Canara Bank: “ಮಣಿಪಾಲ್ ಟೌನ್‌ಹಾಲ್ ಮೀಟಿಂಗ್”
Team Udayavani, Aug 9, 2023, 11:15 PM IST
ಮಣಿಪಾಲ: ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗಲು ಸಿಬಂದಿಯ ಪ್ರಾಮಾಣಿಕ ಕಾರ್ಯಕ್ಷಮತೆ ಮತ್ತು ಗ್ರಾಹಕರ ನಿರಂತರ ಪ್ರೋತ್ಸಾಹವೇ ಕಾರಣ
ಎಂದು ಕೆನರಾ ಬ್ಯಾಂಕ್ ಬೆಂಗಳೂರು ಪ್ರಧಾನ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ದೆಬಾಶಿಷ್ ಮುಖರ್ಜಿ ಹೇಳಿದರು.
ಕೆನರಾ ಬ್ಯಾಂಕ್ ಆಶ್ರಯದಲ್ಲಿ ಮಣಿಪಾಲ ವೃತ್ತ ಕಚೇರಿಯ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಲಾದ “ಮಣಿಪಾಲ್ ಟೌನ್‌ಹಾಲ್ ಮೀಟಿಂಗ್’ ಅನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್‌ನಲ್ಲಿ ಗ್ರಾಹಕರ ಅಗತ್ಯಕ್ಕೆ ಪೂರಕವಾದ ಸಾಕಷ್ಟು ಹೊಸ ಹೊಸ ಯೋಜನೆಗಳು, ಆರ್ಥಿಕ ಉತ್ಪನ್ನ ಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇದನ್ನು ಗ್ರಾಹಕರಿಗೆ ಮುಟ್ಟಿ ಸುವ ಕಾರ್ಯವನ್ನು ಅಧಿಕಾರಿ ಗಳು ಮತ್ತು ಸಿಬಂದಿ ಮಾಡ ಬೇಕಾಗಿದೆ. ಬ್ಯಾಂಕ್ ನೀಡಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಸೇವೆ ಗಳನ್ನು ನೀಡಿದಾಗ ಗ್ರಾಹಕರು ಸಂತೃಪ್ತಿಗೊಳ್ಳುತ್ತಾರೆ. ಅಲ್ಲದೆ ಬ್ಯಾಂಕ್ ನಲ್ಲಿ ತಮ್ಮ ವ್ಯವಹಾರವನ್ನು ಮುಂದು ವರಿಸುತ್ತಾರೆ ಎಂದವರು ತಿಳಿಸಿದರು.
ಬ್ಯಾಂಕ್‌ನಲ್ಲಿರುವ ಅತ್ಯಾಧುನಿಕ ಸೇವೆಗಳು, ವಿವಿಧ ಉತ್ಪನ್ನಗಳು, ಬ್ಯಾಂಕ್‌ನತ್ತ ಹೊಸ ಯುವ ಗ್ರಾಹಕ ರನ್ನು ಸೆಳೆಯುವ ತಂತ್ರಗಾರಿಕೆ ಹಾಗೂ ಬ್ಯಾಂಕ್‌ನಲ್ಲಿ ಗ್ರಾಹಕಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಅನಂತರ ಬ್ಯಾಂಕ್‌ನ ಅಧಿಕಾರಿ ಗಳು ಮತ್ತು ಸಿಬಂದಿಯೊಂದಿಗೆ ನೇರ ಸಂವಾದ ನಡೆಸಿದರು.
ವೃತ್ತ ಕಚೇರಿಯ ಮಹಾಪ್ರಬಂಧಕ ಎಂ.ಜಿ. ಪಂಡಿತ್ ಪ್ರಸ್ತಾವನೆಗೈದು, ಪ್ರತಿಯೊಬ್ಬ ನೌಕರನೂ ಬ್ಯಾಂಕ್‌ನ ಆಸ್ತಿ ಇದ್ದಂತೆ. ಬ್ಯಾಂಕ್ ಏಳಿಗೆಯಾದರೆ ಮಾತ್ರ ನೌಕರನ ಏಳಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಸಲ್ಲಬೇಕಾದ ನ್ಯಾಯಯುತ ಸೇವೆ ಒದಗಿಸುವಲ್ಲಿ ಬ್ಯಾಂಕ್‌ನ ನೌಕರರ ಪಾತ್ರವೇನು? ಎಂಬ ಕುರಿತು
ದೀರ್ಘವಾಗಿ ಚರ್ಚಿಸುವ ಉದ್ದೇಶ ದಿಂದ ಟೌನ್ ಹಾಲ್ ಮೀಟಿಂಗ್ ಆಯೋಜಿಸ ಲಾಗಿದೆ ಎಂದು ಅತಿಥಿ ಯನ್ನು ಸ್ವಾಗತಿಸಿದರು.
ವೃತ್ತ ಕಚೇರಿಯಲ್ಲಿರುವ ಬ್ಯಾಂಕ್‌ನ ಸಂಸ್ಥಾಪಕರಾದ ಉಪೇಂದ್ರ ಅನಂತ ಪೈ, ಡಾ| ಟಿಎಂಎ ಪೈ, ವಾಮನ್ ಎಸ್. ಕುಡ್ವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಹಿರಿಯ ಪ್ರಬಂಧಕಿ ಸ್ವಪ್ನಾ ಶೆಟ್ಟಿ ನಿರೂಪಿಸಿದರು. ಉಪ ಮಹಾಪ್ರಬಂಧಕಿ ಸಬಿತಾ ಎಂ. ನಾಯಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.