80 ಕೋಟಿ ಮೌಲ್ಯದ ಅಂಬರ್‌ಗ್ರೀಸ್ ವಶ
ತಿಮಿಂಗಲದ ಅಂಬರ್‌ಗ್ರೀಸ್ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಐವರ ಬಂಧನ
Team Udayavani, Aug 11, 2021, 2:39 PM IST
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಪಾರ ಬೇಡಿಕೆ ಇರುವ ಸುಮಾರು 80 ಕೋಟಿ ರೂ. ಮೌಲ್ಯದ ತಿಮಿಂಗಲದ ವಾಂತಿ ಅಥವಾ ವೀರ್ಯ (ಅಂಬರ್‌ಗ್ರೀಸ್) ಮತ್ತು ಪ್ರಾಚೀನ ಕಾಲದ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ದೇಶ-ವಿದೇಶದಲ್ಲಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ರಾಯಚೂರು ಮೂಲದ ಓರ್ವ ಸೇರಿ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಜೀಬ್ ಪಾಷ (48), ಮೊಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40), ಸಂತೋಷ್ (31) ಮತ್ತು ರಾಯಚೂರಿನ ಜಗನ್ನಾಥಾಚಾರ್ (52) ಬಂಧಿತರು.
80 ಕೋಟಿ ಮೌಲ್ಯದ 80 ಕೆಜಿ ಅಂಬರ್‌ಗ್ರೀಸ್ ಗಟ್ಟಿ, ಎರಡು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಕಾಲ ದ ರೆಡ್ ಮರ್ಕ್ನೂರಿಯ ತಾಮ್ರದ ಬಾಟಲ್ ಗಳು, 1818ರ ಕಾಲದ ಸ್ಟೀಮ್ ಫ್ಯಾನ್ ಸೇರಿ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂಬರ್‌ಗ್ರೀಸ್ ಎಂಬ ವಸ್ತು ತಿಮಿಂಗಲದ ತ್ಯಾಜ್ಯ (ವಾಂತಿ ಅಥವಾ ವೀರ್ಯ) ಆಗಿದ್ದು, ಅದನ್ನು ಸುಗಂಧ ದ್ರವ್ಯ, ಔಷಧ ತಯಾರಿಕೆಯಲ್ಲಿ ಬಳ ಸಲಾಗುತ್ತದೆ. ಹೀಗಾಗಿ ಭಾರತದ ಕೆಲವೆಡೆ ಮತ್ತು ಅರಬ್, ಚೀನಾ, ಪಾಶ್ಚಿಮಾತ್ಯ ದೇಶಗಳಲ್ಲಿ ಈ ವಸ್ತುವಿಗೆ ಭಾರೀ ಬೇಡಿಕೆಯಿದೆ. ಪ್ರತಿ ಕೆ.ಜಿಗೆ ಕೋಟಿಗಟ್ಟಲೇ ಬೆಲೆ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಆರೋಪಿಗಳು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆರ್‌ಎಂಕೆ ಎಂಟರ್‌ಪ್ರೈಸಸ್‌ನಲ್ಲಿ ಅಂಬರ್‌ಗ್ರೀಸ್ ಗಟ್ಟಿ ಹಾಗೂ ಪ್ರಾಚೀನ ಕಾಲದ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ. ಜತೆಗೆ ಅಂಬರ್‌ಗ್ರೀಸ್ ಗಟ್ಟಿಯನ್ನು ಅಂತಾರಾಷ್ಟ್ರಿಯ ಮಟ್ಟದ ವ್ಯಕ್ತಿಗಳಿಗೆ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದರು.
ಈ ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಿದ್ದು, ಈತ ಸೆರೆ ಸಿಕ್ಕಿದರೆ ಈ ಅಂಬರ್‌ಗ್ರೀಸ್ ಗಟ್ಟಿಯನ್ನು ಎಲ್ಲಿಂದ ತರಲಾಗಿದೆ. ಎಲ್ಲಿಗೆ ಸಾಗಿಸಲಾಗುತ್ತದೆ ಎಂಬುದು ಪತ್ತೆಯಾಗಲಿದೆ ಎಂದು ಕಮಲ್ ಪಂತ್ ಹೇಳಿದರು.
ಇದನ್ನೂ ಓದಿ:ಅಂಬ್ರಿ ಇಂಕ್. ನೊಂದಿಗೆ 1,071 ಕೋಟಿ ರೂಪಾಯಿ ಹೂಡಿಕೆ ಮಾಡಲಿರುವ RNESL
ಜೂನ್.9ರಂದು ಕೆ.ಜಿ.ಹಳ್ಳಿ ಪೊಲೀಸರು ಆತನ ಸೂಚನೆ ಮೇರೆಗೆ ತಮ್ಮ ಠಾಣಾ ವ್ಯಾಪ್ತಿಯ ಎಂಆರ್‌ಕೆ ಟೆಂಟ್ ಹೌಸ್ ಬಳಿಯ ಲಕ್ಷ್ಮೀಪತಿ ಗಾರ್ಡನ್ ತೆಂಗಿನ ತೋಟದ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಅವರಿಂದ ಎಂಟು ಕೋಟಿ ರೂ. ಮೌಲ್ಯದ 8 ಕೆ.ಜಿ. 700 ಗ್ರಾಂ ತೂಕದ ಅಂಬರ್‌ಗ್ರೀಸ್ ವಶಕ್ಕೆ ಪಡೆಯಲಾಗಿತ್ತು.
ಅಂಬರ್‌ಗ್ರೀಸ್ ದಂಧೆ
ಇತ್ತೀಚಿನ ದಿನಗಳಲ್ಲಿ ಅಂಬರ್‌ಗ್ರೀಸ್ ದಂಧೆ ದಿನೇದಿನೆ ಹೆಚ್ಚಾಗುತ್ತಿದೆ.ಎರಡು ತಿಂಗಳ ಹಿಂದೆ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನಾಲ್ವರು ಬಂಧಿಸಿ ಎಂಟು ಕೆ.ಜಿ.ಅಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿತ್ತು.ಇದೀಗ 80 ಕೆ.ಜಿ. ವಶಕ್ಕೆ ಪಡೆಯಲಾಗಿದೆ.ಈ ಸಂಬಂಧ ಈ ದಂಧೆ ಕೋರರ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ನಿರಂತರ ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪರಿಶೀಲನೆ
ಮತ್ತೊಂದೆಡೆ ಆರೋಪಿಗಳಿಂದ ಪತ್ತೆಯಾಗಿರುವ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಕಾಲದ ಪ್ರಾಚೀನ ವಸ್ತುಗಳು, ಸ್ಟಿಮ್ ಫ್ಯಾನ್‌ಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇದೇ ಮಾದರಿಯ ವಸ್ತುಗಳು ಆನ್‌ಲೈನ್‌ನ ಈ- ಕಾಮರ್ಸ್‌ನಲ್ಲಿ ಲಭ್ಯವಿರುವುದರಿಂದ ಅವುಗಳ ಬಗ್ಗೆ ಇತಿಹಾಸಕಾರರ ಸಲಹೆ ಪಡೆಯಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಅಂಬರ್‌ಗ್ರೀಸ್‌ನ ವಿಶೇಷತೆ ಏನು?
ಅಂಬರ್‌ಗ್ರೀಸ್ ಎಂಬುದು ತಿಮಿಂಗಿಲದಿಂದ ಪಡೆದವೀರ್ಯ ಅಥವಾ ವಾಂತಿಯಾಗಿದ್ದು, ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯ ಮತ್ತು ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಅದಕ್ಕೆ ಅರಬ್, ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಸುಮಾರು ಒಂದು ಕೋಟಿರೂ.ಗೂ ಅಧಿಕ ಮೌಲ್ಯಯುಳ್ಳದಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.