![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Mar 5, 2024, 12:25 AM IST
ಕುಂಬಳೆ: ಒಡ ಹುಟ್ಟಿದ ತಮ್ಮನನ್ನೇ ಗುಂಡು ಹಾರಿಸಿ ಕೊಲೆಗೈದ ಬರ್ಬರ ಘಟನೆ ಕುತ್ತಿಕೋಲ್ ಎಂಬಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಕುತ್ತಿಕೋಲ್ ನೂಜಂಗಾನಂ ನಿವಾಸಿ ನಾರಾಯಣ ನಾಯರ್ ಅವರ ಪುತ್ರ ಅಶೋಕನ್ ನಾಯರ್ (45) ಜತೆಗೆ ಅಣ್ಣ ಬಾಲಕೃಷ್ಣ ನಾಯರ್ (50) ರವಿವಾರ ರಾತ್ರಿ 9 ಗಂಟೆಗೆ ಕುಡಿದ ಮತ್ತಿನಿಂದ ಜಗಳವಾಡಿದ್ದಾನೆ.
ಈ ಸಂದರ್ಭ ತಮ್ಮನು ಅಣ್ಣನ ಕಾಲಿಗೆ ಕಲ್ಲು ಹೊತ್ತು ಹಾಕಿದ್ದು, ಇದರಿಂದ ಕುಪಿತಗೊಂಡ ಬಾಲಕೃಷ್ಣನು ಪಕ್ಕದ ಮಾಧವನ್ ನಾಯರ್ ಅವರ ಮನೆಗೆ ತೆರಳಿ ಬೇಟೆಯಾಡುವ ಬಂದೂಕು ತಂದು ತಮ್ಮನಿಗೆ ಗುಂಡು ಹಾರಿಸಿದನು. ಗಂಭೀರ ಗಾಯಗೊಂಡ ಅಶೋಕನ್ ಕಾಸರಗೋಡು ಜಿಲ್ಲಾ ಆಸ್ಪತ್ರೆ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮೃತ ಅಶೋಕನ್ ನಾಯರ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು.
You seem to have an Ad Blocker on.
To continue reading, please turn it off or whitelist Udayavani.