ಮುನಿಯಾಲು ಆಯುರ್ವೇದ ಸಂಸ್ಥೆಯ ಬುದ್ದಾಯುರ್ವೇದ್ ಆ್ಯಪ್ ಬಿಡುಗಡೆ
Team Udayavani, Sep 30, 2023, 5:40 PM IST
ಕಾರ್ಕಳ: ಜನಸಾಮಾನ್ಯರ ಮಾನಸಿಕ ಆರೋಗ್ಯ ರಕ್ಷಣೆ, ದೈಹಿಕ ಆರೋಗ್ಯ ಪುನರ್ ಸ್ಥಾಪನೆ ಹಾಗೂ ಆಯ್ದ ಗಿಡಮೂಲಿಕಾ ಕೃಷಿಯಿಂದ ನೆಲ, ಜಲ ಮತ್ತು ವಾಯು ಮಾಲಿನ್ಯಗಳಿಂದ ರಕ್ಷಣೆ ಮತ್ತು ರಾಜ್ಯದ ರೈತರ ಆದಾಯ ವೃದ್ಧಿ ಮುಂತಾದವುಗಳ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ಉಚಿತವಾಗಿ ಒದಗಿಸುವ ಬುದ್ದಾಯುರ್ವೇದ್ ಆ್ಯಪ್ ಅನ್ನು ಮಣಿಪಾಲದ ಮುನಿಯಾಲು ಆಯುರ್ವೇದ ಸಂಸ್ಥೆಯು ಬಿಡುಗಡೆಗೊಳಿಸಿದೆ.
ಈ ಆ್ಯಪ್ ಅನ್ನು ತಮ್ಮ ಫೋನ್ ನಲ್ಲಿ ರಿಜಿಸ್ಟರ್ ಮಾಡುವ ಮೂಲಕ ರಾಜ್ಯದ ಜನರು ಭಗವಾನ್ ಬುದ್ಧನ ಬೋಧನೆಯಾದ ತ್ರಿಪಿಟಕದ ಸಾರಾಂಶವಾದ ಕನ್ನಡ ಸಾರಸ್ವತಲೋಕದ ದಿಗ್ಗಜರಿಂದ ಪ್ರಶಂಸೆಗೊಳಗಾದ ಬಹುಬೇಡಿಕೆಯ ಸಮ್ಮಾಸಂಬುದ್ಧ ಮತ್ತು ಜಂಬೂದ್ವೀಪ, ವಿಶ್ವದ ಅತ್ಯಂತ ಶ್ರೇಷ್ಠ ಉಪದೇಶವಾದ ಚತುರಾರ್ಯ ಸತ್ಯ, ಕೌಟುಂಬಿಕ ಶಾಂತಿ ಮತ್ತು ಸುಭಿಕ್ಷೆಯನ್ನುಂಟು ಮಾಡುವ ಬೌದ್ಧ ರಕ್ಷಣಾ ಮಂತ್ರಗಳು, ಬುದ್ಧಾಯುರ್ವೇದ್ ಮಾಸಪತ್ರಿಕೆಗಳು, ಕನ್ನಡದಲ್ಲಿ ಪ್ರಥಮ ಬಾರಿಗೆ ಬುದ್ಧನ ಉನ್ನತ ಬೋಧನೆಯಾದ ಅಭಿದಮ್ಮ, ವಿಪಸ್ಸನಧ್ಯಾನ ಕ್ರಮವನ್ನು ವಿವರಿಸುವ ಮಹಾಸತಿಪಟ್ಟಾನಸುತ್ತ, ಧಮ್ಮಪದ, ಮಿಲಿಂದಪನ್ನ, ಜಾತಕ ಕತೆಗಳು, ಯೋಗ, ದಿನಚರ್ಯ, ನಡಿಗೆಯ ಧ್ಯಾನ ಮತ್ತು ಧ್ಯಾನಾಸಕ್ತರಿಗೆ ಧ್ಯಾನದ ಸಮಯದಲ್ಲಿ ತೊಂದರೆ ಕೊಡುವ ವಿವಿಧ ಆಲೋಚನೆಗಳ ನಿವಾರಣೆಯ ಮಾಹಿತಿ ನೀಡುವ ಮುನಿಯೋಗ, ರಾಜ್ಯದ ನೆಲ ಜಲ ಹಾಗೂ ವಾಯುಮಾಲಿನ್ಯಗಳಿಂದ ರಕ್ಷಣೆ ಮತ್ತು ರೈತರ ಆದಾಯ ಹೆಚ್ಚಿಸಲು ಗಿಡಮೂಲಿಕೆ ಕೃಷಿಯ ಮಾಹಿತಿನೀಡುವ ವನದೇಗುಲ, ದೀರ್ಘಕಾಲೀನ ಕಾಯಿಲೆಗಳಿಗೆ ದೇಹ ಪ್ರಕೃತಿಯ ಆಧಾರದ ಮೇಲೆ ಉತ್ಕ್ರಷಮಟ್ಟದ ಬುದ್ದಾಯುರ್ವೇದ್ ಔಷಧಿಗಳು ಮತ್ತು ಚಿಕಿತ್ಸಾ ಕಲ್ಪಗಳ ಮಾಹಿತಿ, ಮದ್ಯಪಾನ ಹಾಗೂ ಮಾದಕದ್ರವ್ಯ ಸೇವನೆಯಂತಹ ಸಾಮಾಜಿಕ ಪಿಡುಗು ನಿವಾರಣೆಯ ಚಿಕಿತ್ಸಾ ಮಾಹಿತಿ ನೀಡುವ ಮದಾತ್ಯಯಕಲ್ಪ ಮುಂತಾದ ಪುಸ್ತಕಗಳ್ನುಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಬುದ್ದಾಯುರ್ವೇದ್ ಆ್ಯಪ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್ ನಲ್ಲಿ ಲಭ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
Naxal Encounter: ಬಂಧಿತ ಸುರೇಶ್ ಅಂಗಡಿ ಮಾಹಿತಿಯಂತೆ ʼಆಪರೇಷನ್ ವಿಕ್ರಂ ಗೌಡʼ
Naxal Encounter: ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ
Naxal: ವಿಕ್ರಂ ಗೌಡನ ಸುಳಿವು ಎಪ್ರಿಲ್‌ನಲ್ಲೇ ಸಿಕ್ಕಿತ್ತು: ಡಿಜಿಪಿ ಪ್ರಣವ್ ಮೊಹಂತಿ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.