I.N.D.I.A: ಬಹಿಷ್ಕಾರ ಸಮರ: ಪತ್ರಕರ್ತರಿಗೆ ಬಹಿಷ್ಕಾರ: ವಿಪಕ್ಷಗಳ ವಿರುದ್ಧ ಬಿಜೆಪಿ ಆಕ್ರೋಶ
Team Udayavani, Sep 16, 2023, 12:22 AM IST
ಹೊಸದಿಲ್ಲಿ: ಸುದ್ದಿಮಾಧ್ಯಮಗಳ 14 ಪತ್ರಕರ್ತರಿಗೆ ಬಹಿಷ್ಕಾರ ಹೇರಿ ವಿಪಕ್ಷÒಗಳ ಒಕ್ಕೂಟ (ಐಎನ್‌ಡಿಐಎ) ಗುರುವಾರ ಹೊರಡಿಸಿರುವ ಪ್ರಕಟಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಿಪಕ್ಷಗಳ ನಿರ್ಧಾರವನ್ನು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಸಿಯೇಷನ್(ಎನ್‌ಬಿಡಿಎ) ಖಂಡಿಸಿದ ಬೆನ್ನಲ್ಲೇ ವಿಪಕ್ಷಗಳ ಒಕ್ಕೂಟದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ವಿಪಕ್ಷಗಳು ಬಹಿಷ್ಕರಿಸಿರುವ ಪತ್ರಕರ್ತರ ಪಟ್ಟಿಯು ಒಂದು ರೀತಿಯಲ್ಲಿ “ಟಾರ್ಗೆಟ್ ಲಿಸ್ಟ್’ ಆಗಿದೆ. ನಿಮ್ಮ ವಿರುದ್ಧ ನಾವು ಕ್ರಿಮಿ ನಲ್ ಕೇಸು ಹಾಕುತ್ತೇವೆ, ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಬೆದರಿಸಿ ದಂತಿದೆ. ಒಂದು ವೇಳೆ, ಈ ಪಕ್ಷಗಳ ಕಾರ್ಯಕರ್ತರು ಸೇರಿ ಯಾರಾದರೂ ಈ ಪತ್ರಕ ರ್ತರ ಮೇಲೆ ದಾಳಿ ಮಾಡಿದರೆ ಅದಕ್ಕೆ ಯಾರು ಹೊಣೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ವಿಪಕ್ಷಗಳ ನಿರ್ಧಾರವು “ಮಾಧ್ಯಮದ ವಿರುದ್ಧದ ನಿಂದನೆ’, ಮುಕ್ತ ಪತ್ರಿಕೋದ್ಯಮದ ವಿರುದ್ಧದ ದ್ವೇಷವಾಗಿದೆ ಎಂದಿದ್ದಾರೆ.
“ಚುನಾವಣಾ ಆಯೋಗದಿಂದ ನ್ಯಾಯಾಲಯದವರೆಗೆ ವಿಪಕ್ಷಗಳ ಒಕ್ಕೂಟವು ದೂಷಿಸದೇ ಇರುವಂಥ ಯಾವೊಂದು ಸಂಸ್ಥೆಯೂ ಭಾರತದಲ್ಲಿಲ್ಲ. ಮಾಧ್ಯಮ ಅಥವಾ ಬೇರೆ ಯಾವುದೇ ಸಂಸ್ಥೆಯನ್ನು ಬಹಿಷ್ಕರಿಸುವುದರಿಂದ ಪಕ್ಷಕ್ಕೆ ಯಾವುದೇ ಪ್ರಯೋಜ ನವಾಗುವುದಿಲ್ಲ. ಕಾಂಗ್ರೆಸ್ ತನ್ನ ಒಳಿತಿಗಾಗಿ ಯಾರನ್ನಾದರೂ ಬಹಿಷ್ಕರಿಸಬೇಕೆಂದು ಬಯಸಿದರೆ, ರಾಹುಲ್ ಗಾಂಧಿಯವರನ್ನು ಬಹಿಷ್ಕರಿಸಬೇಕು. ನಿಮ್ಮ ನಾಯಕನಿಗೆ ಯಾವುದೇ ಸಾಮರ್ಥ್ಯವಿಲ್ಲ. ಅವರನ್ನೇ ಮೊದಲು ನೀವು ಬಹಿಷ್ಕರಿಸಿ’ ಎಂದೂ ಪಾತ್ರಾ ವ್ಯಂಗ್ಯವಾಡಿದ್ದಾರೆ.
ತುರ್ತು ಪರಿಸ್ಥಿತಿ 2.0: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ವಿಪಕ್ಷಗಳ ನಿರ್ಧಾರವನ್ನು ತುರ್ತುಪರಿಸ್ಥಿತಿ 2.0 ಎಂದು ಬಣ್ಣಿಸಿದ್ದಾರೆ. ಇದು ವಿಪಕ್ಷಗಳಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಎಂಬುದನ್ನು ತೋರಿಸುತ್ತದೆ. ಇದೊಂದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಗುರುವಾರವಷ್ಟೇ ಅರ್ನಾಬ್ ಗೋಸ್ವಾಮಿ, ಸುಧೀರ್ ಚೌಧರಿ, ಚಿತ್ರಾ ತ್ರಿಪಾಠಿ, ನವಿಕಾ ಕುಮಾರ್ ಸೇರಿದಂತೆ 14 ಪತ್ರಕರ್ತರ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ, “ಪ್ರತಿದಿನ ಸಂಜೆ 5ರ ನಂತರ ಟಿವಿ ಚಾನೆಲ್‌ಗಳಲ್ಲಿ ದ್ವೇಷದ ಅಂಗಡಿ ತೆರೆಯಲಾಗುತ್ತದೆ. ನಾವು ಇದರ ಗ್ರಾಹಕರಾಗಲು ಬಯಸುವುದಿಲ್ಲ. ನಮ್ಮದು ದ್ವೇಷ ಮುಕ್ತ ಭಾರತದ ಕನಸು. ಹೀಗಾಗಿ, ಈ ಪತ್ರಕರ್ತರು ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ನಾವು ಭಾಗಿಯಾಗುವುದಿಲ್ಲ’ ಎಂದು ಹೇಳಿದ್ದರು.
“ಐಎನ್‌ಡಿಐಎ ಹಿಂದೂ ವಿರೋಧಿ ಒಕ್ಕೂಟ’
ವಿಪಕ್ಷಗಳ ಒಕ್ಕೂಟದಲ್ಲಿನ ಪಕ್ಷಗಳೆಲ್ಲವೂ ಹಿಂದೂ ಗಳು ಮತ್ತು ಸನಾತನ ಧರ್ಮದ ವಿರೋಧಿಗಳು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಹಳೇ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ಅದಕ್ಕೆ ಬೆಂಬಲ ವ್ಯಕ್ತಪಡಿಸುವ ಪಕ್ಷಗಳು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ.
“ಎನ್‌ಡಿಟಿವಿ’ಗೆ ನೀಡಿದ ಸಂದರ್ಶನ ದಲ್ಲಿ ಮಾತನಾಡಿದ ಅವರು, “ಡಿಎಂಕೆ ಹಿಂದಿನಿಂದಲೂ ಸನಾತನ ಧರ್ಮ ವಿರೋಧಿ ನಿಲುವು ಹೊಂದಿದೆ. ನಾನು ಅದನ್ನು ಖುದ್ದಾಗಿ ಕಂಡಿದ್ದೇನೆ. ದೇಶದ ಇತರ ಭಾಗದ ಜನರಿಗೆ ತಮಿಳು ಭಾಷೆ ಅರ್ಥವಾಗದೇ ಇರುವುದರಿಂದ ಅವರು ಹೇಳಿದ ವಿಚಾರಗಳು ಅರ್ಥವಾಗುತ್ತಿರಲಿಲ್ಲ’ ಎಂದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ಡಿಎಂಕೆ ನಾಯಕರು ಹೊಂದಿರುವ ಧೋರಣೆ ಸುಲಭವಾಗಿ ಜನರಿಗೆ ಗೊತ್ತಾಗುತ್ತಿದೆ. 70 ವರ್ಷಗಳಿಂದ ಆ ಪಕ್ಷ ಇದೇ ನಿಲುವು ಅನುಸರಿಸು ತ್ತಿದೆ ಎಂದಿದ್ದಾರೆ. ಜತೆಗೆ, ಐ.ಎನ್.ಡಿ.ಐ.ಎ. ನಾಯಕರು ಯಾರೂ “ಸನಾತನ ಧರ್ಮ’ ಕುರಿತ ಉದಯನಿಧಿ ಹೇಳಿಕೆಯನ್ನು ಖಂಡಿಸಲೇ ಇಲ್ಲ ಎಂದು ವಿತ್ತ ಸಚಿವೆ ದೂರಿದ್ದಾರೆ. ಉದಯನಿಧಿ ಹೇಳಿಕೆ ಸಂವಿಧಾನದ ಅವಹೇಳನ. ಸಾಂವಿಧಾನಿಕವಾಗಿ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರ ಉಲ್ಲಂಘನೆಯಾಗಿದೆ ಎಂದಿದ್ದಾರೆ ನಿರ್ಮಲಾ.
ಮಹಿಳೆಯರ ಶಕ್ತಿಗೆ ಸಾಕ್ಷಿ: ಇದೇ ವೇಳೆ, ಜಿ20 ಸಮ್ಮೇಳನ, ಚಂದ್ರಯಾನ-3ರ ಯಶಸ್ಸಿನಲ್ಲಿ ಮಹಿ ಳೆಯರ ಪಾತ್ರವೇ ಹೆಚ್ಚಿನದ್ದಾಗಿದೆ ಎಂದು ಹೇಳಿ ದ್ದಾರೆ. ವಿವಿಧ ಕೆಲಸಗಳ ಕ್ಷೇತ್ರಗಳಲ್ಲಿ ಮಹಿಳೆಯರು ಭಾಗವಹಿಸದೇ ಇರುವುದು ಸಮಸ್ಯೆಯೇ ಅಲ್ಲ. ಅವರು ಎಲ್ಲಾ ಕ್ಷೇತ್ರಗಳಲ್ಲಿ ಭಾಗೀದಾರಿಕೆ ಹೊಂದ ಬೇಕು. ನಮ್ಮ ಸಚಿವಾಲಯದ ವತಿಯಿಂದ ಜಿ20ರ ತಂಡ ಮುನ್ನಡೆಸಿದ್ದು ಮಹಿಳೆಯೇ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.