Urva: ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮಕಲಶೋತ್ಸವ
Team Udayavani, Feb 15, 2024, 11:17 PM IST
ಮಂಗಳೂರು: ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ನೆರವೇರಿತು. ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಪ್ರಾತಃಕಾಲ 2ರಿಂದಲೇ ಸಹಸ್ರಕಲಶ ಸಹಿತ ಬ್ರಹ್ಮಕಲಶ ಪೂರಣ, ಗೋಪೂಜೆ, 5.15ರಿಂದ ಪಂಚಗವ್ಯ, ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು. ಬೆಳಗ್ಗೆ 8.12ಕ್ಕೆ ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮಕುಂಭಾಭಿಷೇಕ, ವಿಶೇಷ ಮಂತ್ರನ್ಯಾಸ, ಪರಿವಾರ ದೇವರುಗಳಿಗೆ ಕಲಶಾ ಭಿಷೇಕ, ವಿಶೇಷ ಸಾನ್ನಿಧ್ಯ ಪ್ರಾರ್ಥನೆ, ಮಧ್ಯಾಹ್ನ ಮಹಾಪೂಜೆ ನೆರವೇರಿತು.
ಗೌರವಾಧ್ಯಕ್ಷ ಡಾ| ಜಿ. ಶಂಕರ್, ಗೌರವ ಸಲಹೆಗಾರ ಜಯ ಸಿ. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ ಬೊಕ್ಕಪಟ್ಣ, ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರ.ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ್ ಅಮೀನ್ ಬೈಕಂಪಾಡಿ, ಜತೆ ಕೋಶಾಧಿಕಾರಿ ಶಶಿಧರ್ ಕೋಡಿಕಲ್, ಜತೆ ಕಾರ್ಯದರ್ಶಿ ಮೋಹನ್ ದಲಾಲ್, ವಾಸುದೇವ ಸಾಲ್ಯಾನ್ ಕೂಳೂರು, ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್, ಪ್ರಮುಖರಾದ ಮಾಧವ ಪುತ್ರನ್, ಯಾದವ ಸುವರ್ಣ, ಯಾದವ ಸಾಲ್ಯಾನ್, ಪುರುಷೋತ್ತಮ ಕೋಟ್ಯಾನ್, ಯಶವಂತ್ ಪಿ. ಮೆಂಡನ್ ಬೋಳೂರು, ರಂಜನ್ ಕಾಂಚನ್ ಬೋಳೂರು, ವಾಸುದೇವ ಸಾಲ್ಯಾನ್ ಬೈಕಂಪಾಡಿ, ಸುರೇಶ್ ಕುಂದರ್ ಕೂಳೂರು, ಅಮರನಾಥ ಸುವರ್ಣ, ರಾಜೀವ ಕಾಂಚನ್, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ಅಧ್ಯಕ್ಷ ಲೋಕೇಶ್ ಸುವರ್ಣ, ಗೋಪಾಲ ಪುತ್ರನ್ ಕುದ್ರೋಳಿ, ಅರುಣ್ ಮೆಂಡನ್, ಕುಮಾರ್ ಬಂಗೇರಾ, ಧನಂಜಯ ಮೆಂಡನ್ ಕುದ್ರೋಳಿ, ಭರತ್ ಉಳ್ಳಾಲ, ಮೋಹನ ಬೆಂಗ್ರೆ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Success: ಯಶಸ್ವಿ ಜೀವನಕ್ಕೆ ಸೂತ್ರಗಳು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.