Bank of Barodaದಿಂದ ಭರ್ಜರಿ ಫೆಸ್ಟಿವ್ ಆಫರ್ -‘BOB’ ಸಂಗ್ ತ್ಯೋಹಾರ್ ಕಿ ಉಮಂಗ್’

ಬ್ಯಾಂಕ್ ಆಫ್ ಬರೋಡ ಬಹಳ ಕಡಿಮೆ ಬಡ್ಡಿ ದರಗಳಿಗೆ ಸಾಲಗಳ ಆಫರ್ ನೀಡುತ್ತಿದೆ

Team Udayavani, Sep 14, 2023, 2:37 PM IST

Bank of Barodaದಿಂದ ಭರ್ಜರಿ ಫೆಸ್ಟಿವ್ ಆಫರ್ -‘BOB’ ಸಂಗ್ ತ್ಯೋಹಾರ್ ಕಿ ಉಮಂಗ್’

ಬೆಂಗಳೂರು: ಬ್ಯಾಂಕ್ ಆಫ್ ಬರೋಡ ಈ ಬಾರಿಯ ಹಬ್ಬದ ಸೀಸನ್‌ಗೆ ಒಳ್ಳೆಯ ಆಫರ್‌ಗಳನ್ನು ಗ್ರಾಹಕರ ಮುಂದಿಟ್ಟಿದೆ. ಡಿಸ್ಕೌಂಟ್ ಬಡ್ಡಿದರದಲ್ಲಿ ಗೃಹಸಾಲ, ವಾಹನ ಸಾಲ, ಶಿಕ್ಷಣ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಆಫರ್ ಮಾಡಿದೆ. ಹಾಗೆಯೇ, ನಾಲ್ಕು ವಿಶೇಷ ಸೇವಿಂಗ್ಸ್ ಅಕೌಂಟ್‌ಗಳನ್ನೂ ಚಾಲನೆಗೊಳಿಸಿದೆ. ಇವುಗಳ ಜೊತೆಗೆ ಈಗಿರುವ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ ಗಳಿಗೂ ವಿವಿಧ ಡಿಸ್ಕೌಂಟ್‌ಗಳನ್ನು ನೀಡುವುದಾಗಿ ತಿಳಿಸಿದೆ. ಡಿಸೆಂಬರ್ 31, 2023ರವರೆಗೂ ಈ ಆಫರ್‌ಗಳು ಇರಲಿವೆ.

ಇದನ್ನೂ ಓದಿ:Cash On Delivery ವೇಳೆ ಈ…ದಿನಾಂಕದಿಂದ 2000 ಮುಖಬೆಲೆಯ ನೋಟನ್ನು ಸ್ವೀಕರಿಸಲ್ಲ: ಅಮೆಜಾನ್

ಬ್ಯಾಂಕ್ ಆಫ್ ಬರೋಡ ಬಹಳ ಕಡಿಮೆ ಬಡ್ಡಿ ದರಗಳಿಗೆ ಸಾಲಗಳ ಆಫರ್ ನೀಡುತ್ತಿದೆ. ಶೇ. 8.40ರಿಂದ ಸಾಲದ ಬಡ್ಡಿ ದರ ಆರಂಭವಾಗುತ್ತದೆ. ಈ ಬಾರಿಯ ಹಬ್ಬಕ್ಕೆ ಬ್ಯಾಂಕ್ ಆಫರ್ ಬರೋಡ ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡಿದೆ. ‘ಬಾಬ್ ಕೆ ಸಂಗ್, ತ್ಯೋಹಾರ್ ಕೀ ಉಮಂಗ್’ ಎಂಬ ಅಭಿಯಾನ ಆರಂಭಿಸಿರುವ ಬ್ಯಾಂಕ್ ಆಫ್ ಬರೋಡ, ಡಿಸೆಂಬರ್ 31ರವರೆಗೂ ಕಡಿಮೆ ಬೆಲೆಯ ಗೃಹಸಾಲ, ವಾಹನ ಸಾಲ ಮತ್ತು ಶಿಕ್ಷಣ ಸಾಲಗಳನ್ನು ನೀಡುತ್ತಿದೆ. ಇದರ ಜೊತೆಗೆ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳಿಗೂ ಭರ್ಜರಿ ಡಿಸ್ಕೌಂಟ್‌ಗಳನ್ನೂ ಕೊಡುತ್ತಿದೆ. ಹಾಗೆಯೇ, ನಾಲ್ಕು ಹೊಸ ಸೇವಿಂಗ್ಸ್ ಖಾತೆಗಳನ್ನೂ ಬಿಡುಗಡೆ ಮಾಡಿದೆ.

ಹಬ್ಬದ ಕೊಡುಗೆಯಾಗಿ ಬ್ಯಾಂಕ್ ಆಫ್ ಬರೋಡಾ ಮಾಡುತ್ತಿರುವ ಆಫರ್‌ನಲ್ಲಿ ಸಾಲದ ಬಡ್ಡಿದರ ಬಹಳ ಇಳಿಕೆ ಮಾಡಲಾಗಿದೆ. ಅದರ ಗೃಹಸಾಲ ಶೇ. 8.40ರಿಂದ ಆರಂಭವಾಗುತ್ತದೆ. ಇನ್ನು, ಕಾರ್ ಲೋನ್ ದರ ಶೇ. 8.70ರಿಂದ ಆರಂಭವಾಗುತ್ತದೆ. ವಿಶೇಷ ಅಂದರೆ ಗೃಹಸಾಲ ಮತ್ತು ವಾಹನ ಸಾಲಗಳಿಗೆ ಪ್ರೋಸಸಿಂಗ್ ಫೀಯಿಂದ ವಿನಾಯಿತಿ ನೀಡಲಾಗಿದೆ. ಬಾಬ್ ನೀಡುವ ಶಿಕ್ಷಣ ಸಾಲಕ್ಕೆ ಬಡ್ಡಿದರ ಶೇ. 8.55ರಿಂದ ಶುರುವಾಗುತ್ತದೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಇಲ್ಲದೇ ಇನ್ನೂ ಕಡಿಮೆ ಬಡ್ಡಿದರಕ್ಕೆ ಶಿಕ್ಷಣ ಸಾಲವನ್ನು ಬ್ಯಾಂಕ್ ಆಫ್ ಬರೋಡಾ ಆಫರ್ ಮಾಡಿದೆ.

ಈ ಬ್ಯಾಂಕ್‌ನ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಶೇ. 10.10ರಿಂದ ಶುರುವಾಗುತ್ತದೆ. ಗರಿಷ್ಠ ೨೦ ಲಕ್ಷ ರೂ.ವರೆಗೂ ಸಾಲ ಪಡೆಯಬಹುದು. ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ. ಫ್ಲೋಟಿಂಗ್ ರೇಟ್ ಜೊತೆಗೆ ಫಿಕ್ಸೆಡ್ ರೇಟ್ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ. ಇದು ವೈಯಕ್ತಿಕ ಸಾಲ ಪಡೆಯುವವರಿಗೆ ಮಾತ್ರವಲ್ಲ, ವಾಹನ ಸಾಲ ಪಡೆಯುವವರಿಗೂ ಅನ್ವಯ ಆಗುತ್ತದೆ.
ಫೆಸ್ಟಿವ್ ಆಫರ್ ಆಗಿ ಬ್ಯಾಂಕ್ ಆಫ್ ಬರೋಡಾ ಲೈಟ್ ಸೇವಿಂಗ್ಸ್ ಅಕೌಂಟ್, ಬ್ರೋ ಸೇವಿಂಗ್ಸ್ ಅಕೌಂಟ್, ಪರಿವಾರ್ ಅಕೌಂಟ್ ಮತ್ತು ಎನ್‌ಆರ್‌ಐ ಪವರ್‌ಪ್ಯಾಕ್ ಅಕೌಂಟ್, ಹೀಗೆ ನಾಲ್ಕು ಉಳಿತಾಯ ಖಾತೆಗಳನ್ನು ಬಿಒಬಿ ಆರಂಭಿಸಿದೆ. ಇದರಲ್ಲಿ ಬಿಒಬಿ ಲೈಟ್ ಮತ್ತು ಬ್ರೋ ಸೇವಿಂಗ್ಸ್ ಅಕೌಂಟ್‌ಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಎಂಬುದು ಇರುವುದಿಲ್ಲ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.