Chandrayaan-3: ಶಶಾಂಕನ ಮೇಲೆ ಬೆಳಕು ಹರಿಸಿದ “ಇಸ್ರೋ” ನಕ್ಷತ್ರಗಳು

ಇಸ್ರೋದ ಸಾಧನೆ ಹಿಂದೆ ಹಲವಾರು ವಿಜ್ಞಾನಿಗಳ ತಲೆಗಳಿವೆ. ಅವರ ಪರಿಚಯ ಇಲ್ಲಿದೆ...

Team Udayavani, Aug 23, 2023, 11:44 PM IST

isro logo

ಬಾಹ್ಯಾಕಾಶ ಅಂಗಳದಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಇಸ್ರೋ ಪಾತ್ರವಾಗಿದೆ.  ಈ ಇಸ್ರೋದ ಸಾಧನೆ ಹಿಂದೆ ಹಲವಾರು ವಿಜ್ಞಾನಿಗಳ ತಲೆಗಳಿವೆ. ಅವರ ಪರಿಚಯ ಇಲ್ಲಿದೆ…

ಎಸ್‌.ಸೋಮನಾಥ್‌  ಇಸ್ರೋ ಅಧ್ಯಕ್ಷ

ಕೇರಳದ ಅಲ್ಲೆಪ್ಪಿಯಲ್ಲಿ 1963ರ ಜುಲೈಯಲ್ಲಿ ಜನಿಸಿದ ಎಸ್‌.ಸೋಮನಾಥ್‌ ಅವರು ಕೊಲ್ಲಂನ ಟಿಕೆಎಂ ಕಾಲೇಜು ಆಫ್ ಎಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ. ಜತೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯಿಂದ ಚಿನ್ನದ ಪದಕದೊಂದಿಗೆ ಸ್ಟ್ರಕ್ಚರ್, ಡೈನಾಮಿಕ್ಸ್‌ ಆ್ಯಂಡ್‌ ಕಂಟ್ರೋಲ್‌ ಸ್ಪಷಲೈಸೇಶನ್‌ನೊಂದಿಗೆ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌ ಪದವಿ  ಪಡೆದಿದ್ದಾರೆ.  1985ರಲ್ಲಿ ಇಸ್ರೋ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಳಿಕ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ)ನ ಯೋಜನಾ ನಿರ್ದೇಶಕರಾಗಿ, ಜಿಯೋಸಿಂಕ್ರೋನಸ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌(ಜಿಎಸ್‌ಎಲ್‌ವಿ ಎಂಕೆ-ಐಐಐ)ನ ಯೋಜನಾ ನಿರ್ದೇಶಕ ಸೇರಿದಂತೆ ಎಲ್‌ಪಿಎಸ್‌ಸಿ ಮತ್ತು ವಿಎಸ್‌ಎಸ್‌ಸಿಯಲ್ಲಿ ಹಲವು ಹು¨ªೆಗಳಲ್ಲಿ ಎಸ್‌.ಸೋಮನಾಥ್‌ ಸೇವೆ ಸಲ್ಲಿಸಿದ್ದಾರೆ. 2014ರ ನವೆಂಬರ್‌ವರೆಗೆ ಅವರು ಪ್ರೊಪಲ್ಷನ್‌ ಮತ್ತು ಸ್ಪೇಸ್‌ ಆರ್ಡಿನೆನ್ಸ್‌ ಎಂಟಿಟಿಯ ಉಪ ನಿರ್ದೇಶಕರಾಗಿದ್ದರು.

2015ರಲ್ಲಿ ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್‌ ಸೆಂಟರ್‌(ಎಲ್‌ಪಿಎಸ್‌ಸಿ) ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡರು. ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರ(ವಿಎಸ್‌ಎಸ್‌ಸಿ)ದ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಆಸ್ಟ್ರೋನಾಟಿಕಲ್‌ ಸೊಸೈಟಿ ಆಫ್ ಇಂಡಿಯಾ(ಎಎಸ್‌ಐ)ದಿಂದ ಸ್ಪೇಸ್‌ ಗೋಲ್ಡ್‌ ಮೆಡೆಲ್‌ಗೆ ಸೋಮನಾಥ್‌ ಅವರು ಭಾಜನರಾಗಿದ್ದಾರೆ. ಇಸ್ರೋದಿಂದ 2014ರಲ್ಲಿ ಪರ್ಫಾಮೆನ್ಸ್‌ ಎಕ್ಸಲೆನ್ಸ್‌ ಪ್ರಶಸ್ತಿ ಹಾಗೂ ಅದೇ ವರ್ಷ ಟೀಮ್‌ ಎಕ್ಸಲೆನ್ಸ್‌ ಅವಾರ್ಡ್‌ ಪಡೆದಿದ್ದಾರೆ. ಇಂಡಿಯನ್‌ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನಿಂದ ಫೆಲೋ ಆಗಿದ್ದ ಅವರು, ಇಂಟರ್‌ನ್ಯಾಶನಲ್‌ ಅಕಾಡೆಮಿ ಆಫ್ ಆಸ್ಟ್ರಾನಾಟ್ಸ್‌ನ ಸದಸ್ಯರಾಗಿದ್ದಾರೆ. 2022ರ ಜ.12ರಂದು ಮೂರು ವರ್ಷಗಳ ಅವಧಿಗೆ ಇಸ್ರೋ ಮುಖ್ಯಸ್ಥರಾಗಿ ಸಂಪುಟ ನೇಮಕಾತಿ ಸಮಿತಿ(ಎಸಿಸಿ)ಯಿಂದ ಎಸ್‌.ಸೋಮನಾಥ್‌ ನೇಮಕವಾದರು. ಇಸ್ರೋದ 10ನೇ ಮುಖ್ಯಸ್ಥರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಿತು ಕರಿದಾಲ್‌ ಶ್ರೀವಾಸ್ತವ ಹಿರಿಯ ವಿಜ್ಞಾನಿ, ಇಸ್ರೋ

ಲಕ್ನೋ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್‌ಸಿ ಪದವಿ ಪಡೆದಿರುವ ರಿತು ಕರಿದಾಲ್‌ ಶ್ರೀವಾಸ್ತವ ಅವರು, ಲಕ್ನೋ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದಲ್ಲಿ ಪಿ.ಎಚ್‌ಡಿಗೆ ಪ್ರವೇಶ ಪಡೆದಿದ್ದಾರೆ. ಇದಕ್ಕೂ ಮುನ್ನ ಲಕ್ನೋ ವಿಶ್ವವಿದ್ಯಾನಿಲಯದಿಂದ ಆರು ತಿಂಗಳ ಕಾಲ ಸಂಶೋಧನಾರ್ಥಿ ಆಗಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿ ಸಿದ್ದಾರೆ.  “ಭಾರತದ ರಾಕೆಟ್‌ ಮಹಿಳೆ’ ಎಂದೇ ರಿತು ಖ್ಯಾತಿ ಪಡೆದಿದ್ದಾರೆ. 1997ರಲ್ಲಿ ಇಸ್ರೋ ಸೇರ್ಪಡೆಯಾದ ಇವರು, ಮಂಗಳ ಉಪಗ್ರಹಕ್ಕೆ ಭಾರತದ ಮಹತ್ವದ ಯೋಜನೆ “ಮಂಗಳಯಾನ’ದ ಡೆಪ್ಯೂಟಿ ಅಪರೇಷನ್ಸ್‌ ಡೈರೆಕ್ಟರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಜತೆಗೆ “ಚಂದ್ರಯಾನ-3’ರ ಯೋಜನಾ ನಿರ್ದೇಶಕಿಯಾಗಿದ್ದಾರೆ. 2007ರಲ್ಲಿ ಇಸ್ರೋ ಯುವ ವಿಜ್ಞಾನಿ ಪ್ರಶಸ್ತಿಗೆ ರಿತು ಭಾಜನರಾಗಿದ್ದಾರೆ. ಅಲ್ಲದೇ ಲಕ್ನೋ ವಿಶ್ವವಿದ್ಯಾನಿಲಯವು ಇವರಿಗೆ ಗೌರವ ಡಾಕ್ಟರೆಟ್‌ ನೀಡಿ ಗೌರವಿಸಿದೆ.

ಎಸ್‌.ಉನ್ನಿಕೃಷ್ಣನ್‌ ನಾಯರ್‌, ನಿರ್ದೇಶಕ, ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರ(ವಿಎಸ್‌ಎಸ್‌ಸಿ)

ಹಿರಿಯ ವಿಜ್ಞಾನಿ ಎಸ್‌.ಉನ್ನಿಕೃಷ್ಣನ್‌ ನಾಯರ್‌ ಅವರು ಕೇರಳ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಮಾರ್‌ ಅಥಾನಾಸಿಯಸ್‌ ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಿಂದ ಬಿ.ಟೆಕ್‌ ಪದವೀಧರರಾಗಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯಿಂದ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಎಂಇ ಪದವಿ ಹಾಗೂ ಐಐಟಿ ಮದ್ರಾಸ್‌ನಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ.  ಉನ್ನಿಕೃಷ್ಣನ್‌ ಅವರು ತಿರುವನಂತಪುರದ ಇಂಡಿಯನ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಸ್ಪೇಸ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯ ನಿರ್ದೇಶಕರಾಗಿದ್ದು, ಬೆಂಗಳೂರಿನ ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ನ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ.

1985ರಲ್ಲಿ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರಕ್ಕೆ ಸೇರ್ಪಡೆಯಾದ ಅವರು, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ಎಲ್‌ವಿಎಂ3 ಗಾಗಿ ವಿವಿಧ ಏರೋಸ್ಪೇಸ್‌ ವ್ಯವಸ್ಥೆ ಮತ್ತು ಕಾರ್ಯವಿಧಾನಗಳ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದರು. ಜತೆಗೆ ಸ್ಪೇಸ್‌ ಕ್ಯಾಪುÕಲ್‌ ರಿಕವರಿ ಎಕ್ಸ್‌ ಪರಿಮೆಂಟ್‌(ಎಸ್‌ಆರ್‌ಇ)ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಯೋಜನೆಯ ಪೂರ್ವ ಯೋಜನೆಯ ತಂತ್ರಜ್ಞಾನ ಅಭಿವೃದ್ಧಿ ಚಟುವಟಿಕೆಗಳ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2014ರಲ್ಲಿ ಇಸ್ರೋದ ಟೀಮ್‌ ಎಕ್ಸಲೆನ್ಸ್‌ ಅವಾರ್ಡ್‌ಗೆ ಅವರು ಭಾಜನರಾಗಿದ್ದಾರೆ. 2014ರಲ್ಲಿ ಇಸ್ರೋ ಇಂಡಿವಿಶ್ಯೂಯಲ್‌ ಮೆರಿಟ್‌ ಅವಾರ್ಡ್‌ ಪಡೆದಿದ್ದಾರೆ. 2022ರ ಫೆಬ್ರವರಿಯಲ್ಲಿ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಪದಗ್ರಹಣ ಮಾಡಿದರು.

ವಿ.ನಾರಾಯಣ್‌ ನಿರ್ದೇಶಕ, ಎಲ್‌ಪಿಎಸ್‌ಸಿ

ಹಿರಿಯ ವಿಜ್ಞಾನಿ ವಿ.ನಾರಾಯಣ್‌ ಅವರು ಐಐಟಿ ಖರಗ್‌ಪುರದಲ್ಲಿ ಬಿಟೆಕ್‌ ಪದವಿ ಹಾಗೂ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರೊಪಲ್ಷನ್‌ ಸಿಸ್ಟಮ್‌ ಅನಾಲಿಸಿಸ್‌, ಕ್ರಯೋಜೆನಿಕ್‌ ಎಂಜಿನ್‌ ವಿನ್ಯಾಸ ಮತ್ತು ದೊಡ್ಡ ಯೋಜನೆಗಳ ನಿರ್ವಹಣೆಯಲ್ಲಿ ವಿ.ನಾರಾಯಣ್‌ ಪರಿಣಿತರಾಗಿದ್ದಾರೆ. ಪ್ರಸ್ತುತ ಅವರು ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್ಸ್‌ ಸೆಂಟರ್‌(ಎಲ್‌ಪಿಎಸ್‌ಸಿ)ನ ನಿರ್ದೇಶಕರಾಗಿದ್ದಾರೆ. ಎಲ್‌ಪಿಎಸ್‌ಸಿನಲ್ಲಿ ಚಂದ್ರಯಾನ-3ರ ಎಲ್‌ವಿಎಂ3 ರಾಕೆಟ್‌ಗಾಗಿ ಕ್ರಯೋಜೆನಿಕ್‌ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಎಂ. ವನಿತಾ ಯುಆರ್‌ ರಾವ್‌ ಸ್ಯಾಟಲೈಟ್‌ ಕೇಂದ್ರದ ಉಪ ನಿರ್ದೇಶಕಿ

ಯು.ಆರ್‌.ರಾವ್‌ ಸ್ಯಾಟಲೈಟ್‌ ಕೇಂದ್ರದ ಉಪನಿರ್ದೇಶಕಿಯಾಗಿರುವ ಎಂ.ವನಿತಾ ಅವರು, ಚಂದ್ರಯಾನ 2 ಮಿಷನ್‌ನ ಯೋಜನಾ ನಿರ್ದೇಶಕಿಯಾಗಿದ್ದರು. ಸ್ಪೇಸ್‌ಕ್ರಾಫ್ಟ್ ಮತ್ತು ಲ್ಯಾಂಡರ್‌ಗಳ ಬಗ್ಗೆ ಅಪಾರ ಅನುಭವವಿದೆೆ. ಇವರು ಎಲೆಕ್ಟ್ರಾನಿಕ್‌ ಸಿಸ್ಟಮ್‌ ಎಂಜಿನಿಯರ್‌ ಆಗಿದ್ದು, ಚಂದ್ರಯಾನ ನಿರ್ದೇಶಕಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಎಂ.ಶಂಕರ್‌  ನಿರ್ದೇಶಕ, ಯು.ಆರ್‌.ರಾವ್‌ ಬಾಹ್ಯಾಕಾಶ ಕೇಂದ್ರ(ಯುಆರ್‌ಎಸ್‌ಸಿ)

ಎಂ.ಶಂಕರ್‌ ಅವರು 1986ರಲ್ಲಿ ತಮಿಳುನಾಡಿನ ತಿರುಚಿರಾಪಲ್ಲಿಯ ಭಾರತೀದಾಸನ್‌ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದಾರೆ. 2017ರಲ್ಲಿ ಇಸ್ರೋ ಪರ್ಫಾಮೆನ್ಸ್‌ ಎಕ್ಸಲೆನ್ಸ್‌ ಪ್ರಶಸ್ತಿಗೆ ಭಾಜರಾಗಿದ್ದಾರೆ. 2017 ಮತ್ತು 2018ರಲ್ಲಿ ಇಸ್ರೋ ಟೀಮ್‌ ಎಕ್ಸಲೆನ್ಸ್‌ ಅವಾರ್ಡ್‌ ಗಳನ್ನು ಪಡೆದಿದ್ದಾರೆ. ಯು.ಆರ್‌.ರಾವ್‌ ಬಾಹ್ಯಾಕಾಶ ಕೇಂದ್ರ(ಯುಆರ್‌ಎಸ್‌ಸಿ)ದ ಕಮ್ಯೂನಿಕೇಶನ್‌ ಆ್ಯಂಡ್‌ ಪವರ್‌ ಸಿಸ್ಟಮ್ಸ್‌ ಕ್ಷೇತ್ರದ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೋಲರ್‌ ಆರೆ, ಪವರ್‌ ಸಿಸ್ಟಮ್‌, ಉಪಗ್ರಹ ಸ್ಥಾನೀಕರಣ ವ್ಯವಸ್ಥೆ ಮತ್ತು ಲೋ ಅರ್ಥ್ ಆರ್ಬಿಟ್‌(ಎಲ್‌ಇಒ) ಉಪಗ್ರಹಗಳಿಗೆ ಸಂವಹನ ವ್ಯವಸ್ಥೆ, ನ್ಯಾವಿಗೇಶನ್‌ ಉಪಗ್ರಹಗಳು ಮತ್ತು ಮಂಗಳಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಇಸ್ರೋದ ಮಹಾತ್ವಾಕಾಂಕ್ಷೆಯ ಗಗನಯಾನ ಯೋಜನೆಯಲ್ಲೂ ಕೂಡ ಎಂ.ಶಂಕರ್‌ ತೊಡಗಿಕೊಂಡಿದ್ದಾರೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. 2021ರ ಜೂನ್‌ನಿಂದ ಯು.ಆರ್‌.ರಾವ್‌ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಿ.ಎನ್‌.ರಾಮಕೃಷ್ಣ,  ನಿರ್ದೇಶಕ ಐಎಸ್‌ಟಿಆರ್‌ಎಸಿ

ಬೆಂಗಳೂರಿನವರಾದ ಬಿ.ಎನ್‌.ರಾಮಕೃಷ್ಣ ಅವರು ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯಾವಿಗೇಶನ್‌ ಉಪಗ್ರಹಗಳು ಹಾಗೂ ಗಗನನೌಕೆ ಇರುವ ಕಕ್ಷೆಯನ್ನು ಗುರುತಿಸುವ ಕ್ಷೇತ್ರದಲ್ಲಿ ರಾಮಕೃಷ್ಣ  ತಜ್ಞರಾಗಿದ್ದಾರೆ. ಬೆಂಗಳೂರಿನ ಬ್ಯಾಲಾಳುನಲ್ಲಿರುವ ಇಸ್ರೋ ಟೆಲಿಮಿಟ್ರಿ ಟ್ರ್ಯಾಕ್ಕಿಂಗ್‌ ಆ್ಯಂಡ್‌ ಕಮಾಂಡ್‌ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ)ನಲ್ಲಿ ಪ್ರಸ್ತುತ ನಿರ್ದೇಶಕರಾಗಿದ್ದಾರೆ.

ಪಿ.ವೀರಮುತ್ತುವೆಲ್‌, ಯೋಜನಾ ನಿರ್ದೇಶಕ, ಚಂದ್ರಯಾನ-3

ವಿಜ್ಞಾನಿ ಪಿ.ವೀರಮುತ್ತುವೆಲ್‌ ಅವರು ಮದ್ರಾಸಿನ ಇಂಡಿಯನ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ. ಈ ಹಿಂದೆ ಇಸ್ರೋ ಪ್ರಧಾನ ಕಚೇರಿಯಲ್ಲಿ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆ ಯ ಉಪ ನಿರ್ದೇಶಕ ಹುದ್ದೆಯನ್ನು ಅವರು ಆಲಂಕರಿಸಿದ್ದರು. 2019ರಲ್ಲಿ ಚಂದ್ರಯಾನ-3 ಯೋಜನೆಯ ಯೋಜನಾ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡರು.

ಕಲ್ಪನಾ ಕೆ.  ಚಂದ್ರಯಾನ 3 ಯೋಜನೆಯ ಉಪನಿರ್ದೇಶಕಿ

ಚಂದ್ರಯಾನ 3 ಮಿಷನ್‌ನಲ್ಲಿ ಕಲ್ಪನಾ ಕೆ. ಅವರು ಉಪನಿರ್ದೇಶಕರಾಗಿದ್ದಾರೆ. ಈ ಹಿಂದಿನ ಚಂದ್ರಯಾನ 2 ಮತ್ತು ಮಂಗಳಯಾನ ಯೋಜನೆಗಳಲ್ಲೂ ಕೆಲಸ ಮಾಡಿದ ಅನುಭವ ಇವರಿಗಿದೆ.

ಟಾಪ್ ನ್ಯೂಸ್

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.