ಪ್ಯಾನಲ್ ಕುಸಿತ ಹೆಚ್ಚಿದ ಆತಂಕ ! BRTS ಸೇತುವೆ ಕಾಮಗಾರಿ ಕಳಪೆ ಮತ್ತೂಮ್ಮೆ ಸಾಬೀತು
Team Udayavani, Sep 30, 2020, 4:16 PM IST
ಹುಬ್ಬಳ್ಳಿ: ನವಲೂರು ಬಳಿಯ ಬಿಆರ್‌ಟಿಎಸ್ ಸೇತುವೆಯ ಇನ್ನೊಂದು ಭಾಗದಲ್ಲಿ ಪುನಃ ದೊಡ್ಡ ಪ್ರಮಾಣದಲ್ಲಿ ತಡೆಗೋಡೆ ಪ್ಯಾನಲ್‌ಗಳು ಕುಸಿದು ಬಿದ್ದಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆಂತಕ ಹೆಚ್ಚಿಸಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಸೆ.19ರ ಬೆಳಗಿನ ಜಾವ ಸೇತುವೆ ತಡೆಗೋಡೆಯ ಪ್ಯಾನಲ್ ಗಳು ಕಳಚಿ ಬಿದ್ದಿದ್ದವು. ಇದಾಗಿ ಒಂದು ವಾರದ ನಂತರ ಸೇತುವೆ ಇನ್ನೊಂದು ಭಾಗದಲ್ಲಿ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಪ್ಯಾನಲ್‌ಗಳು ಕಳಚಿ ಬಿದ್ದಿವೆ. ಸುಮಾರು 15ಕ್ಕೂ ಹೆಚ್ಚು ಪ್ಯಾನಲ್ ಹಾಗೂ ಮಣ್ಣು ಕುಸಿದೆ. ಸೇತುವೆ ಎರಡು ಭಾಗದಲ್ಲಿ ತಡೆಗೋಡೆ ಪ್ಯಾನಲ್‌ಗಳು ಕುಸಿದು ಒಳಗಿನ ಮಣ್ಣು ಹಾಗೂ ಜಲ್ಲಿ ಕಲ್ಲುಗಳು ಕೂಡ ರಸ್ತೆಯಲ್ಲಿ ಬಿದ್ದಿವೆ. ಇದರಿಂದ ಅಲ್ಲಿನ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಜನರು ಆತಂಕದಲ್ಲಿ ಓಡಾಡುವಂತಾಗಿದೆ.
ಇನ್ನೊಂದು ಭಾಗದ ಪ್ಯಾನಲ್‌ಗಳು ಉಬ್ಬಿಕೊಂಡಿದ್ದು, ಕುಸಿಯುವ ಹಂತದಲ್ಲಿ ಹಾಗೂ ಸೇತುವೆಗೆ ಕಟ್ಟಿರುವ ಕಾಲಂ ಕೂಡ ಬಿರುಕು ಬಿಟ್ಟಿರುವ ಕುರಿತು ಸೆ.21 ಉದಯವಾಣಿ ವಿಸ್ತೃತ ವರದಿ ಪ್ರಕಟ ಮಾಡಿತ್ತು. ಇದೀಗ ಆ ಭಾಗದಲ್ಲಿಯ ಪ್ಯಾನಲ್‌ಗಳು ಕಳಚಿ ಬಿದ್ದಿದ್ದು, ಒಳಗಿನ ಮಣ್ಣು ಕೂಡ ಕುಸಿಯುತ್ತಿದೆ. ಇದೀಗ ಎರಡು ಭಾಗದಲ್ಲಿ ತಡೆಗೋಡೆ ಕುಸಿದಿರುವುದು ಕಾಮಗಾರಿ ಕಳಪೆ ಎನ್ನುವುದನ್ನು ಮತ್ತೂಮ್ಮೆ ಸಾಬೀತು ಮಾಡಿದಂತಾಗಿದೆ.
ಇದನ್ನೂ ಓದಿ :ಈಶ್ವರಪ್ಪ ನಾನು ವೈಯಕ್ತಿಕವಾಗಿ ಉತ್ತಮ ಸ್ನೇಹಿತರು, ರಾಜಕೀಯ ಸಿದ್ಧಾಂತ ಮಾತ್ರ ಬೇರೆ : ಸಿದ್ದು
ವಾಹನಗಳ ಸಂಚಾರಕ್ಕೆ ಲೋಕಾರ್ಪಣೆಗೊಳ್ಳುವ ಮುನ್ನವೇ ಅರ್ಧಕ್ಕೆ ನಿಂತಿರುವ ಸೇತುವೆ ಕುಸಿದ ಪರಿಣಾಮ ಬಿಆರ್‌ಟಿಎಸ್ ಕಳಪೆ ಕಾಮಗಾರಿಗೆ ಮಹಾನಗರದ ಜನತೆಯಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಇನ್ನೊಂದು ಭಾಗದಲ್ಲೂ ಪ್ಯಾನಲ್‌ಗಳು ಬಿದ್ದಿದ್ದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಎರಡು ಭಾಗದಲ್ಲಿ ತಡೆಗೋಡೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟ ಕುರಿತು ಪ್ರಶ್ನೆ ಮೂಡುವಂತಾಗಿದೆ.
ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ತಡೆಗೋಡೆ ಪ್ಯಾನಲ್‌ಗಳು ಕುಸಿಯುತ್ತಿರುವ ಕುರಿತು ಶಾಸಕ ಅರವಿಂದ ಬೆಲ್ಲದ ಅವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪತ್ರದ ಮೂಲಕ ಎಚ್ಚರಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ದೂರಿನಲ್ಲಿ ಕೂಡ ಮುನ್ನೆಚ್ಚರಿಕೆ ಕ್ರಮ ಹಾಗೂ ಕೂಡಲೇ ದುರಸ್ತಿ ಕೈಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮ ಗೊಂಡಿಲ್ಲ. ಇನ್ನೂ ಹಲವು ಕಡೆಗಳಲ್ಲಿ ಪ್ಯಾನಲ್‌ಗಳು ಕುಸಿಯುವ ಸಾಧ್ಯತೆಗಳಿವೆ. ಹೀಗಾಗಿ ಸೇತುವೆಯುದ್ದಕ್ಕೂ ಕೆಳ ಭಾಗದಲ್ಲಿ ಜನ ಹಾಗೂ ಜಾನುವಾರುಗಳು ಸಂಚಾರ ನಿರ್ಬಂಧಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ.
ಬಾಗಿರುವ ಪ್ಯಾನಲ್‌ಗಳೆಲ್ಲವೂ ಕಳಚಿ ಬಿದ್ದರೆ ಇಡೀ ರಸ್ತೆ ಕೊಚ್ಚಿಕೊಂಡು ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಇದೇ ಮಾರ್ಗವಾಗಿ ತಡಸಿನಕೊಪ್ಪ, ಜೋಗ ಯಲ್ಲಾಪುರ, ಯೇರಿಕೊಪ್ಪ ಬೈಪಾಸ್ ಗೆ ಜನರು ಸಂಚರಿಸುತ್ತಾರೆ. ನಿತ್ಯ ಸುಮಾರು ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಓಡಾಡುತ್ತವೆ. ಇದೀಗ ಒಂದು ಸೇತುವೆ ಎರಡು ಸಂಪರ್ಕಿಸುವ ರಸ್ತೆಯಾಗಿದೆ. ನಿತ್ಯ ಕನಿಷ್ಟ 1000 ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದರೆ ಬಿದ್ದಿರುವ ಪ್ಯಾನಲ್ ಅಕ್ಕಪಕ್ಕದಲ್ಲಿ ಕೂಡ ಬೀಳುವ ಸ್ಥಿತಿಯಲ್ಲಿದ್ದು, ರಸ್ತೆಯಲ್ಲಿ ಓಡಾಡುವ ಜನರಲ್ಲಿ ಆತಂಕ ಸೃಷ್ಟಿಸಿದೆ. ಯಾವಾಗ ದುರ್ಘಟನೆ ಸಂಭವಿಸುತ್ತದೆ ಎನ್ನುವ ಭಯದಿಂದ ಓಡಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.