ಅಮೆರಿಕದಲ್ಲಿ ಶತಚಂಡಿಕಾ ಯಾಗ ಸಂಪನ್ನ
Team Udayavani, Apr 18, 2022, 5:00 AM IST
ಉಡುಪಿ : ಲೋಕ ಕಲ್ಯಾಣಾರ್ಥವಾಗಿ ಅಮೆರಿಕದ ಫೀನಿಕ್ಸ್ ನ ಪುತ್ತಿಗೆ ಮಠದಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ಎ. 11ರಂದು ಆರಂಭಗೊಂಡ ಶತಚಂಡಿಕಾ ಯಾಗವು ಎ. 16ರಂದು ಪೂರ್ಣಾಹುತಿ ಯೊಂದಿಗೆ ಸಂಪನ್ನಗೊಂಡಿತು.
10 ಮಂದಿ ಋತ್ವಿಜರಿಂದ 100 ಪಾರಾಯಣ, ಲಕ್ಷ ನವಾಕ್ಷರಿ ಮಂತ್ರ ಜಪ, ಹತ್ತು ಸಾವಿರ ಆಜ್ಯ ಹೋಮ ಮೂಲಕ ಶತಚಂಡಿಕಾಯಾಗ ನೆರವೇರಿತು. ಶ್ರೀನಿವಾಸ ದೇವರಿಗೆ ಮತ್ತು ಶ್ರೀ ದುರ್ಗೆಗೆ ಕುಂಭಾಭಿಷೇಕ ಜರಗಿತು.
ಸುಖ, ಶಾಂತಿ ಸಮೃದ್ಧಿ ಪ್ರಾಪ್ತ ವಾಗಬೇಕಾದರೆ ಶ್ರೀದೇವಿಗೆ ಶರಣು ಹೋಗಬೇಕು. ಈ ಹಿನ್ನೆಲೆಯಲ್ಲಿ ಶತಚಂಡಿಕಾ ಯಾಗ ಆಯೋಜಿಸಲಾಯಿತು ಎಂದು ಶ್ರೀಪಾದರು ಆಶೀರ್ವಚನದಲ್ಲಿ ಹೇಳಿದರು.
ವಿಷ್ಣು ಚಕ್ರಾಬ್ಜ್ಯ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಗಳು ನೆರವೇರಿದವು. ಪ್ರಧಾನ ಅರ್ಚಕರಾದ ಕಿದಿಯೂರು ರಾಮದಾಸ್ ಭಟ್, ಶ್ರೀಕಾಂತ್ ಸಾಮಗ, ರಾಘವೇಂದ್ರ ಕೊಡಂಚ, ಅಮೆರಿಕದ 9 ಮಠಗಳ ಪ್ರಧಾನ ಅರ್ಚಕರು, ಟೆಂಪೆ ನಗರದ ಮೇಯರ್ ಪ್ರತಿನಿಧಿ ಪ್ಯಾರಿಷ್ ಸ್ಪಿಟ್ಜ್, ಫೀನಿಕ್ಸ್ ಪುತ್ತಿಗೆ ಮಠದ ಶ್ರೀ ವೆಂಕಟೇಶ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ ರಾವ್, ಮಠದ ಪ್ರ.ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ ಉಪಸ್ಥಿತರಿದ್ದರು. ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭೋಜ ನಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.