ಸಂಘಟನಾ ಚತುರ,ಸಾರ್ವಕಾಲಿಕ ಜಾತ್ಯತೀತ ನಾಯಕ ಬಿಎಸ್‌ವೈ
Team Udayavani, Jul 27, 2019, 5:01 AM IST
ಬೆಂಗಳೂರು: ನಿರಂತರ ಜನ ಸಂಪರ್ಕ, ಜನಪರ ಹೋರಾಟ ಮತ್ತು ರಾಜ್ಯ ಸಂಚಾರದ ಮೂಲಕ ಬಿ.ಎಸ್.ಯಡಿಯೂರಪ್ಪ ಅವರು ಸಾರ್ವಕಾಲಿಕ ಜನನಾಯಕರಾಗಿ ಬೆಳೆದಿದ್ದಾರೆ. ಕಠಿನ ಪರಿಶ್ರಮ, ಸಂಘಟನ ಚತುರತೆ ಜತೆಗೆ ಸರ್ವಸ್ಪರ್ಶಿ ಜಾತ್ಯತೀತ ವ್ಯಕ್ತಿತ್ವವೇ ಅವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿದಂತಿದೆ.
ರಾಜ್ಯ ಬಿಜೆಪಿಯ ಪ್ರಬಲ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಎರಡನೇ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸುವ ಮೂಲಕ ದಕ್ಷಿಣ ಭಾರತದಲ್ಲಿ ಎರಡನೇ ಬಾರಿಗೆ ಕಮಲ ಪಕ್ಷವನ್ನು ಅರಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಯಶಸ್ಸಿಗೆ ಬಿಜೆಪಿಗಿರುವ ಜನಪ್ರಿಯತೆ ಜತೆಗೆ ಯಡಿಯೂರಪ್ಪ ಅವರ ವೈಯಕ್ತಿಕ ವರ್ಚಸ್ಸು ಮತ್ತು ಸರ್ವ ಜನಾಂಗದವರೊಂದಿಗಿನ ಸೌಹಾರ್ದ ಸಂಬಂಧವೂ ಕಾರಣ ಎನ್ನುತ್ತದೆ ಆಪ್ತ ವಲಯ.
ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿ ರೂಪುಗೊಂಡವರ ಹಿಂದೆ ಅವರು ಬಯಸಲಿ, ಬಯಸದಿರಲಿ ಅವರು ಪ್ರತಿನಿಧಿಸುವ ಸಮುದಾಯದ ಜನರು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸುತ್ತಾ ಬಂದಿರುವುದನ್ನು ಕಾಣಬಹುದು. ಇದಕ್ಕೆ ಯಡಿಯೂರಪ್ಪ ಅವರೂ ಹೊರತಲ್ಲ. ಅವರು ಪ್ರತಿನಿಧಿಸುವ ಲಿಂಗಾಯತ ಸಮುದಾಯದ ದೊಡ್ಡ ವರ್ಗ ಅವರ ಬೆನ್ನಿಗೆ ಬೆಂಬಲವಾಗಿ ನಿಂತಿದೆ. ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಸೇರಿ ಚುನಾವಣೆ ಎದುರಿಸಿ ದಾಗಲೂ ಇದು ಸಾಬೀತಾಗಿದೆ.
ಜಾತ್ಯತೀತ ವ್ಯಕ್ತಿತ್ವ
ಯಡಿಯೂರಪ್ಪ ಅವರ ಬಗ್ಗೆ ಅನ್ಯ ಸಮುದಾಯದ ಬೆಂಬಲ ಇಲ್ಲವೆಂದಲ್ಲ. ನಾನಾ ವರ್ಗದ ಜನರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಅವರ ಮನವಿಗೆ ಸ್ಪಂದಿಸುತ್ತ ಬಂದಿರುವುದರಿಂದ ಅವರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ನೋಡುವಸ್ಥಿತಿ ಇಲ್ಲ. 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಹುತೇಕ ಎಲ್ಲ ಪ್ರಮುಖ ಮತ್ತು ಹಿಂದುಳಿದ ಸಮುದಾಯಗಳ ಮಠ ಮಾನ್ಯಗಳಿಗೂ ಸಹಾಯಧನ ನೀಡಿದ್ದನ್ನು ಇಂದಿಗೂ ಸ್ಮರಿಸಲಾಗುತ್ತದೆ.
ಕಟ್ಟಾ ಹಿಂದುತ್ವವಾದಿಯಲ್ಲ
ಹಿಂದುತ್ವ ಪ್ರತಿಪಾದನೆಯೇ ಬಿಜೆಪಿಯ ಮುಖ್ಯ ಸಿದ್ಧಾಂತ. ಆ ಮೂಲಕವೇ ದೇಶದಲ್ಲಿ ಉಚ್ಛ್ರಾಯ ಸ್ಥಿತಿಗೆ ಏರಿದೆ. ಹಾಗಿದ್ದರೂ ಯಡಿಯೂರಪ್ಪ ಅವರು ಈವರೆಗೆ ಕಟ್ಟರ್ ಹಿಂದುತ್ವವಾದಿಯಂತೆ ಕಂಡಿಲ್ಲ.ಹಿಂದುತ್ವ ವಿಚಾರ ಬಂದಾಗ ಅದರ ಪರವಾಗಿದ್ದರೂ ಪ್ರಖರ ಹಿಂದುತ್ವ ಪ್ರತಿಪಾದಕರಂತಿಲ್ಲ. ಘಟನಾವಳಿ ಆಧರಿಸಿ ಸಂದರ್ಭ, ಸನ್ನಿವೇಶಕ್ಕೆ ಪೂರಕವಾಗಿ ಹಿಂದುತ್ವ ಪ್ರತಿಪಾದಿಸುವುದಕ್ಕೆ ಯಡಿಯೂರಪ್ಪ ಸೀಮಿತರಾಗಿದ್ದಾರೆ. ಅಲ್ಪಸಂಖ್ಯಾಕ ಸಮುದಾಯದವರು ಸಹ ಅವರನ್ನು ವಿರೋಧಿಸಿದ್ದು ವಿರಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.