![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Dec 8, 2023, 12:40 AM IST
ಕಾಸರಗೋಡು: ರಾಜ್ಯ ಸರಕಾರದ ಎಲ್ಲ ಕಚೇರಿಗಳಲ್ಲಿ ನಾಮಫಲಕಗಳನ್ನು ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶಿ ಸುವಂತೆ ಅಧಿಕಾರಿ ಆಡಳಿತ ಸುಧಾರಣೆ ಇಲಾಖೆ ನಿರ್ದೇಶ ನೀಡಿದೆ.
ನಾಮಫಲಕದ ಅರ್ಧ ಭಾಗದಲ್ಲಿ ಮಲಯಾಳದಲ್ಲೂ, ಇನ್ನರ್ಧ ಭಾಗದಲ್ಲಿ ಇಂಗ್ಲಿಷ್‌ನಲ್ಲೂ ಪ್ರದರ್ಶಿಸಬೇಕು. ಅಲ್ಲದೆ ಸರಕಾರಿ ವಾಹನಗಳಲ್ಲಿ ಮುಂದೆ ಮತ್ತು ಹಿಂದೆ ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ನಾಮಫಲಕ ಅಳವಡಿಸಬೇಕೆಂದು ತಿಳಿಸಿದೆ.
ಕಚೇರಿಗಳ ಮೊಹರುಗಳು, ಅಧಿಕಾರಿಗಳ ಹೆಸರು ಮತ್ತು ಅವರು ವಹಿಸುವ ಔದ್ಯೋಗಿಕ ಸ್ಥಾನದ ಮೊಹರುಗಳನ್ನು ಇಂಗ್ಲಿಷ್ ಮತ್ತು ಮಲಯಾಳದಲ್ಲೂ ಇರಬೇಕು. ಸರಕಾರಿ ಕಚೇರಿಗಳ ಹಾಜರು ಪಟ್ಟಿ ಇತ್ಯಾದಿ ಎಲ್ಲ ರಿಜಿಸ್ಟರ್ ಪುಸ್ತಕಗಳನ್ನೂ ಮಲಯಾಳದಲ್ಲಿ ತಯಾರಿಸಬೇಕು. ಮಾತ್ರವಲ್ಲ ಎಲ್ಲ ಕಡತಗಳನ್ನು ಪೂರ್ಣವಾಗಿ ಮಲಯಾಳದಲ್ಲಿರಬೇಕೆಂದು ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಈ ಸುತ್ತೋಲೆಯು ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡು ಜಿಲ್ಲೆಗೂ ಅನ್ವಯವಾಗಲಿದೆ. ಜಿಲ್ಲೆಯ ಎಲ್ಲ ಸರಕಾರಿ ಕಚೇರಿ ಮತ್ತು ಅವುಗಳ ವಾಹನಗಳಲ್ಲಿ ಕನ್ನಡ ನಾಮ ಫಲಕಗಳು ಮಾಯವಾಗಲಿವೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡಿನಲ್ಲೂ ಇದು ಕಡ್ಡಾಯವಾಗಲಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.