Shambhavi ಹೊಳೆಗೆ ಬಿದ್ದು ಬಾಲಕ ಸಾವು-ನಾಲ್ಕು ಮಂದಿ ಮಕ್ಕಳು ತೆರಳಿದ್ದ ವೇಳೆ ಘಟನೆ
ಅರ್ಚಕರ ಸಮಯಪ್ರಜ್ಞೆಯಿಂದ ಇನ್ನಿಬ್ಬರ ಜೀವ ಉಳಿಯಿತು
Team Udayavani, Sep 22, 2024, 8:45 PM IST
ಕಾರ್ಕಳ: ಹೊಳೆಯ ಬಳಿ ಆಟವಾಡುತಿದ್ದ ಸಂದರ್ಭ ಶಾಲಾ ಬಾಲಕನೋರ್ವ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಸಾಣೂರಿನಲ್ಲಿ ಸೆ. 21ರಂದು ನಡೆದಿದೆ.
ಇರ್ವತ್ತೂರಿನ ಪುಷ್ಪಾ ದೇವಾಡಿಗ ಅವರ ಪುತ್ರ ಚರಣ್‌ರಾಜ್ (13) ಮೃತಪಟ್ಟ ಬಾಲಕ.
ಚರಣ್‌ರಾಜ್ ಸಾಣೂರು ಹೈಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಸೆ. 21ರಂದು ಶಾಲೆಯ ಬಿಡುವಿನ ಅವಧಿಯಲ್ಲಿ ಇತರ ಮೂರು ಮಂದಿ ಮಕ್ಕಳ ಜತೆ ಸೇರಿ ಇಲ್ಲಿನ ಶಾಂಭವಿ ನದಿ ಕಡೆಗೆ ತೆರಳಿದ್ದರು. ಸಂಜೆ 5ರ ವೇಳೆಗೆ ತೆರಳಿದ್ದು, ಈ ವೇಳೆ ಆಕಸ್ಮಿಕವಾಗಿ ಬಾಲಕ ಹೊಳೆಗೆ ಬಿದ್ದಿದ್ದಾನೆ. ಸ್ಥಳೀಯರು ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದು, ತತ್‌ಕ್ಷಣ ಬಾಲಕನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು, ಬಾಲಕ ಮೃತಪಟ್ಟ ಬಗ್ಗೆ ಖಚಿತಪಡಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಚಕರ ಸಮಯಪ್ರಜ್ಞೆಯಿಂದ ಇನ್ನಿಬ್ಬರ ಜೀವ ಉಳಿಯಿತು
ನಾಲ್ಕು ಮಂದಿ ಮಕ್ಕಳು ಜತೆಗಿದ್ದು, ಅದರಲ್ಲಿ ಚರಣ್‌ರಾಜ್ ಹೊಳೆಗೆ ಬಿದ್ದ ವೇಳೆ ಜತೆಗಿದ್ದವರ ಪೈಕಿ ಇನ್ನಿಬ್ಬರು ನೀರಿನ ಸೆಳೆತದ ಅಪಾಯಕ್ಕೆ ಸಿಲುಕಿದ್ದರು. ಇದೇ ವೇಳೆ ಅದೇ ಪರಿಸರದಲ್ಲಿದ್ದ ಅರ್ಚಕರೊಬ್ಬರ ಗಮನಕ್ಕೆ ಬಂದು ಅವರು ಇನ್ನಿಬ್ಬರನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದ್ದು, ಸಕಾಲದಲ್ಲಿ ಅರ್ಚಕರು ಸಮಯಪ್ರಜ್ಞೆ ಮೆರೆದು ರಕ್ಷಣೆಗೆ ಮುಂದಾಗದೇ ಇದ್ದರೆ ಇನ್ನೂ ಇಬ್ಬರು ಮಕ್ಕಳ ಜೀವಹಾನಿ ಸಂಭವಿಸುತ್ತಿತ್ತು ಎನ್ನಲಾಗಿದೆ. ಬಡ ಕುಟುಂಬದ ಹಿನ್ನಲೆಯ ಚರಣ್‌ರಾಜ್ ಹೆತ್ತವರ ಒಬ್ಬನೇ ಮಗನಾಗಿದ್ದು, ಆಟಕೂಟದಲ್ಲಿ ಪ್ರತಿಭಾನ್ವಿತನಾಗಿದ್ದ. ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.