ಉಡುಪಿ: ಉಚಿತ ಪಡಿತರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಾರ್ಡ್ ರದ್ದು
Team Udayavani, Apr 28, 2022, 7:25 AM IST
ಉಡುಪಿ: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಉಚಿತ ಪಡಿತರ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುವವರ ಪಡಿತರ ಚೀಟಿಯೇ ರದ್ದಾಗಲಿದೆ.
ಅಂತ್ಯೋದಯ ಚೀಟಿ ಹಾಗೂ ಆದ್ಯತಾ ಕುಟುಂಬ (ಬಿಪಿಎಲ್)ದ ಚೀಟಿಗೆ ಉಚಿತ ಅಕ್ಕಿ ನೀಡಲಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಚ್ಚಲು ಅಕ್ಕಿ ಬದಲಿಗೆ ಬೆಳ್ತಿಗೆಯನ್ನು ಹೆಚ್ಚಾಗಿ ನೀಡುವುದರಿಂದ ಬಹುತೇಕರು ಅದನ್ನು ತಿಂಡಿಗೆ ಉಪಯೋಗಿಸುತ್ತಾರೆ ಮತ್ತು ಉಳಿದ ಅಕ್ಕಿಯನ್ನು ಕೆ.ಜಿ.ಗೆ 10ರಿಂದ 12 ರೂ.ಗಳಂತೆ ಮಾರಾಟ ಮಾಡುತ್ತಾರೆ. ಈ ಬಗ್ಗೆ ಖಚಿತ ದೂರು ಅಥವಾ ಮಾಹಿತಿ ಇಲಾಖೆಗೆ ಬಂದರೆ ಆಯಾ ತಾಲೂಕಿನ ಆಹಾರ ನಿರೀಕ್ಷಕರ ಮೂಲಕ ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗುತ್ತದೆ. ಉಭಯ ಜಿಲ್ಲೆಗಳಲ್ಲಿ ಈಗಾಗಲೇ ಈ ರೀತಿ ನೂರಾರು ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಮುಂದೆ ಮಾರಾಟ ಮಾಡಿದವರ ಕಾರ್ಡ್ ಕೂಡ ರದ್ದು ಮಾಡಲಾಗುತ್ತದೆ. ಈ ಅಧಿಕಾರ ಇಲಾಖೆಯ ಅಧಿಕಾರಿಗಳಿಗೆ ಇದೆ.
ಮನೆ ಬಾಗಿಲಿಗೆ ಬಂದು ಖರೀದಿ!
ಅನೇಕ ಹಳ್ಳಿಗಳಲ್ಲಿ ಪಡಿತರ ವ್ಯವಸ್ಥೆಯಲ್ಲಿ ಪಡೆದ ಅಕ್ಕಿಯನ್ನು ಖರೀದಿಸಲು ಮನೆ ಮನೆಗೆ ಸಗಟು ವ್ಯಾಪಾರಸ್ಥರು ಹೋಗುತ್ತಾರೆ. ಪಡಿತರ ವಿತರಣೆಯಾದ ಮೂರ್‍ನಾಲ್ಕು ದಿನಗಳ ಅನಂತರ ಅಥವಾ ಎರಡು ಮೂರು ತಿಂಗಳಿ ಗೊಮ್ಮೆ ಒಂದೊಂದು ಮನೆಗೆ ಹೋಗುತ್ತಾರೆ. ಕನಿಷ್ಠ 50ರಿಂದ 100 ಕೆ.ಜಿ. ಇದ್ದರೆ ಮಾತ್ರ ಖರೀದಿಸುತ್ತೇವೆ ಎಂಬ ಷರತ್ತು ಹಾಕುತ್ತಾರೆ. ಕೆಲವು ಕಾರ್ಡ್‌ದಾರರು ಸ್ಥಳೀಯ ಅಂಗಡಿಗಳಿಗೂ ಮಾರುತ್ತಾರೆ. ಈಗಾಗಲೇ ಇಂತಹ ಕೆಲವು ಜಾಲವನ್ನು ಭೇದಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು.
ನಿರ್ದಾಕ್ಷಿಣ್ಯ ಕ್ರಮ
ಇದೊಂದು ವ್ಯವಸ್ಥಿತವಾದ ಜಾಲ. ಸರಕಾರದ ಸೌಲಭ್ಯ ದುರುಪಯೋಗ ಆಗಬಾರದು. ಈ ಬಗ್ಗೆ ಸ್ಥಳೀಯ ವಾಗಿಯೂ ಜಾಗೃತಿ ಮೂಡಿಸುತ್ತಿದ್ದೇವೆ. ನಿಖರವಾದ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಾಗುತ್ತದೆ. ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದಾಗ ಮಾತ್ರ ಪತ್ತೆ ಸಾಧ್ಯ ಎಂದು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
1967ಕ್ಕೆ ಕರೆ ಮಾಡಿ
ಪಡಿತರ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರುತ್ತಿರುವ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸಹಾಯವಾಣಿ 1967ಕ್ಕೆ ಅಥವಾ ತಹಶೀಲ್ದಾರ್ ಕಚೇರಿ/ಉಪ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಒಂದು ದೂರು ಬಂದಿದೆ. ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆಹಾರ ನಿರೀಕ್ಷಕರ ಮೂಲಕ ಆಗಿಂದಾಗೆ ದಾಳಿ ಮಾಡಿಸುತ್ತಿರುತ್ತೇವೆ. ಕಾಳಸಂತೆಯಲ್ಲಿ ಪಡಿತರದ ಮಾರಾಟ – ಖರೀದಿ ಎರಡೂ ಗಂಭೀರ ಅಪರಾಧ. ಅಂಥವರ ಕಾರ್ಡ್ ರದ್ದು ಮಾಡುವ ಜತೆಗೆ ಖರೀದಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.
– ಮೊಹಮ್ಮದ್ ಐಸಾಕ್, ಕೆ.ಪಿ. ಮಧುಸೂದನ್,
ಉಪ ನಿರ್ದೇಶಕರು,
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಡುಪಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.