Canada: ಭಾರತ ವಿರುದ್ಧ ಕೆನಡಾ ಪ್ರಧಾನಿ ಟ್ರಾಡೊ ಮತ್ತೆ ತಕರಾರು
Team Udayavani, Nov 12, 2023, 11:35 PM IST
ಒಟ್ಟಾವಾ: ಹೊಸದಿಲ್ಲಿಯಲ್ಲಿ ಇದ್ದ 40 ಕೆನಡಾ ರಾಜತಾಂತ್ರಿಕರಿಗೆ ನೀಡಿದ್ದ ರಕ್ಷಣೆ ರದ್ದುಪಡಿಸಿದಕ್ಕೆ ಭಾರತದ ವಿರುದ್ಧ ಮತ್ತೂಮ್ಮೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾವದಲ್ಲಿ ಮಾತನಾಡಿದಅವರು “ಭಾರತದಂತಹ ದೊಡ್ಡ ದೇಶಗಳೇ ಪರಿಣಾಮಗಳ ಕುರಿತು ಯೋಚಿಸದೇ ವಿಯೆನ್ನಾ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂ ಸಿದರೆ, ಜಗತ್ತು ಎಲ್ಲರಿಗೂ ಹೆಚ್ಚು ಅಪಾಯಕಾರಿ ಆಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಖಲಿಸ್ಥಾನ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಸಾಕ್ಷ್ಯಗಳನ್ನು ಭಾರತದೊಂದಿಗೆ ನಾವು ಹಂಚಿಕೊಂಡಿದ್ದೇವೆ. ಕೆನಡಾದ ನೆಲದಲ್ಲಿ ಕೆನಡಾ ಪ್ರಜೆಗಳ ಹತ್ಯೆಯಲ್ಲಿ ಭಾರತ ಸರಕಾರ ಭಾಗಿಯಾಗಿದೆ’ ಎಂದು ಆರೋಪಿಸಿದ್ದಾರೆ.
ಜೈಶಂಕರ್ ತಿರುಗೇಟು: ಕೆನಡಾ ಪ್ರಧಾನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, “ನಿಜ್ಜರ್ ಹತ್ಯೆ ಕುರಿತು ಸೂಕ್ತ ಸಾಕ್ಷ್ಯಗಳು ಇದ್ದರೆ ಭಾರತದೊಂದಿಗೆ ಹಂಚಿಕೊಳ್ಳುವಂತೆ ಕೆನಡಾಕ್ಕೆ ನಾವು ಪದೇ ಪದೆ ತಿಳಿಸಿದ್ದೇವೆ. ತನಿಖೆಗೆ ಸಹಕರಿಸಲು ನಾವು ಸಿದ್ಧರಿದ್ದೇವೆ. ಆದರೆ ಇದುವರಿಗೂ ಕೆನಡಾ ಯಾವುದೇ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.