ಕಾಂಬೋಡಿಯ: ಕೆಲಸ ಕಳೆದುಕೊಂಡ ಕಾರ್ಮಿಕರು
Team Udayavani, Jun 19, 2020, 12:54 PM IST
ಕಾಂಬೋಡಿಯ: ಜವಳಿ ಉದ್ಯಮಕ್ಕೆ ಪ್ರಸಿದ್ಧಿ ಪಡೆದ ಕಾಂಬೋಡಿಯಾದಲ್ಲಿ ಕೋವಿಡ್ ವೈರಸ್‌ನಿಂದಾಗಿ ಹಲವಾರು ಉಡುಪು ತಯಾರಿಸುವ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.
ಕಾಂಬೋಡಿಯದ ನೊಮ್ ಪೆನ್‌ನ ಹೊರವಲಯದಲ್ಲಿರುವ ಜವಳಿ ಉದ್ಯಮಗಳಲ್ಲಿ ನೂರಾರು ಕಾರ್ಮಿಕರನ್ನು ಶಿಪ್ಟ್ಗಳಲ್ಲಿ ದುಡಿಸಲಾಗುತ್ತಿದೆ. ಇನ್ನು ಹಲವಾರು ಮಂದಿಯನ್ನು ಉದ್ಯೋಗದಿಂದ ಕೈಬಿಡಲಾಗಿದೆ.
ಕೋವಿಡ್ ವೈರಸ್ ತಡೆಯುವ ಕ್ರಮವಾಗಿ ಹೇರಲಾದ ನಿರ್ಬಂಧಗಳ ಹಿನ್ನೆಲೆಯಲ್ಲಿ ವ್ಯಾಪಾರ – ವ್ಯವಹಾರ ನಡೆಯದೆ ಹಲವು ಉದ್ಯಮಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕೆಲವು ಕಾರ್ಖಾನೆಗಳು ಮುಚ್ಚಲ್ಪಟಿವೆ. ಇದರಿಂದ ಅನೇಕ ಕಾರ್ಮಿಕರು ಉದ್ಯೋಗ ನಷ್ಟ ಹೊಂದುವಂತಾಗಿದೆ.
ಕಾಂಬೋಡಿಯಾದ ಜವಳಿ ಉದ್ಯಮವು ಸುಮಾರು 8,50,000 ಉದ್ಯೋಗಗಿಗಳನ್ನು ಹೊಂದಿದ್ದು, ದೇಶದ ಆರ್ಥಿಕತೆಗೆ 7 ದಶಲಕ್ಷ ಆದಾಯ ಒದಗಿಸುತ್ತಿತ್ತು. ಕೋವಿಡ್ -19ನಿಂದಾಗಿ ಪ್ರಮುಖ ಪಾಶ್ಚಿಮಾತ್ಯ ಚಿಲ್ಲರೆ ವ್ಯಾಪಾರಿಗಳು ತಮ್ಮ ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಇನ್ನು ಕೆಲವರು ರಿಯಾಯಿತಿ ದರದಲ್ಲಿ ಪೂರೈಕೆ ಮಾಡುವಂತೆ ಕೋರಿದ್ದಾರೆ. ಇದರಿಂದ ಇಲ್ಲಿನ 600 ಉಡುಪು ಕಾರ್ಖಾನೆಗಳಲ್ಲಿ ಆರ್ಥಿಕ ನಷ್ಟ ಸಂಭವಿಸಿದ ಮೂರನೇ ಒಂದು ಭಾಗದಷ್ಟು ಮುಚ್ಚಲ್ಪಟ್ಟಿವೆ. ಉದ್ಯೋಗ ಕಳೆದುಕೊಂಡವರಲ್ಲಿ ಮಹಿಳೆಯರು, 20 ವರ್ಷ ವಯಸ್ಸಿನೊಳಗಿನವರು ಅನೇಕರಿದ್ದು, ಅವರೆಲ್ಲ ದಿನ ನಿತ್ಯದ ಆಹಾರಕ್ಕಾಗಿ ಪರದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.