Cauvery: ಇಂದು ಕಾವೇರಿ ಸರ್ವಪಕ್ಷ ಸಭೆ
Team Udayavani, Aug 22, 2023, 11:21 PM IST
ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಸರ್ವಪಕ್ಷ ಸಭೆಯನ್ನು ಬುಧವಾರ ಕರೆದಿದ್ದು, ಇಲ್ಲಿ ಸಮಾಲೋಚನೆ ನಡೆಸಿದ ಬಳಿಕವೇ ಈ ವಿಚಾರದಲ್ಲಿ ಮುಂದಡಿ ಇರಿಸಲು ನಿರ್ಧರಿಸಿದೆ.
ತಮಿಳುನಾಡಿನ ಬೇಡಿಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರತ್ಯೇಕ ಪೀಠ ರಚನೆಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಈ ಸಭೆ ಕರೆದಿದ್ದು, ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ವಿಧಾನ ಸೌಧದಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ರೈತ ಸಂಘ, ಕಾವೇರಿ ಜಲಾನಯನ ಪ್ರದೇಶದ ರಾಜಕೀಯ ಮುಖಂಡರಿಗೂ ಆಹ್ವಾನ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ| ಪರಮೇಶ್ವರ ಸೇರಿ ಹಿರಿಯ ಸಚಿವರು, ತಜ್ಞರು ಭಾಗವಹಿಸಲಿದ್ದು, ಅಗತ್ಯ ಬಿದ್ದರೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ
MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ
MUST WATCH
ಹೊಸ ಸೇರ್ಪಡೆ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
Malpe: ಫಿಶರೀಸ್ ಕಾಲೇಜು ಆವರಣ ಕೊಳಚೆ ಮುಕ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.