ಹೆದ್ದಾರಿ ಅಪಘಾತಗಳಿಗೆ ಕ್ಯಾಶ್‌ಲೆಸ್ ಕವಚ
Team Udayavani, Jul 2, 2020, 6:00 AM IST
ಹೊಸದಿಲ್ಲಿ: ರಸ್ತೆ ಅಪಘಾತದ ಗಾಯಾಳುಗಳಿಗೆ 2.5 ಲಕ್ಷ ರೂ.ಗಳ ವರೆಗೆ ಕ್ಯಾಶ್‌ಲೆಸ್ ಚಿಕಿತ್ಸೆ ನೀಡುವ ಮಹತ್ವದ ಯೋಜನೆ ಜಾರಿಗೆ ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
ಈಗಾಗಲೇ ಎಲ್ಲ ರಾಜ್ಯ ಸರಕಾರಗಳ ಪ್ರಧಾನ ಕಾರ್ಯದರ್ಶಿಗಳಿಗೆ, ಸಾರಿಗೆ ಇಲಾಖೆ ಕಾರ್ಯದರ್ಶಿಗಳಿಗೆ ಮತ್ತು ಸಾರಿಗೆ ಆಯುಕ್ತರಿಗೆ ಈ ಕುರಿತಂತೆ ಸೂಚನೆ ನೀಡಲಾಗಿದ್ದು, ಜು. 10ರೊಳಗೆ ಯೋಜನೆ ಕುರಿತ ಸಲಹೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಯೋಜನೆ ಜಾರಿ ಹೇಗೆ?
ರಸ್ತೆ, ಹೆದ್ದಾರಿ ಬಳಕೆದಾರರೆಲ್ಲರಿಗೂ ತುರ್ತು ಅಪಘಾತ ನಿಧಿಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯ ಖರ್ಚುವೆಚ್ಚಗಳನ್ನು ನಿಭಾಯಿಸಲೆಂದೇ ರಾಷ್ಟ್ರ ಮಟ್ಟದಲ್ಲಿ “ಮೋಟಾರು ವಾಹನ ಅಪಘಾತ ನಿಧಿ’ ಸ್ಥಾಪಿಸ ಲಾಗುತ್ತದೆ. ಇಡೀ ಪ್ರಕ್ರಿಯೆ ಯನ್ನು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ)ಯಡಿ ನಿಭಾಯಿಸಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.