಚಿನ ಅಧ್ಯ ಯನ ನಡೆದ ಬಳಿಕವಷ್ಟೇ, ಔಷಧ ಪ್ರಯೋಗಿ ಸಬೇಕು ಎನ್ನುವುದು ಅಮೆರಿಕದ ಮೌಂಟ್ ಸಿನಾಯ್ ಆಸ್ಪತ್ರೆಯ ತಜ್ಞರ ಅಭಿಪ್ರಾಯ.
ಮಕ್ಕಳ ಬೆರಳುಗಳ ಊರಿಯೂತ
ಕೋವಿಡ್ ಟೋಸ್! ಕೋವಿಡ್-19 ಸೋಂಕಿನ ಈ ಲಕ್ಷಣ ಇಟಲಿಯಲ್ಲಿ ಮೊದಲು ಕಂಡು ಬಂದು, ಈಗ ಅಮೆರಿಕದ ಸೋಂಕಿತ ಮಕ್ಕಳನ್ನು ಚಿಂತೆಗೆ ತಳ್ಳಿದೆ. ಕೋವಿಡ್-19 ತಗುಲಿದ ಮಕ್ಕಳ ಕಾಲಿನ ಬೆರಳುಗಳು ಉರಿ ಯೂತದಿಂದಾಗಿ ಕೆಂಪೇರುತ್ತಿವೆ. ಕಾಲಿನ ಬೆರಳುಗಳನ್ನು ನೋಡಿಯೇ, ಕೆಲವು ಚರ್ಮತಜ್ಞರು ಸೋಂಕು ತಗುಲಿ ದೆಯಾ, ಇಲ್ಲವಾ ಎಂದು ಹೇಳುವಷ್ಟು, ಈ ಲಕ್ಷಣ ಸಾಮಾನ್ಯವಾಗುತ್ತಿದೆ. ಊತ ದೊಂದಿಗೆ ಬೆರಳಿನ ಬಣ್ಣವೂ ಬದಲಾಗು ತ್ತಿದೆ. ಮೇಲ್ನೋಟಕ್ಕೆ ಕೆಮ್ಮು, ನೆಗಡಿ, ಗಂಟಲು ಕೆರೆತ, ಜ್ವರ- ಇವ್ಯಾವ ಲಕ್ಷಣವೂ ಇಲ್ಲದೆ, ಕೋವಿಡ್-19 ಇಂಥ ಬೇರೆ ಬೇರೆ ಲಕ್ಷಣಗಳನ್ನು ಹೊರಹಾಕುತ್ತಿರುವುದು ವೈದ್ಯರ ತಲೆಬಿಸಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.