Politics: 14 ಪತ್ರಕರ್ತರಿಗೆ ಬಹಿಷ್ಕಾರ: ಕಾಂಗ್ರೆಸ್, ಜೆಡಿಯು ಭಿನ್ನರಾಗ
Team Udayavani, Sep 17, 2023, 12:33 AM IST
ಹೊಸದಿಲ್ಲಿ: ವಿಪಕ್ಷಗಳ ಮೈತ್ರಿಕೂಟವು 14 ಮಂದಿ ಟಿವಿ ನಿರೂಪಕರಿಗೆ ಬಹಿಷ್ಕಾರ ಹಾಕಿದ ಬೆನ್ನಲ್ಲೇ ಮೈತ್ರಿಕೂಟದಲ್ಲಿರುವ ಎರಡು ಪಕ್ಷಗಳ ನಡುವೆಯೇ ಭಿನ್ನಮತ ತಲೆದೋರಿರುವ ಲಕ್ಷಣ ಗೋಚರಿಸಿದೆ. ಈ ನಿರ್ಧಾರವನ್ನು ಕಾಂಗ್ರೆಸ್ ಸಮರ್ಥಿಸಿ ಕೊಂಡರೆ, ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ನನ್ನ ಬೆಂಬಲ ಪತ್ರಕರ್ತರಿಗೆ’ ಎಂದು ಘೋಷಿಸಿದ್ದಾರೆ.
ಬಹಿಷ್ಕಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ನಾನು ಪತ್ರಕರ್ತರನ್ನು ಬೆಂಬಲಿಸುತ್ತೇನೆ. ಎಲ್ಲರೂ ಸಂಪೂರ್ಣ ಸ್ವಾತಂತ್ರ್ಯ ಪಡೆದಿರು ವಾಗ, ಪತ್ರಕರ್ತರೂ ತಮಗಿಷ್ಟ ಬಂದಂತೆ ಬರೆಯುತ್ತಾರೆ. ಅವರನ್ನು ನಿಯಂತ್ರಿಸಲು ಸಾಧ್ಯವೇ? ನಾನು ಯಾವತ್ತಾದರೂ ಹಾಗೆ ಮಾಡಿದ್ದೇನಾ? ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕುಗಳಿವೆ ಎಂದು ನಿತೀಶ್ ಹೇಳಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, “ನಾವು ಪತ್ರಕರ್ತ ರನ್ನು ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ, ಕಪ್ಪುಪಟ್ಟಿಗೆ ಸೇರಿಸಿಲ್ಲ. ಇದು ದ್ವೇಷವನ್ನು ಹಬ್ಬಿಸುವವರ ವಿರುದ್ಧ ನಾವು ನಡೆಸುತ್ತಿರುವ ಅಸಹಕಾರ ಚಳವಳಿ ಅಷ್ಟೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
SC: ಬಿಯಾಂತ್ ಹಂತಕ ಬಲ್ವಂತ್ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ
Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ
Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.