Breast Milk Bank: ಹೆಚ್ಚುತ್ತಿರುವ ಹಾಲುದಾನಿಗಳು


Team Udayavani, Aug 10, 2023, 6:25 AM IST

BREST FEEDING

ಮಂಗಳೂರು: ನಗರದ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆ ಸ್ಥಾಪನೆಗೊಂಡ ವಿಭಿನ್ನ ಪರಿಕಲ್ಪನೆಯ ಎದೆಹಾಲು ಬ್ಯಾಂಕ್‌ಗೆ
ಆರೋಗ್ಯವಂತ ತಾಯಂದಿರಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ.

ಎದೆಹಾಲು ಕ್ಲಪ್ತ ಸಮಯಕ್ಕೆ ದೊರೆಯದೆ ಆಗುವ ನವಜಾತ ಶಿಶುಮರಣ ತಡೆಯುವಲ್ಲಿ ಈ ಉಪಕ್ರಮದಿಂದ ನೆರವಾಗತೊಡಗಿದೆ.

ರೋಟರಿ ಇಂಟರ್‌ನ್ಯಾಶನಲ್‌ ಸಹಯೋಗದಲ್ಲಿ 36 ಲಕ್ಷ ರೂ. ನೆರವಿನಡಿ ಅಮೃತ ರೋಟರಿ ಮಾನವ ಎದೆಹಾಲು ಬ್ಯಾಂಕನ್ನು 2022ರ ಮಾರ್ಚ್‌ನಲ್ಲಿ ಆರಂಭಿಸಲಾಗಿತ್ತು. ಆಸ್ಪತ್ರೆಯು ಇದನ್ನು ನಿರ್ವಹಿಸುತ್ತಿದ್ದು, ಆರಂಭದಲ್ಲಿ 7 ತಾಯಂದಿರು ಎದೆಹಾಲು ದಾನಿಗಳಾಗಿದ್ದರು. ಈಗ ಆ ಸಂಖ್ಯೆ ಏರತೊಡಗಿದೆ.
ಲೇಡಿಗೋಶನ್‌ ಆಸ್ಪತ್ರೆಗೆ ಹಲವು ಜಿಲ್ಲೆಗಳಿಂದ ಹೆರಿಗೆಗಾಗಿ ಮಹಿಳೆಯರು ಬರುತ್ತಾರೆ. ಹೆರಿಗೆ ಸಂಖ್ಯೆ ಹೆಚ್ಚಿದಾಗ ತಾಯಂದಿರೂ ಹೆಚ್ಚುತ್ತಾರೆ. ಸಮಸ್ಯೆಯಿರುವ ಮಕ್ಕಳಿಗೆ ಇದೇ ತಾಯಂದಿರ ಹಾಲು ನೀಡಲಾಗುತ್ತದೆ. ದಾನಿಗಳಿಂದ ಸಂಗ್ರಹಿಸಲಾದ ಹಾಲನ್ನೂ ಇಲ್ಲಿ ಬಳಸುತ್ತಿದ್ದು, ಅಗತ್ಯವಿರುವಾಗ ವೆನಾÉಕ್‌ನ ಪ್ರಾದೇಶಿಕ ಮಕ್ಕಳ ಚಿಕಿತ್ಸಾ ಕೇಂದ್ರಕ್ಕೂ ಪೂರೈಸಲಾಗುತ್ತದೆ ಎನ್ನುತ್ತಾರೆ ವೈದ್ಯರು.

ರಾಜ್ಯದಲ್ಲಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಬಿಟ್ಟರೆ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಷ್ಟೇ ಈ ವಿಶಿಷ್ಟ ಪ್ರಯತ್ನ ನಡೆಸಿರುವುದು. ಕೆಲವು ಖಾಸಗಿ ಆಸ್ಪತ್ರೆಗಳು ಆರಂಭಿಸಿದ್ದರೂ ದಾನಿಗಳ ಕೊರತೆಯಿಂದಾಗಿ ಯಶಸ್ವಿಯಾಗಲಿಲ್ಲ.

ಸ್ವಯಂಪ್ರೇರಿತವಾಗಿ ಹಾಲಿನ ದಾನ
ಆಸ್ಪತ್ರೆಗೆ ಬರುವ ಆರೋಗ್ಯವಂತ ತಾಯಂದಿರಿಗೆ ಆಸ್ಪತ್ರೆಯ ಸಿಬಂದಿ ಎದೆಹಾಲು ದಾನದ ಕುರಿತು ಅರಿವು ಮೂಡಿಸುತ್ತಾರೆ. ಹಾಲು ದಾನಿಗಳನ್ನು ನೋಡಿದ ಕೆಲವು ಅರ್ಹ ತಾಯಂದಿರು ಸ್ವಯಂ ಪ್ರೇರಿತವಾಗಿ ದಾನಕ್ಕೆ ಮುಂದಾಗುತ್ತಾರೆ. ಆ ಹಾಲನ್ನುಪ್ಯಾಶ್ಚರೀಕರಿಸಿ, ಸೋಂಕು ಮುಕ್ತಗೊಳಿಸಿ ಫ್ರೀಜರ್‌ನಲ್ಲಿ ಇರಿಸಲಾಗುತ್ತದೆ. ಬಳಿಕ ಅಗತ್ಯವಿರುವ ನವಜಾತ ಶಿಶುಗಳಿಗೆ ನೀಡಲಾಗುತ್ತದೆ. ಇತರ ಆಸ್ಪತ್ರೆಯವರಿಗೂ ಅಗತ್ಯವಿದ್ದಲ್ಲಿ ಕಳುಹಿಸಲಾಗುವುದು ಮಿಲ್ಕ್ ಬ್ಯಾಂಕ್‌ ನೋಡಲ್‌ ಅಧಿಕಾರಿ ಡಾ| ಬಾಲಕೃಷ್ಣ.
ಈಗಾಗಲೇ ಕೇಂದ್ರ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತ್ಯೇಕ ಸಿಬಂದಿ ಒದಗಿಸುವಂತೆ ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ತನ್ನ ಶಿಶುವಿನ ಅಗತ್ಯಕ್ಕಿಂತಲೂ ಹೆಚ್ಚಿನ ಹಾಲು ಉತ್ಪಾದನೆಯಾಗುವ ತಾಯಂದಿರು ಇದಕ್ಕೆ ಅರ್ಹರು. ಯಾವುದೇ ತಾಯಿ ಎದೆಹಾಲಿನ ದಾನಕ್ಕೆ ಆಸಕ್ತಳಾಗಿದ್ದಲ್ಲಿ ಲೇಡಿಗೋಶನ್‌ ಆಸ್ಪತ್ರೆಯ ಎದೆಹಾಲು ಬ್ಯಾಂಕನ್ನು ಸಂಪರ್ಕಿಸಬಹುದು. ತಜ್ಞರು ಅಗತ್ಯ ಮಾಹಿತಿಯನ್ನು ನೀಡುತ್ತಾರೆ ಎಂದು ಮಿಲ್ಕ್ ಬ್ಯಾಂಕ್‌ನ ಮೂಲಗಳು ತಿಳಿಸಿವೆ.

ಆರಂಭದಲ್ಲಿ ತಾಯಂದಿರು ಎದೆಹಾಲುದಾನಕ್ಕೆ ಹಿಂಜರಿಯು ತ್ತಿದ್ದರು. ಈಗ ಜಾಗೃತಿ ಮೂಡಿದೆ. ದೇಶದಲ್ಲೇ ಇದೊಂದು ವಿನೂತನ ಯತ್ನ. ನವಜಾತ ಶಿಶ ಮರಣ ತಡೆಯುವತ್ತ ಪ್ರಮುಖ ಪಾತ್ರ ವಹಿಸಿದೆ.
– ಡಾ| ದುರ್ಗಾಪ್ರಸಾದ್‌, ವೈದ್ಯಕೀಯ ಅಧೀಕ್ಷಕರು, ಲೇಡಿಗೋಶನ್‌ ಆಸ್ಪತ್ರೆ

 ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.