Central Government: ಭದ್ರತಾ ಉದ್ಯಮದ ಪ್ರಧಾನ ಸಂಸ್ಥೆ ಎಚ್‌ಎಎಲ್‌ಗೆ “ಮಹಾರತ್ನ’
5000 ಕೋಟಿವರೆಗೆ ಅಂತಾರಾಷ್ಟ್ರೀಯ ಉದ್ಯಮದಲ್ಲಿ ಹೂಡಿಕೆಗೆ ಅವಕಾಶ, ಮಹಾರತ್ನ ಕಂಪನಿಗಳ ಸಂಖ್ಯೆ ಈಗ 14ಕ್ಕೇರಿಕೆ
Team Udayavani, Oct 15, 2024, 7:45 AM IST
ನವದೆಹಲಿ: ಭದ್ರತಾ ಉದ್ಯಮದಲ್ಲಿ ಪ್ರಧಾನ ಸಂಸ್ಥೆಯಾಗಿರುವ, ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನ್ನು ಕೇಂದ್ರ ಸರ್ಕಾರ “ಮಹಾರತ್ನ’ ಕಂಪನಿಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಮೂಲಕ ಮಹಾರತ್ನ ಕಂಪನಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಈ ಮೊದಲು ಎಚ್‌ಎಎಲ್ ನವರತ್ನ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿತ್ತು. ಇದೀಗ ಮಹಾರತ್ನಕ್ಕೆ ಭಡ್ತಿ ಪಡೆದುಕೊಂಡಿರುವುದರಿಂದ ನವರತ್ನ ಕಂಪನಿಗಳ ಸಂಖ್ಯೆ 24ಕ್ಕೆ ಕುಸಿದಿದೆ. ಮಹಾರತ್ನ ಕಂಪನಿ ಆಗಿರುವುದರಿಂದ ಎಚ್‌ಎಎಲ್ ಈಗ ಅಂತಾರಾಷ್ಟ್ರೀಯ ಉದ್ಯಮಗಳಲ್ಲಿ 5,000 ಕೋಟಿ ರೂ.ವರೆಗೆ ಹೂಡಿಕೆ ಮಾಡಲು ಅವಕಾಶ ಪಡೆದುಕೊಂಡಿದೆ. ಅಲ್ಲದೇ ತನ್ನ ನಿವ್ವಳ ಮೌಲ್ಯದಲ್ಲಿ ಶೇ.15ರಷ್ಟನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ, ಹೂಡಿಕೆ ಮಾಡುವ ಅವಕಾಶ ಪಡೆದುಕೊಂಡಿದೆ.
ಮಾನದಂಡವೇನು?:
ಮಹಾರತ್ನ ಎಂದು ಗುರುತಿಸಿಕೊಳ್ಳಲು ಕಂಪನಿಗಳ ಸರಾಸರಿ ವಾರ್ಷಿಕ ವಹಿವಾಟು 25,000 ಕೋಟಿ ರೂ. ಇದ್ದು, ನಿವ್ವಳ ಮೌಲ್ಯ 15,000 ಕೋಟಿ ರೂ.ಗಿಂತ ಹೆಚ್ಚಿರಬೇಕು. ಇದನ್ನು ಸಾಧಿ ಸಿದ ಕಂಪನಿಗಳನ್ನು ಮಹಾರತ್ನ ಎಂದು ಗುರುತಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.