Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್ ಖರ್ಗೆ
ಪ್ರಧಾನಿಗೆ ಬಿಎಸ್‌ವೈ-ಮುನಿರತ್ನ ಕೇಸ್ ನೆನಪಿಲ್ಲವೇ?: ಪ್ರಿಯಾಂಕ್
Team Udayavani, Sep 16, 2024, 9:20 PM IST
ಕಲಬುರಗಿ: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಲಬುರಗಿಯಲ್ಲಿ ನಮ್ಮ ವಿರುದ್ಧ ಪ್ರತಿಭಟನೆ ಮಾಡುವ ಮುನ್ನ ಶಾಸಕ ಮುನಿರತ್ನ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮಾಡಲಿ, ಶಿಕ್ಷಣ ಸಂಸ್ಥೆಗಾಗಿ ಪಡೆದ ಜಾಗದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಲಿ, ಅದು ಬಿಟ್ಟು ಕಲಬುರಗಿಯಲ್ಲಿ ಏಕೆ ಈ ಡ್ರಾಮಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಪೋಕೊÕà ಕಾಯ್ದೆಯಡಿ ಪ್ರಕರಣ ದಾಖಲಾಗಿದೆಯಲ್ಲ ಅದರ ವಿರುದ್ಧ ಪ್ರತಿಭಟಿಸಿ,ರಾಜ್ಯದಲ್ಲಿ ವಿಜಯೇಂದ್ರ ನಾಯಕತ್ವದ ಬಗ್ಗೆ ಮಾಡಿ. ಅದನ್ನು ಬಿಟ್ಟು ಕಲಬುರಗಿಯಲ್ಲಿ ಬಂದು ನೀವು ಡ್ರಾಮಾ ಮಾಡಿ ದಲಿತರ ಪರವಾಗಿ ಮಾತನಾಡಿದರೆ ನೀವೇನು ಸಾಬೀತು ಮಾಡಲು ಹೊರಟಿದ್ದೀರಿ. ಮೊದಲು ನೀವು ಪಡೆದುಕೊಂಡಿರುವ ಭೂಮಿ ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದೀರಿ ಅದು ಹೇಳಿ. ನಿಮ್ಮ ತಪ್ಪು ಮುಚ್ಚಿಟ್ಟುಕೊಂಡು ಇತರರಿಗೆ ಬುದ್ಧಿ ಹೇಳಲು ಹೊರಟರೆ ಹೇಗೆ? ರಾಜ್ಯದ ಜನತೆಗೆ ನಿಮ್ಮ ನಿಲುವು ಏನು ಎನ್ನುವುದು ಗೊತ್ತಾಗಿದೆ ಎಂದರು.
ರಾಜ್ಯದಲ್ಲಿನ ಗಣೇಶೋತ್ಸವ ಬಗ್ಗೆ ಮಾಹಿತಿ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ನಾಯಕ ಯಡಿಯೂರಪ್ಪ ಅವರ ಪೋಕ್ಸೋ ಪ್ರಕರಣ, ಮುನಿರತ್ನ ಪ್ರಕರಣದ ಕುರಿತು ಏಕೆ ಬಾಯಿ ಬಿಡುವುದಿಲ್ಲ. ಜಾತಿ, ಧಾರ್ಮಿಕ ವಿಷಯಗಳಿಗೆ ಕೊಡುವ ಪ್ರಾಮುಖ್ಯತೆ ಪ್ರಕರಣಗಳಿಗೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮಗರ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿನ ಎಲ್ಲ ಮಾಹಿತಿ ಪಡೆಯುವ ಪ್ರಧಾನಿ ಮೋದಿ ತಮ್ಮ ನಾಯಕರ ಹಗರಣ, ಭಾನಗಡಿಗಳ ಕುರಿತು ಏಕೆ ಮೌನ ವಹಿಸುತ್ತಾರೆ. ನಾಗಮಂಗಲ ಗಲಭೆ ವಿಚಾರ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಅದರ ಹಿಂದೆ ಯಾರೇ ಇದ್ದರೂ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಈಗಾಗಲೇ ಹೇಳಿದ್ದಾರೆ. ರಾಜ್ಯದಲ್ಲಿ ಬರಗಾಲ ಇದ್ದಾಗ ಬಿಜೆಪಿ ಸತ್ಯಶೋಧನೆ ಸಮಿತಿ ರಚನೆ ಮಾಡಲಿಲ್ಲ. ಈಗ ಕೋಮುವಾದ ಹುಟ್ಟು ಹಾಕಲು, ಬೆಂಕಿ ಹಚ್ಚಲು ಸಮಿತಿ ರಚನೆ ಮಾಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.