US: ನನ್ನನ್ನು ಖರೀದಿಸಲು ಸಾಧ್ಯವಿಲ್ಲ: ವಿವೇಕ್ ರಾಮಸ್ವಾಮಿ ಚಾಟಿ
Team Udayavani, Aug 24, 2023, 9:07 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿ ಸ್ಥಾನದ ಜಟಾಪಟಿಯಲ್ಲಿ ಭಾರೀ ಸುದ್ದಿಯಾಗಿರುವ ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಉದ್ಯಮಿ ವಿವೇಕ್ ರಾಮಸ್ವಾಮಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಮೆರಿಕದ ಪ್ರಬಲ ಅಭ್ಯರ್ಥಿ ಆಕಾಂಕ್ಷಿಗಳ ನಡುವೆಯೇ, ಮಾರಾಟಕ್ಕಿಲ್ಲದ ಏಕೈಕ ವ್ಯಕ್ತಿ ನಾನೊಬ್ಬನೇ ಎಂದು ಘೋಷಿಸಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಉತ್ಸುಕರಾಗಿರುವ 8 ಮಂದಿ ಆಕಾಂಕ್ಷಿಗಳಿಗಾಗಿ ಚರ್ಚಾ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಪೈಕಿ ವಿವೇಕ್ ರಾಮಸ್ವಾಮಿಯೂ ಇದ್ದರು. ಆಕಾಂಕ್ಷಿಗಳ ನಡುವೆ ಮುಕ್ತ ಚರ್ಚೆ ಆರಂಭವಾಗುತ್ತಿದ್ದಂತೆ ಇತರೆ ಆಕಾಂಕ್ಷಿಗಳು ವಿವೇಕ್ ಅವರನ್ನು ಗುರಿಯಾಗಿಸಿ ಅವರೊಬ್ಬ ರಾಜಕೀಯ ಅನುಭವವೇ ಇಲ್ಲದ ವ್ಯಕ್ತಿ, ಅಂಥವರಿಗೆ ದೇಶದ ಅಧ್ಯಕ್ಷ ಸ್ಥಾನ ನೀಡಲು ಸಾಧ್ಯವೇ ಇಲ್ಲ. ಅವರ ಭಾಷಣಗಳು ಚಾಟ್ ಜಿಪಿಟಿಯ ನಕಲುಗಳು ಅವುಗಳನ್ನು ನಂಬಿ, ದೇಶ ನಡೆಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ವಿವೇಕ್, ಅನುಭವಿ ರಾಜಕಾರಣಿಗಳು ಸಿದ್ಧ ಘೋಷಣೆಗಳಿಂದ ದೇಶ ನಡೆಸಿದ್ದು ಸಾಕು, ಇನ್ನಾದರೂ ಜನರ ಮುಕ್ತ ಚರ್ಚೆಗಳು ಆರಂಭವಾಗಲಿ ಎಂದಿದ್ದಾರೆ. ಅಲ್ಲದೇ, ನನ್ನನ್ನು ಈ ದೇಶ ಸ್ವೀಕರಿಸಲು ಒಪ್ಪಿದೆ. ಕಾರಣ, ಈ ವೇದಿಕೆಯಲ್ಲಿ ದುಡ್ಡಿಗೆ ಮಾರಾಟವಾಗದ, ಕೊಂಡುಕೊಳ್ಳಲು ಸಾಧ್ಯವೂ ಇಲ್ಲದ ವ್ಯಕ್ತಿ ನಾನೊಬ್ಬನೇ ಎಂದು ವಿವೇಕ್ ಚಾಟಿ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.