Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ
Team Udayavani, May 10, 2024, 10:33 PM IST
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೋಮಂತಡ್ಕ ಪೇಟೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಪಕ್ಕದ ಕಟ್ಟಡದ ಶೆಡ್ಡಿನ ಕಂಬಕ್ಕೆ ಢಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ.
ಕಾರಿನಲ್ಲಿ ಮೂರು ಮಂದಿ ಇದ್ದು ಮೂರು ಮಂದಿಗೂ ಗಾಯವಾಗಿದೆ. ಈ ಪೈಕಿ ಇಬ್ಬರಿಗೆ ಹೆಚ್ಚಿನ ಗಾಯವಾಗಿದೆ.
ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದು ಅಪಘಾತದ ನಡೆದ ಸ್ಥಳದಲ್ಲೇ ಇದ್ದ ಎಎಸ್‌ಐ ದುರ್ಗಾದಾಸ್, ಹೆಡ್ ಕಾನ್‌ಸ್ಟೆಬಲ್ ಲಕ್ಷ್ಮಣ ಲಮಾಣಿ ಅವರು ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳ ವಿವರ ತಿಳಿದುಬಂದಿಲ್ಲ.ಕಾರಿನೊಳಗಡೆ ಮದುವೆ ವೇದಿಕೆ ಅಲಂಕಾರ ಮಾಡುವ ಸಾಧನಗಳು ಮತ್ತು ಲೈಟಿಂಗ್ ಉಪಕರಣಗಳು ಇತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.