ಚಂದನವನಕ್ಕೆ RX 100 ಸುಂದರಿ: ಡಾಲಿ ಸಿನಿಮಾದಲ್ಲಿ ಬೋಲ್ಡ್ ಬೆಡಗಿ
Team Udayavani, Aug 8, 2021, 4:08 PM IST
ಬೆಂಗಳೂರು : ನಟ ಡಾಲಿ ಧನಂಜಯ್ ನಿರ್ಮಾಣದ ‘ಹೆಡ್ ಬುಷ್’ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದಾರೆ. ಡಾಲಿ ತಮ್ಮ ಚೊಚ್ಚಲ ನಿರ್ಮಾಣ ಚಿತ್ರಕ್ಕೆ ಬಹುಭಾಷಾ ಬೆಡಗಿಯನ್ನು ಕರೆತಂದಿದ್ದಾರೆ.
ಅಂದಹಾಗೆ ಹೆಡ್ ಬುಷ್ ಚಿತ್ರದಲ್ಲಿ ಪಾಯಲ್ ರಜಪೂತ್ ನಾಯಕಿಯಾಗಿ ನಟಿಸಲಿದ್ದಾರೆ. ಪಂಜಾಬಿ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ಪಾಯಲ್ ಇದೀಗ, ಹೆಡ್ ಬುಷ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಪಾಯಲ್ ರಜಪೂತ್ ನಟಿಸಿದ್ದ ತೆಲುಗು ಚಿತ್ರ ಆರ್ ಎಕ್ಸ್ 100 ಸಖತ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಈ ನಟಿಯ ಫೇಮ್ ಕೂಡ ಹೆಚ್ಚಾಯಿತು.
ಇನ್ನು ಅಗ್ರಿ ಶೀಧರ್ ಕಥೆ-ಚಿತ್ರಕಥೆ ಇರುವ ಹೆಡ್-ಬುಷ್ ಚಿತ್ರ ಮೊದಲ ಲಾಕ್ಡೌನ್ ಗಿಂತಲೂ ಮೊದಲೇ ಘೋಷಣೆಯಾಗಿತ್ತು. ಚಿತ್ರದಲ್ಲಿ ಬೆಂಗಳೂರಿನ ಮಾಜಿ ಡಾನ್.ಎಂ.ಪಿ.ಜಯರಾಜ್ ಅವರ ಪಾತ್ರದಲ್ಲಿ ಧನಂಜಯ್ ಅವರು ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿತ್ತು. ಈ ಚಿತ್ರದ ಚಿತ್ರೀಕರಣ ಇದೇ ಆಗಸ್ಟ್ 9 ರಂದು ಆರಂಭವಾಗಲಿದ್ದು, 23ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
Welcome on board #PayalRajput for the team #HeadBush ?? @daali_pictures @starlingpayal pic.twitter.com/GvkNtCE3sx
— Dhananjaya (@Dhananjayaka) August 8, 2021
ಚಿತ್ರವೊಂದಲ್ಲಿ ಧನಂಜಯ್ ಅವರು ಇದೇ ಮೊದಲ ಬಾರಿಗೆ ಬಂಡವಾಳ ಹೂಡುತ್ತಿದ್ದಾರೆ. ಆದರೆ, ಪೂರ್ಣ ಪ್ರಮಾಣದ ಬದಲಿಗೆ ಸೋಮಣ್ಣ ಎಂಬ ಪಾಲುದಾರರೊಬ್ಬರ ಜೊತೆ ಸೇರಿ ಸಿನಿಮಾ ನಿರ್ಮಾಣಕ್ಕೆ ಧನಂಜಯ್ ಅವರು ಕೈಹಾಕಿದ್ದಾರೆ.
ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜತೆಯಾಗಿ ಹೆಡ್-ಬುಷ್ ಚಿತ್ರವನ್ನು ನಿರ್ಮಿಸುತ್ತಿವೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೆಡ್-ಬುಷ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಪೋಸ್ಟರ್’ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.
ಎರಡು ಪಾರ್ಟ್‌ಗಳಲ್ಲಿ ಚಿತ್ರ ತಯಾರಾಗಲಿದ್ದು, ಹದಿಹರೆಯದ ವಯಸ್ಸಿನ ಪಾತ್ರದಲ್ಲಿ ಆಕಾಶ್ ಅವರು ನಡಿಸುತ್ತಿದ್ದಾರೆ. ಈ ಭಾಗದ ಚಿತ್ರೀಕರಣವನ್ನು ಮೊದಲ ಹಂತದಲ್ಲೇ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಚಿತ್ರೀಕರಣಕ್ಕೆ ಸ್ಥಳದ ಆಯ್ಕೆ ಕೂಡ ಅಂತಿಮಗೊಂಡಿದ್ದು, ಮೊದಲ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಇನ್ನು ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ನಟಿಸಿರುವ ‘ರತ್ನನ್ ಪರ್ಪಂಚ’, ‘ಸಲಗ’, ‘ತೋತಾಪುರಿ’ ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ. ‘ಡಾಲಿ’, ‘ಬಡವ ರ್ಯಾಸ್ಕಲ್’, ‘ಮಾನ್ಸೂನ್ ರಾಗ’, ‘ಭೈರಾಗಿ’ ಸಿನಿಮಾಗಳ ಚಿತ್ರೀಕರಣ ಪ್ರಗತಿಯಲ್ಲಿದೆ. ಕನ್ನಡದ ಜೊತೆಗೆ ತೆಲುಗಿನ ‘ಪುಷ್ಪ’ ತಮಿಳಿನ ‘ಪಾಯುಂ ಒಲಿ ನೀ ಎನಕ್ಕುಂ’ ಸಿನಿಮಾಗಳಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.