Cauvery: ಎರಡೆರಡು ಬಂದ್ ಸರಿಯಾದ ನಿರ್ಧಾರವಲ್ಲ
Team Udayavani, Sep 25, 2023, 11:23 PM IST
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಒಂದೇ ವಾರದಲ್ಲಿ ಎರಡು ಬಂದ್‌ಗಳು ಎದುರಾಗಿವೆ. ಸೆ.26ರಂದು ಬೆಂಗಳೂರು ಬಂದ್‌ಗೆ ಕರೆಕೊಟ್ಟಿದ್ದರೆ, ಸೆ.29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕೇವಲ 4 ದಿನಗಳ ಅಂತರದಲ್ಲಿ ಎರಡು ಬಂದ್‌ಗಳು ಎದುರಾಗಿದ್ದು, ಸಣ್ಣಪುಟ್ಟ ವ್ಯಾಪಾರಗಳನ್ನು ನಂಬಿ ಬದುಕುವವರಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಕಾವೇರಿ ನಿರ್ವಹಣ ಪ್ರಾಧಿಕಾರದ ಆದೇಶ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬಳಿಕ ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗಿದೆ. ಆಗ ಮಂಡ್ಯ ಜಿಲ್ಲೆಯ ರೈತ ಸಂಘಟನೆಗಳು ಒಟ್ಟಾಗಿ ಸೇರಿ ಬಂದ್ ಆಚರಿಸಿವೆ. ಈಗ ಬೆಂಗಳೂರು ಬಂದ್ ಸರದಿ. ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಈ ಬಂದ್‌ಗೆ ಕರೆ ನೀಡಲಾಗಿದ್ದು, ಕೆಲವು ಕನ್ನಡ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆಗಳ ಬೆಂಬಲವಿದೆ. ಸೆ.29ರಂದು ವಾಟಾಳ್ ನಾಗರಾಜ್ ಸೇರಿದಂತೆ ಇತರ ಕನ್ನಡಪರ ಸಂಘಟನೆಗಳು ಸೇರಿ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಕಾವೇರಿ ವಿಚಾರದಲ್ಲಿ ಹೋರಾಟ ನಡೆಸುವವರಿಗೆ ಯಾರೂ ಅಡ್ಡಿ ಮಾಡುವಂತಿಲ್ಲ. ಸರಕಾರವೂ ಪ್ರತಿಭಟನೆಗಳಿಗೆ ಅಡ್ಡಿ ಮಾಡುವುದಿಲ್ಲ. ಬಂದ್ ಎಂದ ಕೂಡಲೇ ಬೇರೆ ಬೇರೆ ಲೆಕ್ಕಾಚಾರದಲ್ಲಿ ಯೋಚನೆ ಮಾಡುತ್ತವೆ. ಆದರೂ ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಬಂದ್ ಆಚರಣೆ ಮಾಡುವುದನ್ನೂ ಕೆಲವೊಮ್ಮೆ ಸರಕಾರಗಳೂ ವಿರೋಧ ಮಾಡುವುದಿಲ್ಲ. ಇದಕ್ಕೆ ಕಾರಣ, ಇಂಥ ಹೋರಾಟಗಳಿಂದ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ಸದುದ್ದೇಶವೂ ಇರುತ್ತದೆ.
ಈಗ ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಎರಡು ಬಂದ್‌ಗಳು ಸದುದ್ದೇಶದ ಅರ್ಥವನ್ನೇ ಕಡಿಮೆ ಮಾಡುವಂತಿವೆ. ಈಗ ಸಾರ್ವಜನಿಕವಾಗಿ ಎದ್ದಿರುವ ಪ್ರಶ್ನೆಯೂ ಅದೇ ಆಗಿದೆ. ಏಕೆಂದರೆ ಬಂದ್ ಆಚರಿಸುವುದರಿಂದ ಬೆಂಗಳೂರಿನ ಎಲ್ಲ ವ್ಯಾಪಾರ ಚಟುವಟಿಕೆಗಳು ಹೆಚ್ಚುಕಡಿಮೆ ನಿಲ್ಲುತ್ತವೆ. ಆಟೋ ಸವಾರರು, ಕ್ಯಾಬ್ ಚಾಲಕರು, ಬೀದಿ ಬದಿ ಅಂಗಡಿ ನಡೆಸುವವರು, ಸಣ್ಣಪುಟ್ಟ ಅಂಗಡಿ ಇರಿಸಿಕೊಂಡವರು, ಕಚೇರಿಗೆ ಹೋಗುವವರು, ಹೊಟೆಧೀಲ್‌ಗಳು, ಶಾಲಾ ಕಾಲೇಜುಗಳು ಎಲ್ಲರಿಗೂ ಸಮಸ್ಯೆಯಾಗುತ್ತದೆ. ಆದರೆ ಕಾವೇರಿ ವಿಚಾರದಲ್ಲಿ ಒಂದು ದಿನ ಸಮಸ್ಯೆಯಾದರೂ ಅಡ್ಡಿ ಇಲ್ಲ ಎಂಬ ಕಾರಣಕ್ಕೆ ಈ ವಲಯಗಳಲ್ಲಿ ಇರುವವರು ಬಂದ್‌ಗೆ ಬೆಂಬಲ ನೀಡಿದ್ದರು. ಈಗ ಮಂಗಳವಾರವೂ ಬಂದ್ ಮಾಡಿ, ಮತ್ತೆ ಶುಕ್ರವಾರವೂ ಬಂದ್ ಮಾಡಿದರೆ, ಒಂದೇ ವಾರ ಎರಡು ಬಂದ್‌ಗಳನ್ನು ತಡೆದುಕೊಳ್ಳುವುದು ಹೇಗೆ ಎಂಬುದು ಬಹುತೇಕರ ಪ್ರಶ್ನೆಯಾಗಿದೆ.
ಇದಕ್ಕೆ ಬದಲಾಗಿ, ಮಂಗಳವಾರ ಮತ್ತು ಶುಕ್ರವಾರ ಬಂದ್ ಕರೆದಿರುವವರು ಒಮ್ಮೆ ಕುಳಿತು ಚರ್ಚಿಸಿ ಏಕಕಾಲದಲ್ಲಿ ಬೆಂಗಳೂರು ಅಥವಾ ಕರ್ನಾಟಕ ಬಂದ್ ಆಚರಿಸಬಹುದಾಗಿತ್ತು. ಎಲ್ಲರೂ ಜತೆಗೂಡಿ ಹೋ ರಾಟ ನಡೆಸಿದಾಗ ಅದಕ್ಕೆ ಸಿಗುವ ಪ್ರಾಮುಖ್ಯದ ಅಂಶವನ್ನೂ ಮನಗಾಣಬೇಕಾಗಿತ್ತು. ಈಗ ಪ್ರತಿಷ್ಠೆಗಾಗಿ ಎರಡು ಬಣಗಳು ಸೇರಿ ಪ್ರತ್ಯೇಕವಾಗಿ ಬಂದ್ ಕರೆದಿವೆ ಎಂಬುದು ಜನರಲ್ಲಿ ಮೂಡಿದೆ. ಅಷ್ಟೇ ಅಲ್ಲ, ಕಾವೇರಿ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳೇ ಒಂದಾಗಿ ಕೆಲಸ ಮಾಡುವಂಥ ಸಮಯದಲ್ಲಿ ಹೋರಾಟ ನಡೆಸುವ ಬಣಗಳು ಒಟ್ಟಿಗೆ ಸೇರಿ ಬಂದ್ ಆಚರಣೆ ಮಾಡಬೇಕಾಗಿತ್ತು. ಆಗ ಸರಕಾರಕ್ಕೂ ಬಿಸಿ ಮುಟ್ಟಿಸಿದ ಹಾಗೆ ಆಗುತ್ತಿತ್ತು, ಆಗ ನಡೆಸುವ ಬಂದ್‌ಗೂ ಒಂದು ಗಾಂಭೀರ್ಯ ಬರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.