Chamarajanagara: ವಕ್ರದಂತ ಹೊಂದಿದ್ದ ಕಾಡಾನೆ ಸ್ವಾಭಾವಿಕ ಸಾವು
ಹಲವೆಡೆ ಕಾಣಿಸಿಕೊಂಡು ಆತಂಕ ಮೂಡಿಸುತ್ತಿದ್ದ ಆನೆ
Team Udayavani, Nov 5, 2024, 3:11 PM IST
ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಪೋಡುಗಳಾದ ಯರಕನಗದೆ, ಬಂಗ್ಲೆಪೋಡು, ಹೊಸಪೋಡು, ಮುತ್ತುಗದ್ದೆಪೋಡು, ಸೀಗೆಬೆಟ್ಟ, ಕಲ್ಯಾಣಿಪೋಡು, ಮಂಜುಗುಂಡಿ ಪೋಡು ಸೇರಿದಂತೆ ಹಲವು ಕಡೆಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕ ಮೂಡಿಸುತ್ತಿದ್ದ ವಕ್ರದಂತಗಳನ್ನು ಹೊಂದಿದ್ದ ಕಾಡಾನೆ ಮೃತಪಟ್ಟಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಯಳಂದೂರು ವನ್ಯಜೀವಿ ವಲಯದ ಬಾವಿಯಾಣೆ ಶಾಖೆಯ ಕಡಿತಾಳಕಟ್ಟೆ ಗಸ್ತಿನಲ್ಲಿ ತಿರುಗುತ್ತಿದ್ದಾಗ ಇಲ್ಲಿನ ವೀರನಕಾನು ಅರಣ್ಯ ಪ್ರದೇಶದಲ್ಲಿ 50 ರಿಂದ 55 ವರ್ಷ ವಯಸ್ಸಿನ ಗಂಡಾನೆಯೊಂದು ಮೃತಪಟ್ಟಿರುವುದು ಕಂಡು ಬಂದಿದೆ.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಿಆರ್‌ಟಿ ನಿರ್ದೇಶಕ ಶ್ರೀಪತಿ, ಎಸಿಎಫ್ ಪ್ರಕಾಶ್ಕರ್ ಅಕ್ಷಯ್ ಅಶೋಕ್, ಆರ್‌ಎಫ್ಒ ನಾಗೇಂದ್ರ ನಾಯಕ ಹಾಗೂ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಮಲ್ಲೇಶಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಡೀಪುರ ಹುಲಿ ಯೋಜನೆಯ ವೈದ್ಯಾಧಿಕಾರಿ ಮಿರ್ಜಾವಾಸೀಂ ಆನೆಯ ಕಳೇಬರ ಮರಣೋತ್ತರ ಪರೀಕ್ಷೆ ನಡೆಸಿ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಖಚಿತಪಡಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಆಕಸ್ಮಿಕ ಬೆಂಕಿ ತಗುಲಿ 3 ಟ್ರ್ಯಾಕ್ಟರ್ ನಷ್ಟು ಹುರುಳಿ ಮೆದೆ ಭಸ್ಮ
Gundlupete: ತಾಯಿಯೊಂದಿಗೆ ಎರಡು ಮರಿ ಹುಲಿ ಪ್ರತ್ಯಕ್ಷ: ಸಾರ್ವಜನಿಕರಿಗೆ ಆತಂಕ
ಶಿಕ್ಷಕ ಅಮಾನತು ವಿರೋಧಿಸಿ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರಿಂದ ಪ್ರತಿಭಟನೆ
Gundlupete: ಕಿವಿ ಚುಚ್ಚಲು ಅನಸ್ತೇಶಿಯಾ: 6 ತಿಂಗಳ ಮಗು ಸಾವು
Gundlupete: ಹಿಂಬದಿಯಿಂದ ಕಾರು ಡಿಕ್ಕಿ; ಪಾದಚಾರಿ ದಂಪತಿ ಸಾವು
MUST WATCH
ಹೊಸ ಸೇರ್ಪಡೆ
Tamil Nadu: ಮೂವರು ಶಿಕ್ಷಕರಿಂದಲೇ ಶಾಲಾ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
No Spitting: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಗುಟ್ಕಾ ಉಗುಳಿದರೆ 1,000 ದಂಡ?
Jeet Adani: ಪ್ರತೀ ವರ್ಷ 500 ಅಂಗವಿಕಲರ ಲಗ್ನಕ್ಕೆ ನೆರವು… ಅದಾನಿ ಪುತ್ರ
Mudhol: ಹಣದಾಸೆಗೆ 50 ಸಾವಿರ ಕಳೆದುಕೊಂಡ ಉದ್ಯಮಿ; ಆನ್ಲೈನ್ ಮೂಲಕ ಹಣ ಪಡೆದು ವಂಚನೆ
Having Fun: 62ರ ಗರ್ಲ್ಫ್ರೆಂಡ್ ಜತೆ ಮೋಜು ಮಾಡುತ್ತಿರುವೆ… 69ರ ಬಿಲ್ಗೇಟ್ಸ್ ಹೇಳಿಕೆ