ಆಂಧ್ರ ಬಸ್‌ನಲ್ಲಿ ಇಟ್ಟಿಗೆ ಸಾಗಾಟ!
Team Udayavani, May 5, 2020, 12:02 PM IST
ಸಾಂದರ್ಭಿಕ ಚಿತ್ರ
ಮೊಳಕಾಲ್ಮೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಪ್ರಯಾಣಿಕರು ಸಂಚರಿಸುವ ಆಂಧ್ರದ ಸರ್ಕಾರಿ ಬಸ್‌ನಲ್ಲಿ ಪಟ್ಟಣದಿಂದ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಸರ್ಕಾರಿ ಬಸ್ ಸೀಜ್ ಮಾಡಲಾಗಿದೆ. ಆಂಧ್ರಪ್ರದೇಶ ಸಾರಿಗೆ ಇಲಾಖೆ ಅನುಮತಿ ಪತ್ರವನ್ನು ಸರ್ಕಾರಿ ಬಸ್‌ಗೆ ಅಂಟಿಸಿಕೊಂಡು ಚೆಕ್‌ಪೋಸ್ಟ್ ಮೂಲಕ ನಿರಾಂತಕವಾಗಿ ಮೊಳಕಾಲ್ಮೂರು ಪಟ್ಟಣಕ್ಕೆ ಪ್ರವೇಶಿಸಿ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಸರ್ಕಾರಿ ಬಸ್‌ನಲ್ಲಿ ಸುಮಾರು
3-4 ದಿನಗಳಿಂದಲೂ ನಿತ್ಯವೂ 6 ಸಾವಿರ ಇಟ್ಟಿಗೆಗಳನ್ನು ಸಾಗಿಸಲಾಗುತ್ತಿತ್ತು. ಪಟ್ಟಣದಲ್ಲಿನ ಇಟ್ಟಿಗೆ ಭಟ್ಟಿಯೊಂದರಲ್ಲಿ ಇಟ್ಟಿಗೆಯನ್ನು ಲೋಡ್ ಮಾಡಿಕೊಂಡು ಆಂಧ್ರದ ರಾಯದುರ್ಗ ಮಾರ್ಗವಾಗಿ ಹೋಗಲಾಗುತ್ತಿತ್ತು. ಪಟ್ಟಣದ ಪ್ರಯಾಣಿಕರು ಬಸ್ ನಿಲ್ಲಿಸಿ ಪರಿಶೀಲಿಸಿದಾಗ ಬಸ್‌ನಲ್ಲಿ ಇಟ್ಟಿಗೆ ತುಂಬಿಕೊಂಡಿರುವುದು ಪತ್ತೆಯಾಗಿದೆ. ಈ ಬಸ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಬಸ್ ಚಾಲಕ ಮತ್ತು ಎಪಿಎಸ್ ಆರ್‌ಟಿಸಿ ಬಸ್ ಅಧಿಕಾರಿಯನ್ನು ವಿಚಾರಣೆಗೊಳಪಡಿಸಿದಾಗ ಅನಂತಪುರ ಜಿಲ್ಲೆ
ಉರುವಕೊಂಡ ಪ್ರದೇಶದ ಬಸ್ ನಿಲ್ದಾಣದ ಕಾಮ ಗಾರಿಗೆ ಇಟ್ಟಿಗೆಯನ್ನು ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಆಂಧ್ರದ ಸಾರಿಗೆ ಇಲಾಖೆ ಅಧಿಕಾರಿಗಳ ಅನುಮತಿ ಪತ್ರ ಪಡೆಯಲಾಗಿತ್ತು. ಈ ಬಗ್ಗೆ ತಹಶೀಲ್ದಾರ್ ಎಂ.ಬಸವರಾಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.