ಪಾಸ್‌ವರ್ಡ್ ಜೋಪಾನ: ಕಳ್ಳರು ಕೂಡಾ ವರ್ಕ್ ಫ್ರಮ್ ಹೋಮ…!
Team Udayavani, May 11, 2020, 3:27 PM IST
ಸಾಂದರ್ಭಿಕ ಚಿತ್ರ
ಆಫೀಸ್‌ನ ಕೆಲಸಗಳು ಮನೆಯಿಂದಲೇ ನಡೆಯುತ್ತಿರುವ ಈ ಸಮಯದಲ್ಲಿ, ಒಂದು ವಿಚಾರದ ಕುರಿತು ಹೆಚ್ಚಿನ ಗಮನ ಹರಿಸಬೇಕು. ಅದು ಸೈಬರ್ ಸೆಕ್ಯುರಿಟಿ. ದಿನದ ಬಹುತೇಕ ಸಮಯವನ್ನು ನಾವು ಇಂಟರ್ನೆಟ್‌ನಲ್ಲಿ ಕಳೆಯುತ್ತಿದ್ದೇವೆ. ಹೀಗಿರುವಾಗ, ಲಿಂಕುಗಳನ್ನು ಕ್ಲಿಕ್ ಮಾಡುವ ಮುನ್ನ, ಅನಾಮಿಕ ಇಮೇಲ್‌ಗೆ ರಿಪ್ಲೆ„ ಮಾಡುವ ಮುನ್ನ, ಯಾವ ಯಾವುದೋ ಜಾಲತಾಣಗಳಿಗೆ ಭೇಟಿ ನೀಡುವ ಮುನ್ನ, ಪರಾಮರ್ಶಿಸಬೇಕು. ಎಲ್ಲಕಿಂತ ಹೆಚ್ಚಾಗಿ, ಆನ್‌ಲೈನಿನಲ್ಲಿ ವಿವಿಧ ಜಾಲತಾಣ, ಇಮೇಲ್ ಖಾತೆ, ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್‌ಗಳು ಸ್ಟ್ರಾಂಗ್ ಇರಬೇಕು. ನಮ್ಮಲ್ಲಿ ಶಕ್ತಿವಂತ, ಬಲಹೀನ ವ್ಯಕ್ತಿಗಳಿರುವ ಹಾಗೆಯೇ, ಪಾಸ್‌ವರ್ಡ್ ಅನ್ನು ಕೂಡಾ ಸ್ಟ್ರಾಂಗ್, ವೀಕ್ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ.
ಮೂರನೇ ವ್ಯಕ್ತಿ ಊಹೆ ಮಾಡಲು ಎಷ್ಟು ಕಷ್ಟ ಎನ್ನುವುದರ ಆಧಾರದ ಮೇಲೆ, ಪಾಸ್‌ವರ್ಡ್‌ನ ಸಾಮರ್ಥ್ಯ ನಿರ್ಧರಿತವಾಗುತ್ತದೆ.
ಸ್ಟ್ರಾಂಗ್ ಪಾಸ್‌ವರ್ಡ್ ಹೇಗಿರುತ್ತೆ?
– ಪಾಸ್‌ವರ್ಡ್‌ನಲ್ಲಿ ಕನಿಷ್ಠ ಪಕ್ಷ 8-9 ಕ್ಯಾರೆಕ್ಟರ್‌ಗಳಾದರೂ ಇರಬೇಕು.
– ಸ್ಟ್ರಾಂಗ್ ಪಾಸ್‌ವರ್ಡ್‌ನಲ್ಲಿ, ಕೇವಲ ಅಕ್ಷರಗಳು ಮಾತ್ರವೇ ಇರುವುದಿಲ್ಲ. ಸ್ಮಾಲ್ ಲೆಟರ್- ಕ್ಯಾಪಿಟಲ್ ಲೆಟರ್, ಸಂಖ್ಯೆಗಳು, ಸಿಂಬಲ್‌ಗಳು- ಇವೆಲ್ಲವುಗಳ ಮಿಶ್ರಣ
ಇರುತ್ತದೆ.
– ಪಾಸ್‌ವರ್ಡ್‌ನಲ್ಲಿ ಬಳಕೆದಾರನು ತನ್ನ ಜನ್ಮದಿನಾಂಕ, ಹೆಸರನ್ನು ನಮೂದಿಸಬಾರದು.
– ಒಂದು ಕಡೆ ಬಳಸಿದ ಪಾಸ್ ವರ್ಡನ್ನು ಮತ್ತೂಂದು ಕಡೆ
ಬಳಸಬಾರದು.
– ಪಾಸ್‌ವರ್ಡ್‌ನಲ್ಲಿ ವೈಯಕ್ತಿಕ ಮಾಹಿತಿ ಇರದಂತೆ ಎಚ್ಚರವಹಿಸಿ.
– ಇಂಟರ್ನೆಟ್‌ನಲ್ಲಿ, ಸ್ಟ್ರಾಂಗ್ ಪಾಸ್ ವರ್ಡ್ ಕ್ರಿಯೇಟ್ ಮಾಡುವ ಹಲವು ಜಾಲತಾಣಗಳು ಸಿಗುತ್ತವೆ. ಅವುಗಳನ್ನು ಬಳಸುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ನಮ್ಮ ಪಾಸ್‌ವರ್ಡನ್ನು ನಾವೇ ಸಿದ್ಧಪಡಿಸುವುದು ಉತ್ತಮ.
ಟಾಪ್ ಕಾಮನ್ ಪಾಸ್ ವರ್ಡ್‌ಗಳು
– 123456
– test1
– password
– asdf
– querty
– iloveyou
– abc123
– 111111
– 123123
– princess
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.