Byndoor : ಕಾರ್ಯಕರ್ತರಿಂದ ಕ್ಷೇತ್ರದೆಲ್ಲೆಡೆ ಸಮಾಜಮುಖಿ ಕಾರ್ಯ
ಗುರುರಾಜ್ ಗಂಟಿಹೊಳೆ ಹುಟ್ಟು ಹಬ್ಬ
Team Udayavani, May 13, 2024, 6:50 AM IST
ಉಪ್ಪುಂದ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕ್ಷೇತ್ರದ ಹಲವೆಡೆ ವಿಭಿನ್ನ ರೀತಿಯ ಸಮಾಜ ಮುಖಿ ಕೆಲಸಗಳನ್ನು ಮಾಡಿ ಮಾದರಿಯಾದರು.
ಮೇ 12ರಂದು ಶಾಸಕ ಗಂಟಿಹೊಳೆ ಅವರ ಜನ್ಮದಿನವಾಗಿದ್ದು ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಶಕ್ತರಿಗೆ ನೇರವು, ಗಿಡ ನೆಡುವುದು, ರಕ್ತದಾನ, ಸಾರ್ವಜನಿಕರಿಗೆ ತಂಪು ಪಾನೀಯ ವಿತರಣೆ, ಶಾಲೆಗೆ ಕೊಡುಗೆ, ಮನೆ ದುರಸ್ತಿ ಮಾಡಿಕೊಡುವ ಮೂಲಕ ಶಾಸಕರ ಹುಟ್ಟು ಹಬ್ಬವನ್ನು ಆಚರಿಸಿದರು.
ಗೋಪಾಲ್ ಪೂಜಾರಿ ವಸ್ರೆ ಹಾಗೂ ಉಮೇಶ ನೇತೃತ್ವದಲ್ಲಿ ಗೌರಿ ಮರಾಠಿ ನೀರೋಡಿ ಅವರ ಮನೆ ದುರಸ್ತಿಯನ್ನು ಸರಿಪಡಿಸಿ ಆಶ್ರಯಕ್ಕೆ ಸಂಪೂರ್ಣ ಅವಕಾಶ ಮಾಡಿಕೊಟ್ಟರು.ಬೈಂದೂರು ಪರಿಸರದಲ್ಲಿ ಸಮೃದ್ಧ ಹಸುರು ಕಾರ್ಯಕ್ರಮ ಆಯೋಜಿಸಿ ನೂರಾರು ಗಿಡಗಳನ್ನು ನೆಟ್ಟು ಪರಿಸರ ಸ್ನೇಹಿಯಾಗಿ ಕ್ಷೇತ್ರದ ಶಾಸಕರ ಜನ್ಮದಿನವನ್ನು ಆಚರಿಸಿ ಸಂಭ್ರಮಿಸಿದರು. ಬೈಂದೂರು ಶ್ರೀ ಸೇನೇಶ್ವರ ದೈವಸ್ಥಾನದ ಮನ್ಮಹಾ ರಥೋತ್ಸವದಲ್ಲಿ ಸಾರ್ವಜನಿಕರಿಗೆ ತಂಪು ಪಾನೀಯ ವಿತರಣೆ ಮಾಡಿದರು.
ಅಭಿಮಾನಿಗಳು, ಹಿತೈಷಿಗಳು ಕುಂದಾಪುರದ ರೆಡ್ ಕ್ರಾಸ್ ಘಟಕದಲ್ಲಿ ರಕ್ತದಾನ ಮಾಡಿದರು. ಪಡುವರಿ ಕ್ಲಿನ್ ಕಿನಾರಾ ತಂಡ ಹಾಗೂ ಗಂಟಿಹೊಳೆ ಅಭಿಮಾನಿಗಳ ವತಿಯಿಂದ ಪಡುವರಿ, ಮರವಂತೆ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಅಸಹಾಯಕರಿಗೆ ನೆರವು ನೀಡಲಾಯಿತು.
ಕುಂದಾಪುರದ ಚೈತನ್ಯ ವೃದ್ಧಾಶ್ರಮದಲ್ಲಿ ಊಟದ ವ್ಯವಸ್ಥೆ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಅನಾಥಾಶ್ರಮಗಳಿಗೆ ನೆರವು ನೀಡುವುದಲ್ಲದೆ ಹಳ್ಳಿಗಳಲ್ಲಿ ದುರಸ್ತಿಯಲ್ಲಿರುವ ಮನೆಗಳನ್ನು ಸರಿಪಡಿಸಿಕೊಡುವ ಕಾರ್ಯಕ್ರಮ, ಹಾಗೂ ಮಂಕಿ ಸರಕಾರಿ ಶಾಲೆಗಳ ಮೇಲ್ಛಾವಣಿ ಸರಿಪಡಿಸುವ ಕಾರ್ಯಗಳನ್ನು ಮಾಡಿ ಶಾಸಕರ ಹುಟ್ಟುಹಬ್ಬವನ್ನು ಸಮಾಜಮುಖಿಯಾಗಿ ಆಚರಿಸುವ ಮೂಲಕ ಅಭಿಮಾನಿಗಳು, ಕಾರ್ಯಕರ್ತರು ಮಾದರಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್
Elephant: ಕಡಬದ ಐನೆಕಿದು, ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ
MAHE Convocation: ಕ್ಲಿಕ್ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್ ಭಟ್ಟಾಚಾರ್ಯ ಸಲಹೆ
Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್ ಶಾ
GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.