CET ಕೌನ್ಸೆಲಿಂಗ್ ತಿಂಗಳಲ್ಲಿ ಪೂರ್ಣ: KEA ಯಿಂದ ಮಹತ್ವದ ತೀರ್ಮಾನ
Team Udayavani, Aug 3, 2023, 12:21 AM IST
ಬೆಂಗಳೂರು: ಈ ವರ್ಷ ರಾಜ್ಯದ ವೃತ್ತಿಪರ ಕೋರ್ಸ್‌ಗಳ (ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ನರ್ಸಿಂಗ್, ಫಾರ್ಮಸಿ ಮತ್ತು ಆರ್ಕಿಟೆಕ್ಟ್) ಪ್ರವೇಶಾತಿ ಪ್ರಕ್ರಿಯೆ(ಕೌನ್ಸೆಲಿಂಗ್) ಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತೀರ್ಮಾನಿ ಸಿದೆ. ಸಾಮಾನ್ಯವಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಎರಡೂ¾ರು ತಿಂಗಳು ನಡೆಯುತ್ತಿತ್ತು.
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ 2023 -24ರ ಸಾಲಿನಿಂದ “ಸಂಯೋಜಿತ ಸೀಟು ಹಂಚಿಕೆ’ ಎಂಬ ನೂತನ ಕ್ರಮವನ್ನು ಆರಂಭಿಸುವುದಾಗಿ ಕೆಇಎ ಪ್ರಕಟಿಸಿದ್ದು, ಇದರಿಂದಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟು ಹಂಚಿಕೆ ಏಕಕಾಲದಲ್ಲಿ ನಡೆಯಲಿದೆ. ಪರಿಣಾಮವಾಗಿ ಅನಗತ್ಯ ಗೊಂದಲಗಳು ತಪ್ಪಿ ಸಂಪೂರ್ಣ ಪ್ರಕ್ರಿಯೆ ವೇಗವಾಗಿ ನಡೆಯುವ ನಿರೀಕ್ಷೆಯಿದೆ.
ಹೊಸ ಪದ್ಧತಿಯ ಪ್ರಮುಖ ಉದ್ದೇಶವೇ ತ್ವರಿತವಾಗಿ ಕೌನ್ಸೆಲಿಂಗ್ ಪ್ರಕಿಯೆ ಮುಗಿಸು ವುದು. ಹಿಂದಿನ ಪದ್ಧತಿಯಲ್ಲಿ ಮೊದಲ ಸುತ್ತಿ ನಿಂದ ಸೀಟುಗಳ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿರಲಿಲ್ಲ. ಇದರಿಂದಾಗಿ ಹೆಚ್ಚಿನ ಅಭ್ಯರ್ಥಿಗಳು ಮೂರನೇ ಸುತ್ತಿನ ತನಕವೂ ಉಳಿಯುತ್ತಿದ್ದರು. ಈ ಬಾರಿ ಮೊದಲ ಸುತ್ತಿನಿಂ ದಲೇ ಕಟ್ಟುನಿಟ್ಟಾಗಿ ಆಯ್ಕೆ ಪ್ರಕ್ರಿಯೆ ನಡೆಯು ವುದರಿಂದ ಕೌನ್ಸೆಲಿಂಗ್ ವೇಗ ಪಡೆಯಲಿದೆ.
ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುವವರು ಚಾಯ್ಸ… ಎಂಟ್ರಿ ಸ್ಕ್ರೀನ್‌ನಲ್ಲಿ ಒಂದು ಕೋರ್ಸನ್ನು ಆಯ್ದುಕೊಳ್ಳಬೇಕು. ಬಳಿಕ ಚಲನ್ ಮೂಲಕ ಶುಲ್ಕ ಪಾವತಿಸಿ ಆಡ್ಮಿಷನ್ ಆರ್ಡರ್ ಅನ್ನು ಆನ್‌ಲೈನ್ ಮೂಲಕ ಪಡೆದು ಕಾಲೇಜಿಗೆ ವರದಿ ಮಾಡಿಕೊಂಡು ಕಾಲೇಜಿನ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿಸಬೇಕಾಗುತ್ತದೆ. ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿಯೂ ಆಪ್ಷನ್ ಎಂಟ್ರಿ ಪ್ರಕಾರ ತಮ್ಮ ಆಯ್ಕೆಯ ಕೋರ್ಸ್‌ನಲ್ಲಿ ಸೀಟು ಪಡೆಯಬೇಕು. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಬಳಿಕ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಸೀಟುಗಳನ್ನು ದಂಡದ ಮೊತ್ತ ಪಾವತಿಸಿ ರದ್ದುಪಡಿಸಬೇಕು ಎಂಬ ನಿಯಮ ರೂಪಿಸಲಾಗಿದೆ. ಇದರಿಂದಾಗಿ ಮೊದಲೆರಡು ಸುತ್ತಿನಲ್ಲಿಯೇ ವಿದ್ಯಾರ್ಥಿಗಳು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಪ್ರಾಧಿಕಾರದ ಅಧಿಕಾರಿಗಳ ಚಿಂತನೆ.
ಹಿಂದೆ ನಾಲ್ಕು ಸೀಟುಗಳಿಗೆ ಅವಕಾಶ
ಹಳೆ ಪದ್ಧತಿಯಲ್ಲಿ ಒಬ್ಬ ಅಭ್ಯರ್ಥಿ ನಾಲ್ಕು ಸೀಟುಗಳನ್ನು ಹಿಡಿದಿಟ್ಟುಕೊಳ್ಳಲು ಅವಕಾಶ ವಿತ್ತು. ಇದರಿಂದಾಗಿ ಪ್ರತಿಭಾನ್ವಿತ ಇನ್ನಿತರರಿಗೆ ತೊಂದರೆ ಆಗುತ್ತಿತ್ತು. ಮಾಪ್‌ಅಪ್ ಸುತ್ತಿನಲ್ಲಿ ಕಡಿಮೆ ರ್‍ಯಾಂಕಿಂಗ್ ಹೊಂದಿದ್ದ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಸೀಟು ದೊರೆತು ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದೂ ಇದೆ. ಇದಕ್ಕೆ ಕೆಲವು ವಿದ್ಯಾರ್ಥಿಗಳು ಸೀಟನ್ನು ಹಿಡಿದಿಟ್ಟು ಕೊಂಡು ಕೊನೆಯ ಕ್ಷಣದಲ್ಲಿ ಬಿಟ್ಟು ಕೊಟ್ಟಿದ್ದು ಕಾರಣ. ಹೀಗಾಗಿ ಸೀಟುಗಳನ್ನು ತ್ವರಿತವಾಗಿ ಹಂಚಿಕೆ ಮಾಡಿ ತಿಂಗಳೊಳಗೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಬೇಕು ಎಂದು ಸಂಯೋಜಿತ ಸೀಟು ಹಂಚಿಕೆಯ ಕ್ರಮ ಕೈಗೊಂಡಿ ರುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ.
ಸೆ.15ರೊಳಗೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ತೆರೆ?
ಆಗಸ್ಟ್ ತಿಂಗಳ 2ನೇ ವಾರದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಕೌನ್ಸೆಲಿಂಗ್ ಆರಂಭಗೊಂಡರೆ ಸೆ. 15ರ ಹೊತ್ತಿಗೆ ಸೀಟು ಹಂಚಿಕೆ ಮುಕ್ತಾಯಗೊಳ್ಳುವ ಸಂಭವವಿದೆ. ಇದೇ ವೇಳೆ, ಮೆಡಿಕಲ್‌ನ ಸೀಟ್ ಮ್ಯಾಟ್ರಿಕ್ಸ್ ಮಂಗಳವಾರ ಕೆಇಎ ಅಧಿಕಾರಿಗಳ ಕೈಸೇರಿದೆ. ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಕೆಇಎ ತಲುಪಿಲ್ಲ. ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಕೈ ಸೇರಿದ ಬಳಿಕ ಕೌನ್ಸೆಲಿಂಗ್ ದಿನಾಂಕ ನಿಗದಿ ಮಾಡುತ್ತೇವೆ. ಬಹುತೇಕ ಶನಿವಾರದೊಳಗೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸುವ ಸಂಭವವಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಯೋಜಿತ ಸೀಟು ಹಂಚಿಕೆ ಯಿಂದ ಕೌನ್ಸೆಲಿಂಗ್ ಪ್ರಕ್ರಿಯೆಯ ಸಮಯ ಉಳಿತಾಯವಾಗಲಿದೆ. ಈ ಹಿಂದೆ ಎರಡು ತಿಂಗಳು ನಡೆಯುತ್ತಿದ್ದ ಪ್ರಕ್ರಿಯೆ ಈ ವರ್ಷ ಒಂದೇ ತಿಂಗಳಲ್ಲಿ ಮುಕ್ತಾಯ ಗೊಳ್ಳುವ ನಿರೀಕ್ಷೆಯಿದೆ.
-ಎಸ್.ರಮ್ಯಾ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ
ರಾಕೇಶ್ ಎನ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.