![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 7, 2019, 3:08 AM IST
ಬೆಂಗಳೂರು: 13 ಶಾಸಕರು ರಾಜೀನಾಮೆ ನೀಡಿರುವುದರಿಂದ 105 ಶಾಸಕ ಬಲ ಹೊಂದಿರುವ ಬಿಜೆಪಿಗೆ ಮತ್ತೆ ಸರ್ಕಾರ ರಚನೆ ಅವಕಾಶ ಸಿಗುವ ನಿರೀಕ್ಷೆ ಹುಟ್ಟಿಸಿದೆ. ರಾಜೀನಾಮೆಗೆ ನಾನಾ ಕಾರಣ ಹೇಳುತ್ತಿರುವ ಬಹುತೇಕರ ಮೇಲೆ “ಆಪರೇಷನ್ ಕಮಲ’ದ ಪ್ರಭೆ ಕಂಡು ಕಾಣದಂತಿದ್ದು, ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಮತ್ತೂಮ್ಮೆ ಕಮಲ ಅರಳುವುದೇ ಎಂಬ ಲೆಕ್ಕಾಚಾರ ಶುರುವಾಗಿದೆ.
ಕೇಂದ್ರದಲ್ಲಿ ಎರಡನೇ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿ ತಿಂಗಳು ಕಳೆಯುತ್ತಿದ್ದಂತೆ ರಾಜ್ಯ ರಾಜಕೀಯವು ರೋಚಕ ತಿರುವು ಪಡೆಯುತ್ತಿದೆ. ಮಧ್ಯಂತರ ಚುನಾವಣೆ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಬಿಜೆಪಿ ಸರ್ಕಾರ ರಚಿಸಿಯೇ ತೀರುವ ದೃಢ ನಿಶ್ಚಯದೊಂದಿಗೆ “ಕಾರ್ಯಾಚರಣೆ’ಗೆ ಇಳಿದಂತಿದೆ. ಕೇಂದ್ರದ ವರಿಷ್ಠರ ಪೈಕಿ ಪ್ರಭಾವಿ ಸಚಿವರೊಬ್ಬರು ರಾಜ್ಯ ರಾಜಕೀಯದ ಆಗುಹೋಗುಗಳ ಮೇಲ್ವಿಚಾರಣೆ ನಡೆಸುತ್ತಿದ್ದು, ಅದಕ್ಕೆ ರಾಜ್ಯದ ಆಯ್ದ ನಾಯಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಂದೆಯೂ ಯೋಜಿತ ರೀತಿಯಲ್ಲೇ ಮುಂದುವರಿಸುವ ಉತ್ಸಾಹದಲ್ಲಿರುವುದು ಕುತೂಹಲ ಮೂಡಿಸಿದೆ.
ಮೂರು ವಾರದಿಂದ ತಯಾರಿ: ಮೂರು ವಾರದ ಹಿಂದೆ ಬಿಜೆಪಿ ವರಿಷ್ಠರು ಸರ್ಕಾರ ರಚನೆ ಪ್ರಯತ್ನಕ್ಕೆ ಹಸಿರು ನಿಶಾನೆ ತೋರುತ್ತಿದ್ದಂತೆ ರಾಜ್ಯದ ಆಯ್ದ ನಾಯಕರು ಕ್ರಿಯಾಶೀಲರಾದರು. ವರಿಷ್ಠರ ಪರ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅವರು ಸೇರಿ ಆಯ್ದ ವರಿಷ್ಠರೊಂದಿಗೆ ಸಂಪರ್ಕದಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ರಾಜ್ಯ ಬಿಜೆಪಿಯ ಆಯ್ದ ನಾಯಕರೊಂದಿಗೆ ವ್ಯವಹರಿಸುತ್ತಿದ್ದಾರೆ. ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯರೊಬ್ಬರು ಈ ಕಾರ್ಯಾಚರಣೆ ಮುಖ್ಯ ಭೂಮಿಕೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಗೌಪ್ಯ ಕಾರ್ಯಸೂಚಿ: 12 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡುವ ವಿಚಾರವನ್ನು ಬಹುತೇಕ ಅಂತಿಮ ಕ್ಷಣದವರೆಗೆ ಗೌಪ್ಯವಾಗಿಟ್ಟುಕೊಳ್ಳುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ವಿಷಯ ತಿಳಿದು ಕಾಂಗ್ರೆಸ್, ಜೆಡಿಎಸ್ ನಾಯಕರು ಎಚ್ಚೆತ್ತುಕೊಳ್ಳುವ ವೇಳೆಗಾಗಲೇ ರಾಜೀನಾಮೆ ಸಲ್ಲಿಕೆಯಾಗಿತ್ತು.
ಬದಲಾದ ಕಾರ್ಯತಂತ್ರ: ಅತೃಪ್ತ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸುವ ಹಿಂದಿನ ತಂತ್ರಕ್ಕಿಂತ ಅತೃಪ್ತರಿಂದ ಮೊದಲೇ ರಾಜೀನಾಮೆ ಕೊಡಿಸಿ ಆನಂತರ ಒಟ್ಟಿಗೆ ಇಟ್ಟುಕೊಳ್ಳುವ ಕಾರ್ಯತಂತ್ರವನ್ನು ಈ ಬಾರಿ ಅನುಸರಿಸಿದಂತಿದೆ. ಹಾಗಾಗಿ ಸಾಮೂಹಿಕವಾಗಿ 12 ಶಾಸಕರು ರಾಜೀನಾಮೆ ನೀಡಿ ಆನಂತರ ರಾಜ್ಯಪಾಲರನ್ನೂ ಭೇಟಿಯಾಗಿ ತಮ್ಮ ರಾಜೀನಾಮೆ ಖಾತರಿಪಡಿಸಿ ಬಳಿಕವಷ್ಟೇ ಮುಂಬೈಗೆ ತೆರಳಿದ್ದಾರೆ.
ವರ್ಚಸ್ವಿ ನಾಯಕರಿಗೆ ಆದ್ಯತೆ: ಈ ಹಿಂದೆ ಅತೃಪ್ತ ಶಾಸಕರನ್ನು ಸೆಳೆಯುವ ಅನುಭವವಿದ್ದ ಬಿಜೆಪಿ ಈ ಬಾರಿ ತುಸು ವರ್ಚಸ್ವಿ ಹಾಗೂ ಪ್ರಭಾವಿ ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ನಡೆಸಿತ್ತು. ವಿವಾದ, ಆರೋಪ, ಅಪಖ್ಯಾತಿ ಹೊತ್ತವರಿಗಿಂತಲೂ ವೈಯಕ್ತಿಕ ನಡತೆ, ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಹೊಂದಿರುವವರನ್ನು ಸೆಳೆಯುವತ್ತ ಚಿತ್ತ ಹರಿಸಿತ್ತು. ಇದೇ ಕಾರಣಕ್ಕೆ ಎಚ್.ವಿಶ್ವನಾಥ್, ರಾಮಲಿಂಗಾರೆಡ್ಡಿಯವರಂತಹ ಹಿರಿಯ ನಾಯಕರನ್ನೇ ಸಂಪರ್ಕಿಸಿ ಆಯಾ ಪಕ್ಷಗಳ ನಾಯಕರಿಗೆ ಮುಖಭಂಗ ಉಂಟು ಮಾಡುವ ಕಾರ್ಯವನ್ನು ಬಿಜೆಪಿ ಸದ್ದಿಲ್ಲದೆ ಮಾಡಿ ಮುಗಿಸಿದೆ.
* ಎಂ. ಕೀರ್ತಿಪ್ರಸಾದ್
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.