ಜನವರಿ ಅಂತ್ಯಕ್ಕೆ ಕಾರ್ಗೋ ಟರ್ಮಿನಲ್ ಕಾರ್ಯಾರಂಭ
Team Udayavani, Nov 30, 2020, 12:05 PM IST
ಹುಬ್ಬಳ್ಳಿ: ನಗರದ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ (ಸರಕು ಸಾಗಣೆ) ಆಗಿ
ಪರಿವರ್ತನೆಯಾಗುತ್ತಿದ್ದು, ಇದರ ಕಾಮಗಾರಿಯು ಭರದಿಂದ ಸಾಗಿದ್ದು, ಜನವರಿ ಇಲ್ಲವೆ ಫೆಬ್ರವರಿಯಲ್ಲಿ
ಕಾರ್ಯಾರಂಭಗೊಳ್ಳುವ ನಿರೀಕ್ಷೆಗಳಿವೆ.
ನಗರದ ವಿಮಾನ ನಿಲ್ದಾಣದಿಂದ ದೇಶದ ವಿವಿಧೆಡೆ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೊತೆಗೆ ಸರಕು ಸಾಗಾಟವೂ ಹೆಚ್ಚಳವಾಗುತ್ತಿದೆ. ಹೀಗಾಗಿ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಡೊಮೆಸ್ಟಿಕ್ ಏರ್ ಕಾರ್ಗೋ ವಿಮಾನ (ಸರಕು ಸಾಗಣೆ)ಗಳ ಬಳಕೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದ್ದು, ಇದರ ಕಾಮಗಾರಿ
ಭರದಿಂದ ನಡೆದಿದೆ. ನಗರದಲ್ಲಿ ನಿರ್ಮಿಸಲಾಗುತ್ತಿರುವ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್‌ಗೆ ಎರಡು ದಿನಗಳ ಹಿಂದೆ
ಬ್ಯೂರೋ ಆಫ್ ಸಿವಿಲ್ ಎವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಅಧಿಕಾರಿಗಳು ಬಂದು ಭೇಟಿಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಾರ್ಗೋ ನಿಲ್ದಾಣಕ್ಕೆ ಅವಶ್ಯವಾದ ಮೂಲಸೌಕರ್ಯಗಳು ಹಾಗೂ ಭದ್ರತಾ ಕ್ರಮಗಳ ಕುರಿತು ಕೆಲವು ಸಲಹೆ-ಸೂಚನೆ ನೀಡಿದ್ದು, ಅದರಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಅಂದುಕೊಂಡಂತೆ ನಿಗದಿತ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಂಡು, ಬಿಸಿಎಎಸ್‌ನಿಂದ ಸೆಕ್ಯುರಿಟಿ ಕ್ಲಿಯರೆನ್ಸ್ ದೊರೆತರೆ ಜನವರಿ ಅಂತ್ಯ ಇಲ್ಲವೆ ಫೆಬ್ರವರಿ ಮೊದಲಾರ್ಧದಲ್ಲಿ ಇದು ಕಾರ್ಯಾರಂಭಗೊಳ್ಳಲಿದೆ. ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್‌ನ ನಿರ್ವಹಣೆಯನ್ನು ಎಎಐಸಿಎಲ್‌ಎಎಸ್ (ಕಾರ್ಗೋ ಲಾಜಿಸ್ಟಿಕ್ಸ್ ಆ್ಯಂಡ್ ಅಲೈಡ್ ಸರ್ವೀಸಸ್) ಮಾಡಲಿದೆ.
3+4 ಬೇಸ್‌ನಲ್ಲಿ ಕಾರ್ಗೋ ಟರ್ಮಿನಲ್: ನಗರದಲ್ಲಿ ನಿರ್ಮಾಣವಾಗುತ್ತಿರುವ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ 3+4 (ಏಳು) ಬೇಸ್‌ಗಳಲ್ಲಿ ಸಿದ್ಧಗೊಳ್ಳುತ್ತಿದೆ. ಈ ಟರ್ಮಿನಲ್‌ದಲ್ಲಿ ಮೂರು (3) ದೊಡ್ಡ ಕಾರ್ಗೋ ವಿಮಾನಗಳು ಹಾಗೂ ನಾಲ್ಕು (4) ಚಿಕ್ಕ ಕಾರ್ಗೋ ವಿಮಾನಗಳ ನಿಲುಗಡೆ ಆಗಲಿವೆ. ಇಲ್ಲಿಂದ ಉದ್ಯಮಿಗಳು, ರೈತರು, ವ್ಯಾಪಾರಸ್ಥರು ತಮ್ಮ ಉತ್ಪನ್ನ-ಸರಕುಗಳನ್ನು ಸಾಗಾಟ ಮಾಡಲು ಹಾಗೂ ತಮಗೆ ಬೇಕಾದ ಕಚ್ಚಾ ಸಾಮಗ್ರಿಗಳು, ಇತರೆ ಸರಕುಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ.
ಸರಕು ಸಾಗಣೆ-ಆಮದು ಬೇಡಿಕೆ ಹೆಚ್ಚಳ :
ನಗರದಿಂದ ದೇಶದ ವಿವಿಧ ಪ್ರದೇಶಗಳಿಗೆ ಸರಕು ಸಾಗಾಣಿಕೆ ಹಾಗೂ ಆಮದಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಈಗ ನಗರದಿಂದ ಹಿಂಡನ್ (ದೆಹಲಿ), ಮುಂಬಯಿ, ಬೆಂಗಳೂರು, ಅಹ್ಮದಾಬಾದ್, ತಿರುಪತಿ, ಚೆನ್ನೈ, ಕೊಚ್ಚಿ, ಕನ್ನೂರ,
ಗೋವಾಗೆ ವಿಮಾನಸೇವೆ ಒದಗಿಸುತ್ತಿರುವ ಕಂಪನಿಗಳು ತಮ್ಮ ವಿಮಾನಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಸರಕು ಸಾಗಾಟ ಮಾಡುತ್ತಿವೆ. ಇದರಿಂದ ಸರಕು, ಸಾಮಗ್ರಿ, ಉತ್ಪನ್ನ ಸಾಗಾಟಗಾರರು ಹಾಗೂ ಖರೀದಿದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಾಟಕ್ಕೆ ಸಮಸ್ಯೆ ಆಗುತ್ತಿದೆ. ನಗರದಲ್ಲಿ ಏರ್ ಕಾರ್ಗೋ ಟರ್ಮಿನಲ್ ಕಾರ್ಯಾರಂಭಗೊಂಡರೆ ಉತ್ತರ ಕರ್ನಾಟಕ ಭಾಗದ ಕೈಗಾರಿಕೋದ್ಯಮಿಗಳು, ಸರಕುಗಳ ಉತ್ಪಾದಕರಿಗೆ ಹಾಗೂ ವ್ಯಾಪಾರಸ್ಥರಿಗೆ ತಮ್ಮ ಉತ್ಪನ್ನಗಳು, ಸರಕುಗಳನ್ನು ಸರಬರಾಜು
ಮಾಡಲು ಹಾಗೂ ಬೇಡಿಕೆಯಿರುವ ಸರಕು, ಉತ್ಪನ್ನಗಳನ್ನು ಹೊರ ಪ್ರದೇಶಗಳಿಂದ ತರಿಸಿಕೊಳ್ಳಲು ಅನುಕೂಲವಾಗಲಿದೆ.
ಹಳೆಯ ವಿಮಾನ ನಿಲ್ದಾಣದ
ಟರ್ಮಿನಲ್ ಅನ್ನು ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರ ಕಾಮಗಾರಿ
ಭರದಿಂದ ಸಾಗಿದ್ದು, ಜನವರಿ ಅಂತ್ಯಕ್ಕೆ ಇಲ್ಲವೆ ಫೆಬ್ರವರಿ ಮೊದಲಾರ್ಧದಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ.
– ಪ್ರಮೋದ ಕುಮಾರ ಠಾಕೂರ, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ
– ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.