ಕ್ಯಾನ್ಸರ್ ನಡುವೆಯೂ ಒಲಿಂಪಿಕ್ಸ್ ಕನಸು ಹೊತ್ತ ಸೂರೆಜ್ ನವಾರೊ !
Team Udayavani, Jan 30, 2021, 6:15 AM IST
ಮ್ಯಾಡ್ರಿಡ್: ವಿಶ್ವದ ಮಾಜಿ ನಂ. 6 ಟೆನಿಸ್ ಆಟಗಾರ್ತಿ, ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ವಿದಾಯ ಘೋಷಿಸುವ ಕನಸು ಕಾಣುತ್ತಿದ್ದಾರೆ. ಇದರಲ್ಲೇನು ವಿಶೇಷ ಎನ್ನುವಿರಾ? 32 ವರ್ಷದ ನವಾರೊ ಕ್ಯಾನ್ಸರ್ ಮಾರಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ!
ಕಳೆದ ಸೆಪ್ಟಂಬರ್ನಲ್ಲಿ ನವಾರೊ ಅವರಲ್ಲಿ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಇದು ಆರಂಭಿಕ ಹಂತದಲ್ಲಿ ಇದ್ದುದರಿಂದ ಚಿಕಿತ್ಸೆ ಯಶಸ್ವಿಯಾಗತೊಡಗಿತು. ಕಿಮೋಥೆರಪಿ ಮುಗಿದಿದೆ, ಚಿಕಿತ್ಸೆ ಅಂತಿಮ ಹಂತದಲ್ಲಿದೆ ಎಂಬುದಾಗಿ ಸೋಮವಾರವಷ್ಟೇ ಟ್ವೀಟ್ ಮಾಡಿದ್ದರು. ಜತೆಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅಭಿಲಾಷೆಯನ್ನೂ ವ್ಯಕ್ತಪಡಿಸಿದರು.
ಒಲಿಂಪಿಕ್ಸ್ಗೂ ಮಿಗಿಲಾದುದಿಲ್ಲ
“ನಾನು ಆಸ್ಪತ್ರೆಯ ಬೆಡ್ನಲ್ಲಿರುವುದನ್ನು ಜನರು ನೆನಪಿಸಿಕೊಳ್ಳಬಾರದು. ಹೀಗಾಗಿ ದೊಡ್ಡ ಕೂಟವೊಂದರಲ್ಲಿ ಪಾಲ್ಗೊಂಡು ಟೆನಿಸ್ಗೆ ಗುಡ್ಬೈ ಹೇಳಬೇಕೆಂದಿರುವೆ. ಇದಕ್ಕೆ ಒಲಿಂಪಿಕ್ಸ್ಗಿಂತ ಮಿಗಿಲಾದ ಸ್ಪರ್ಧೆ ಇಲ್ಲ’ ಎಂದಿದ್ದಾರೆ ಕಾರ್ಲಾ ಸೂರೆಜ್ ನವಾರೊ. ಕಳೆದ ಫೆಬ್ರವರಿಯಲ್ಲಿ ಅವರು ಕೊನೆಯ ಸಲ ಟೆನಿಸ್ ಅಂಕಣದಲ್ಲಿ ಕಾಣಿಸಿ ಕೊಂಡಿದ್ದರು. ಕಳೆದ ತಿಂಗಳು ಇಟಲಿಯ ಸಾರಾ ಎರಾನಿ ಜತೆ ಬಾರ್ಸಿಲೋನಾದಲ್ಲಿ ಅಭ್ಯಾಸ ಕೂಡ ನಡೆಸಿದ್ದರು.
ಆದರೆ ಜೂನ್ ಅಂತ್ಯಕ್ಕೆ ಅಗ್ರ 56 ಸ್ಥಾನದಲ್ಲಿರುವ ಸಿಂಗಲ್ಸ್ ಆಟಗಾ ರರಿಗಷ್ಟೇ ಒಲಿಂಪಿಕ್ಸ್ ಅರ್ಹತೆ ದೊರೆಯುತ್ತದೆ. ನವಾರೊ ಸದ್ಯ 85ನೇ ರ್ಯಾಂಕಿಂಗ್ ಹೊಂದಿದ್ದಾರೆ. ಆದರೂ ಭರವಸೆ ಕಳೆದುಕೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.