ಮಿನಿ ವಿಧಾನಸೌಧದಲ್ಲಿ ಸೌಕರ್ಯಗಳ ಮರೀಚಿಕೆ!

 ಶೌಚಕ್ಕೆ ಮರ-ಸಂದಿಗೊಂದಿಯೇ ಗತಿ: ದಾಹ ನೀಗಿಸಿಕೊಳ್ಳಲು ಬಾಟಲ್ ನೀರೇ ಅನಿವಾರ್ಯ

Team Udayavani, May 17, 2022, 11:40 AM IST

4toilet

ಹುಮನಾಬಾದ: ವಿವಿಧ ಕೆಲಸ ಕಾರ್ಯಗಳಿಗೆ ಪಟ್ಟಣದ ಮಿನಿ ವಿಧಾನಸೌಧಕ್ಕೆ ಹೋಗಬೇಕಾದರೆ ಮನೆಯಿಂದಲೇ ನೀರಿನ ಬಾಟಲ್ ತೆಗೆದುಕೊಂಡು ಹೋಗಬೇಕು. ಇಲ್ಲವೇ ಬಾಯಾರಿಕೆಯಿಂದ ಪರದಾಡುವುದು ಖಚಿತ. ಇನ್ನೂ ಇಲ್ಲಿ ಶೌಚಾಲಯ ಹೋಗಬೇಕೆಂದೆನಿಸಿದರೆ ಸುತ್ತಲಿನ ಮರ, ಸಂದಿಗೊಂದಿ ಹುಡುಕುವುದು ಅನಿವಾರ್ಯವಾಗಿದೆ.

ಪಟ್ಟಣದ ಮಿನಿ ವಿಧಾನಸೌಧಕ್ಕೆ ಪ್ರತಿ ದಿನ ತಾಲೂಕಿನ ನೂರಾರು ಜನರು ನಾನಾ ಕೆಲಸದ ನಿಮಿತ್ತ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಜನರಿಗೆ ತಾಲೂಕಾಡಳಿತ ನೀರಿನ ವ್ಯವಸ್ಥೆ ಬಗ್ಗೆ ತಲೆಕಡೆಸಿಕೊಂಡಿಲ್ಲ. ಅಧಿಕಾರಿಗಳು ಬದಲಾದರೂ ಕೂಡ ವ್ಯವಸ್ಥೆಗಳು ಮಾತ್ರ ಬದಲಾಗುತ್ತಿಲ್ಲ.

ನೀರಿನ ಘಟಕ ಸ್ಥಗಿತ: ಕಳೆದ ಕೆಲ ವರ್ಷಗಳ ಹಿಂದೆ ಉದಯವಾಣಿ ಪತ್ರಿಕೆಯಲ್ಲಿ ಮಿನಿ ವಿಧಾನಸೌಧದ ಮೂಲ ಸೌಕರ್ಯಗಳ ಕೊರತೆ ಕುರಿತು ಸುದ್ದಿ ಪ್ರಕಟಗೊಂಡ ಬಳಿಕ ಮಿನಿ ವಿಧಾನಸೌಧ ಹೊರ ಪ್ರದೇಶದಲ್ಲಿ ಕುಡಿಯುವ ನೀರಿನ ಕಟ್ಟೆ ನಿರ್ಮಿಸಿ ಟ್ಯಾಂಕರ್ ಅಳವಡಿಸಲಾಗಿತ್ತು. ಕೆಲ ತಿಂಗಳು ಜನರಿಗೆ ಕುಡಿಯುವ ನೀರು ಕೂಡ ಪೂರೈಕೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಇದೀಗ ನೀರನ ಘಟಕದಲ್ಲಿ ನೀರಿನ ಟ್ಯಾಂಕರ್ ಕೂಡ ಕಂಡುಬರುತ್ತಿಲ್ಲ. ಈ ಹಿಂದಿನ ತಹಶೀಲ್ದಾರರು ಕುಡಿಯುವ ನೀರಿಗಾಗಿ ಕಚೇರಿ ಆವರಣದಲ್ಲಿ ನೀರಿನ ಟ್ಯಾಂಕ್ ಒಂದು ಅಳವಡಿಸಿದ್ದರು. ಇದೀಗ ಅದು ಕೂಡ ದುರಸ್ತಿಗೆ ಬಂದಿದೆ. ವಿವಿಧ ಕಚೇರಿಗೆ ಬರುವ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಬಾಗಿಲು ತೆರೆಯದ ಶೌಚಾಲಯ

ಕಚೇರಿಗೆ ಬರುವ ಜನರ ಶೌಚಾಲಯದ ಸಮಸ್ಯೆ ಹೇಳತೀರದು. ಪುರುಷರು ಬಯಲಲ್ಲಿ ಶೌಚ ಮಾಡುತ್ತಾರೆ. ಮಹಿಳೆಯರು ಶೌಚಕ್ಕೆ ಹೋಗಲು ಪರದಾಡುವಂತಾಗಿದೆ. ಈ ಬಗ್ಗೆ ಯಾವ ಅಧಿಕಾರಿಗಳು ಕೂಡ ಗಮನಹರಿಸುತ್ತಿಲ್ಲ ಎಂದು ಮಹಿಳೆಯರು ದೂರುತ್ತಿದ್ದಾರೆ.

ಮಿನಿ ವಿಧಾನಸೌದ ತಹಶೀಲ್ದಾರ ಕಚೇರಿ, ಭೂ ಸರ್ವೇ ಇಲಾಖೆ, ಭೂಮಿ ಕೇಂದ್ರ, ಖಜಾನೆ ಇಲಾಖೆ, ಉಪ ನೋಂದಣೆ ಇಲಾಖೆ, ದಾಖಲೆಗಳ ಇಲಾಖೆ, ಚುನಾವಣಾ ಕಚೇರಿಗಳಿಗೆ ಪ್ರತಿನಿತ್ಯ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದ ಜನರು ಇಲ್ಲಿಗೆ ಬರುತ್ತಾರೆ. ಕುಡಿಯುವ ನೀರಿನ ಸಮಸ್ಯೆ ಜತೆಗೆ ಶೌಚಾಲಯ ಸಮಸ್ಯೆ ಹೆಚ್ಚಿದೆ. ಕಚೇರಿ ಹಿಂದುಗಡೆ ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಅನೇಕ ಬಾರಿ ಬಣ್ಣ ಹಚ್ಚುವ ಕೆಲಸ ಮಾಡಿ ಅನುದಾನ ಖರ್ಚು ಮಾಡಲಾಗಿದೆ. ಆದರೆ ಇಂದಿಗೂ ಕೂಡ ಬಾಗಿಲು ತೆರೆಯದೆ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದ್ದು, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

ಜನರಿಗೆ ಮೂಲ ಸೌಕರ್ಯ ಕಲ್ಪಿಸಿ

ವಿವಿಧ ಕೆಲಸಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುವ ಜನರಿಗೆ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು. ದೇಶದ ಪ್ರಧಾನಿಗಳು ಶೌಚಾಲಯದ ಕುರಿತು ಅಭಿಯಾನಗಳು ನಡೆಸುತ್ತಿದ್ದರೂ ಕೂಡ ಅಧಿಕಾರಿಗಳು ಮಾತ್ರ ಸಾರ್ವಜನಿಕರ ಶೌಚಾಲಯದ ಕಡೆಗೆ ಗಮನಹರಿಸದಿರುವುದು ಬೇಸರ ಮೂಡಿಸಿದೆ. ಕೂಡಲೇ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮಿನಿವಿಧಾನಸೌಧ ಎದುರಿಗೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು.ಅವಿನಾಶ ಧುಮಾಳೆ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಉಪಾಧ್ಯಕ್ಷರು.

-ದುರ್ಯೋಧನ ಹೂಗಾರ

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-bidar

Bidar ನಗರದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಪ್ರತಿಭಟನಾ ರ್‍ಯಾಲಿ

Beldale

Bidar: ನಿವೇಶನಗಳ ವಾಪಸ್ ಕೊಟ್ರೂ ಸಿದ್ದರಾಮಯ್ಯ ಕುಟುಂಬಕ್ಕೆ ಕಂಟಕ ತಪ್ಪಲ್ಲ: ಶಾಸಕ ಬೆಲ್ದಾಳೆ

1-wewwewqewqewqe

Police; ಹೃದಯಾಘಾತದಿಂದ ಕರ್ತವ್ಯನಿರತ 28 ವರ್ಷದ ಪೊಲೀಸ್ ಪೇದೆ ಸಾ*ವು

1-lll

UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ

police crime

Bidar; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.