ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು
ಕೋವಿಡ್ ಭೀತಿ - ಪ್ರಯಾಣಿಕರ ಸಂಖ್ಯೆ ಇಳಿಮುಖ
Team Udayavani, Jul 10, 2020, 5:50 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುತ್ತಿದ್ದು, ಇದರಿಂದ ಕರಾವಳಿಯಿಂದ ಬೆಂಗಳೂರಿಗೆ ಸಂಚರಿಸಲು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಹಿಂದೇಟು ಹಾಕುತ್ತಿದೆ. ಸರಕಾರಿ ಬಸ್‌ಗಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಮುಖಗೊಂಡಿದೆ.
ಲಾಕ್‌ಡೌನ್‌ಗಿಂತ ಮೊದಲು ಕುಂದಾಪುರ, ಬೈಂದೂರು ಕಡೆಯಿಂದ 50-60 ಖಾಸಗಿ ಬಸ್‌ಗಳು ಪ್ರತಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದವು. ಲಾಕ್‌ಡೌನ್ ಸಡಿಲಿಕೆ ಆದ ಆರಂಭದಲ್ಲಿ 10-12 ಖಾಸಗಿ ಬಸ್‌ಗಳು ಆದರೆ ಈಗ ದಿನಕ್ಕೆ 4-5 ಬಸ್‌ಗಳಷ್ಟೇ ಸಂಚರಿಸುತ್ತಿದೆ. ಇದು ಕುಂದಾಪುರ ಮಾತ್ರವಲ್ಲ ಉಡುಪಿ, ಕಾರ್ಕಳ, ಮಂಗಳೂರಿನಿಂದ ಹೊರಡುವ ಬಸ್‌ಗಳ ಸ್ಥಿತಿಯೂ ಬಹುತೇಕ ಹೀಗೆ ಇದೆ. ಕೆಲ ಸಂಸ್ಥೆಗಳು ಸಂಪೂರ್ಣ ಸ್ಥಗಿತಗೊಳಿಸಿದ್ದರೆ, ಮತ್ತೆ ಕೆಲವು ಸಂಸೆ§ಗಳ ಒಂದೆರಡು ಬಸ್‌ಗಳಷ್ಟೇ ಸಂಚರಿಸುತ್ತಿದೆ. ಮತ್ತೆ ಕೆಲವು ಇದುವರೆಗೂ ಸಂಚಾರವನ್ನೇ ಆರಂಭಿಸಿಲ್ಲ.
ಕೆಎಸ್‌ಆರ್‌ಟಿಸಿಯೂ ಇಳಿಕೆ
ಖಾಸಗಿ ಮಾತ್ರವಲ್ಲ ಬೆಂಗಳೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲು ಕುಂದಾಪುರದಿಂದ ರಾಜಧಾನಿಗೆ ನಿತ್ಯ ರಾತ್ರಿ 10 ಬಸ್‌ಗಳು ಸಂಚರಿಸುತ್ತಿದ್ದವು. ಲಾಕ್‌ಡೌನ್ ಸಡಿಲಿಕೆಯಾದ ಅನಂತರ 5 -6 ಬಸ್ ಸಂಚರಿಸುತ್ತಿದ್ದರೆ ಈಗ ಕೇವಲ 3 ಬಸ್‌ಗಳು ಮಾತ್ರ ಸಂಚರಿಸುತ್ತಿವೆ.
ಯಾಕೆ?
ಬೆಂಗಳೂರಿನಲ್ಲಿ ಕೋವಿಡ್ ಜಾಸ್ತಿಯಾಗುತ್ತಿದ್ದು, ಇದರಿಂದ ಅಲ್ಲಿಗೆ ಹೋಗಲು ಚಾಲಕ – ನಿರ್ವಾಹಕರು ಹಿಂದೇಟು ಹಾಕ ು ತ್ತಿ ದ್ದಾರೆ. ಹೋದರೂ ಅಲ್ಲಿ ಊಟ, ತಿಂಡಿಗೆಲ್ಲ ಸರಿಯಾದ ವ್ಯವಸ್ಥೆ ಇರುವುದಿಲ್ಲ ಎನ್ನುವ ಅಳಲು ಇವರದ್ದಾಗಿದೆ. ಇದ ಲ್ಲದೆ ಲಾಕ್‌ಡೌನ್ ಸಡಿಲಿಕೆಯಾದ ಆರಂಭ ದಲ್ಲಿ ಕುಂದಾಪುರ, ಬೈಂದೂರು, ಉಡುಪಿ, ಮಂಗಳೂರು ಕಡೆ ಯಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾ ಣಿಕರ ಸಂಖ್ಯೆ ಜಾಸ್ತಿಯಾಗಿತ್ತು. ಆದರೆ ಈಗ ಇಲ್ಲಿಂದ ಆ ಕಡೆಗೆ ತೆರಳುವವರ ಸಂಖ್ಯೆ ಇಳಿಮುಖಗೊಂಡಿದೆ.
ಬರುವ ಬಸ್‌ಗೆ ಬೇಡಿಕೆ
ಕೋವಿಡ್ ಭೀತಿಯಿಂದಾಗಿ ಬೆಂಗಳೂರಿ ನಲ್ಲಿರುವವರು ಬಹುತೇಕ ಮಂದಿ ಊರಿಗೆ ತೆರಳುತ್ತಿದ್ದು, ಹಾಗಾಗಿ ಅಲ್ಲಿಂದ ಕರಾವಳಿ ಕಡೆಗೆ ಬರುವ ಬಸ್‌ಗಳಲ್ಲಿ ಬೇಡಿಕೆಯಿದೆ. ಆನ್‌ಲೈನ್ ಬುಕ್ಕಿಂಗ್‌ನಲ್ಲಿಯೇ ಟಿಕೇಟುಗಳು ಬಹುತೇಕ ಖಾಲಿಯಾಗುತ್ತವೆ.
ನಷ್ಟದ ಸಂಚಾರ
ಈಗ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಇಳಿಮುಖಗೊಂಡಿದ್ದು, ಇದರಿಂದ ಬಹುತೇಕ ಬಸ್‌ಗಳು ನಷ್ಟದಲ್ಲಿಯೇ ಸಂಚರಿಸುತ್ತಿವೆ. ಒಂದು ಬಸ್‌ಗೆ ಕುಂದಾಪುರದಿಂದ ಬೆಂಗಳೂರಿಗೆ ಹೋಗಿ ಬರಲು ಕನಿಷ್ಠ 16 ಸಾವಿರ ರೂ. ಖರ್ಚಾಗುತ್ತದೆ. ಬೆರಳೆಣಿಕೆಯ ಪ್ರಯಾಣಿಕರಿದ್ದರೆ ಹೇಗೆ ಹೋಗುವುದು ಎಂದು ಪ್ರಶ್ನಿಸುತ್ತಾರೆ ಖಾಸಗಿ ಬಸ್‌ನ ಮಾಲಕರೊಬ್ಬರು.
8 ಬಸ್ ಕೆಎಸ್‌ಆರ್‌ಟಿಸಿ ಬಸ್
ಕೋವಿಡ್‌ಗಿಂತ ಮುಂಚೆ ಉಡುಪಿ, ಕುಂದಾಪುರ ಭಾಗದಿಂದ ದಿನಕ್ಕೆ 40 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತಿದ್ದವು. ಸಡಿಲಿಕೆ ಆದ ಅನಂತರ 25 ಬಸ್‌ಗಳು ಸಂಚಾರವನ್ನು ಆರಂಭಿಸಿದವು. ಆದರೆ ಕಳೆದ ವಾರದಿಂದ ಕೋವಿಡ್ ಜಾಸ್ತಿಯಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದೆ. ಇದರಿಂದ ಪ್ರಸ್ತುತ 7-8 ಬಸ್‌ಗಳಷ್ಟೇ ಸಂಚರಿಸುತ್ತಿವೆ.
-ಉದಯ ಕುಮಾರ್ ಶೆಟ್ಟಿ, ,
ಘಟಕ ವ್ಯವಸ್ಥಾಪಕರು ಉಡುಪಿ ವಿಭಾಗ, ಕೆಎಸ್‌ಆರ್‌ಟಿಸಿ
ಸೀಮಿತ ಬಸ್ ಸಂಚಾರ
ನಾವು ಜನರ ಪ್ರಯೋಜನಕ್ಕಾಗಿ ಲಾಕ್‌ಡೌನ್ ಸಡಿಲಿಕೆಯಾದಾಗ ಬಸ್ ಸಂಚಾರ ಆರಂಭಿಸಿದ್ದೆವು. ಆದರೆ ಜನರೇ ಸಂಚರಿಸಲು ಹಿಂದೇಟು ಹಾಕುತ್ತಿರುವುದರಿಂದ, ಕೆಲ ಬಸ್‌ಗಳು ನಷ್ಟದಲ್ಲಿಯೇ ಸಂಚರಿಸಬೇಕಾಗುವುದರಿಂದ ಕೆಲವು ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಆದರೆ ಸಂಪೂರ್ಣ ಬಸ್ ಸಂಚಾರ ಸ್ಥಗಿತ ಮಾಡಿಲ್ಲ. ಸೀಮಿತ ಸಂಖ್ಯೆ ಬಸ್‌ಗಳು ಪ್ರತಿ ನಿತ್ಯ ಸಂಚರಿಸುತ್ತವೆ.
-ಅನಿಲ್ ಚಾತ್ರ,
ಮಾಲಕರು ಶ್ರೀ ದುರ್ಗಾಂಬಾ ಬಸ್, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.