ಪರಿಪೂರ್ಣತೆಯೊಂದಿಗೆ ಸಮದರ್ಶನ ಕಲಿಸೀತು ಓದು

Team Udayavani, Mar 13, 2021, 5:50 AM IST

ಪರಿಪೂರ್ಣತೆಯೊಂದಿಗೆ ಸಮದರ್ಶನ ಕಲಿಸೀತು ಓದು

ಸುಸಂಸ್ಕೃತ ಸಮಾಜದ ಚಟುವಟಿಕೆಗಳಲ್ಲಿ ಓದು ಅಗ್ರಮಾನ್ಯವಾದುದು ಎಂದರೆ ಒಪ್ಪಬೇಕಾದ್ದೇ. ಲಿಪಿಯ ಉಗಮವಾದಂದಿನಿಂದ (ಸುಮಾರು ಕ್ರಿ.ಪೂ. 3200-ಮೆಸೆಪೇಟೇಮಿಯಾದ ಕ್ಯೂನಿ ಫಾರ್ಮ್ ಲಿಪಿ) ನಿಧಾನವಾಗಿ ಓದುವ ಪ್ರಕ್ರಿಯೆ ಆರಂಭವಾಗಿದ್ದಿರಬೇಕು. ಮೊದಲು ಓದುವ ಪರಿಕರ ಗಳು ಕಡಿಮೆಯಾಗಿದ್ದರಿಂದ ವಾಚನ, ಪಠಣ, ಪ್ರವಚನ ಗಳನ್ನು ಆಲಿಸುವವರೇ ಹೆಚ್ಚಾಗಿದ್ದಿರಬೇಕು. ಮುಂದೆ ಲಿಪಿ ಕ್ರಾಂತಿಯಾಗಿ ಅಕ್ಷರಗಳು ಮುದ್ರಿತವಾಗಿ ಪುಸ್ತಕಗಳ ರೂಪದಲ್ಲಿ ದೊರಕಲಾರಂಭಿಸಿದಂದಿನಿಂದ ಓದುವ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಗಳಾದವು.

ಓದು ಮತ್ತು ವಿದ್ಯೆಗೆ ಅವಿನಾಭಾವ ಸಂಬಂಧ. ಆಧುನಿಕ ಪ್ರಪಂಚದಲ್ಲಿ ಓದಿನ ಪರಿಕರಗಳು ಅಸಂಖ್ಯ, ವೈವಿಧ್ಯಮಯ. ಪ್ರಾಚೀನ ಗ್ರಂಥಗಳು, ಕಾವ್ಯ-ಪುರಾಣಗಳು, ಸಾಹಿತ್ಯ, ವಿಜ್ಞಾನ, ಕಾದಂಬರಿ, ಕತೆ, ಪ್ರವಾಸಕಥನ ಮುಂತಾದ ಜೀವನಾನುಭವಗಳ ಮೂರ್ತರೂಪವಾಗಿ ಮೂಡಿಬರುವ ಪುಸ್ತಕಗಳ ಪುಟ ಬಿಡಿಸಿದಂತೇ ಮನದ ಕಣ್ಣಿಗೆರಗುವ ನವಲೋಕದ ದರ್ಶನ ಯಾವ “ವಿಶ್ವರೂಪ ದರ್ಶನ’ಕ್ಕೂ ಕಡಿಮೆಯೆನಿಸದು ಎಂಬುದು ಪ್ರಾಮಾಣಿಕ ಓದುಗನಿಗಷ್ಟೇ ಅರ್ಥವಾದೀತು. ಮನುಷ್ಯನ ಓದು ಸೀಮಿತವಾದರೂ ಓದಿನ ದಾರಿಯಲ್ಲಿ ಹೊಸ ಹೊಸ ವಿಚಾರಗಳು ಮೊಳೆತಾವು. ಸೊರಗಿದ ಮನಸ್ಸಿಗೆ ತಂಪೆರೆ ದಾವು. ಚಿಂತನೆಗೆ ಹಚ್ಚುವ ಪ್ರತಿಯೊಂದು ಕೃತಿಯೂ ಓದುಗನನ್ನು ಚುರುಕಾಗಿರಿಸುವುದರೊಂದಿಗೆ ಅಸದೃಶ ಆನಂದವನ್ನು ನೀಡುವುದಂತೂ ಖಂಡಿತ.

ದಿನಪತ್ರಿಕೆಯ ಓದಿನಿಂದ ದಿನಾರಂಭ
ವಿದ್ಯುನ್ಮಾನ ಉಪಕರಣಗಳನ್ನು ಬಿಟ್ಟರೆ ಸಮಕಾಲೀನ ಜಗತ್ತಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ಎಂದರೆ ಅದು ದಿನಪತ್ರಿಕೆಗಳೇ. ಜಗತ್ತಿನ ಆಗುಹೋಗುಗಳನ್ನು ಮೈತುಂಬಿ ಮನೆಯೊಳಗೆ ಬಂದು ಲೋಕದರ್ಶನ ಮಾಡಿಸುವ ಈ “ಪವಾಡ ಪುರುಷ’ನ ದರ್ಶನ ಬೆಳಗಿನ ವೇಳೆ ಆಗಲಿಲ್ಲವೆಂದಾದರೆ ಓದುಗನಿಗೆ ಅದೇನೋ ಚಡಪಡಿಕೆ. ಸದಾ ಮೊಬೈಲ್‌, ಐಪಾಡ್‌ಗಳಲ್ಲೇ ತಡಕಾ ಡುವ ನಮ್ಮ ಬಾಲರಿಗೆ, ಯುವಕರಿಗೆ ದಿನಪತ್ರಿಕೆ ಓದಿಸುವ ಪ್ರಯತ್ನ ಹಿರಿಯರು ಮಾಡಬೇಕಿದೆ.

ಹಿರಿಯರ ಮಾರ್ಗದರ್ಶನದೊಂದಿಗೆ ಉತ್ತಮ ಆಯ್ಕೆ ಮಾಡಿ ತೊಡಗುವ ಪುಸ್ತಕದ ಓದು, ಹೊಸ ಲೋಕ ದರ್ಶನ ಮಾಡಿಸುವ ಮಾಹಾ ಮಾಂತ್ರಿಕ; ತಲೆಕೆಡಿಸುವ ಯೋಚನೆಗಳಿಗೆ ತಡೆಯೊಡ್ಡಿ ನೇರ್ಪುಗೊಳಿಸುವ ಚಿಕಿತ್ಸಕ; ಮನಸ್ಸಿಗೆ ಮುದ ನೀಡಿ ಹುರುಪುಗೊಳಿಸುವ ಜೀವರಸ; ಎಲ್ಲೆಲ್ಲೋ ಓಡುವ ಮನಸ್ಸೆಂಬ ಹುಚ್ಚು ಕುದುರೆಗೆ ಬೆಸೆದ ಕಡಿವಾಣ; ಉದ್ವೇಗಗಳಿಗೆ ತಂಪೆರೆದು ಶಾಂತಗೊಳಿಸುವ ಮಹಾಮಂತ್ರ; ಮುದುಡಿ ಕುಳಿತ ಮನಸ್ಸಿಗೆ ಖುಶಿ ಕೊಡುವ ಮನರಂಜನೆ, ನೋವುಗಳಿಗೆ ಮದ್ದು ಹಚ್ಚಿ ಮರೆಸುವ ಮನೋವೈದ್ಯ; ವಿವಿಧ ಸಾಧ್ಯತೆಗಳಿಗೆ ಬೆಳಕು ಹಿಡಿಯುವ ದೀವಟಿಗೆ.

ಉತ್ತಮ ಓದು ಬಾಯ್ಬಡುಕನನ್ನು ಮೌನಿಯಾಗಿಸೀತು, ವಿಚಾರ ವಿಮರ್ಶೆಗೆ ಪ್ರೇರೇಪಿಸೀತು, ಪರಿಪೂರ್ಣತೆಯೊಂದಿಗೆ ಸಮದರ್ಶನ ಕಲಿಸೀತು. ಶಬ್ದ ಸಂಪತ್ತು, ವಾಗ್ಮಿತೆ ಓದಿನ ಕೊಡುಗೆ, ಸಮಸ್ಯೆಗಳಿಗೆ ಸುಲಭ ನಿವಾರಣ ಸೂತ್ರ ಓದಿನಿಂದ. ಮಾಹಿತಿಗಳ ನಿಖರತೆಗೆ ಓದಬೇಕು. ಅದೆಷ್ಟೋ ಬದುಕಿನ ಪ್ರಶ್ನೆಗಳಿಗೆ ಓದು ಉತ್ತರ ನೀಡೀತು. ದಿನ ಬೆಳಗಾದರೆ ದ್ವೇಷ, ಮತ್ಸರ, ತಾರತಮ್ಯ, ಗೊಂದಲಗಳಿಗೆ ಎಣೆಯಾಗುವ ಮನಸ್ಸಿಗೆ ಕಿಂಚಿತ್ತಾದರೂ ಶಾಂತಿ ನೀಡುವ ಹವ್ಯಾಸ ಅದು ಉತ್ತಮ ಓದೇ ಸರಿ. ಆದುದರಿಂದಲೇ ಇದು ಬರೀ ಓದಲ್ಲೋ ಅಣ್ಣ !

– ಪದ್ಯಾಣ ಪರಮೇಶ್ವರ ಭಟ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.