![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 7, 2019, 12:21 AM IST
ಬೆಂಗಳೂರು: ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಇನ್ನು ಕೆಲವೇ ಹೊತ್ತಿನಲ್ಲೇನೋ ಇಳಿಯಲಿದೆ. ಅದಕ್ಕೆ ಸಿದ್ಧತೆಯನ್ನೂ ಇಸ್ರೋ ವಿಜ್ಞಾನಿಗಳು ಮಾಡುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ ಎನ್ನುವುದಕ್ಕೆ ಕಾರಣವಿದೆ.
15 ನಿಮಿಷಗಳ ಕಾಲದ ಈ ಪ್ರಕ್ರಿಯೆಯಲ್ಲಿ ತುಸು ಎಡವಟ್ಟಾದರೂ ಇಷ್ಟರವರೆಗೆ ಮಾಡಿದ್ದು ನೀರಿನಲ್ಲಿಟ್ಟ ಹೋಮದಂತಾಗುತ್ತದೆ. ಅದಕ್ಕಾಗಿ ಸಾಕಷ್ಟು ಮುಂಜಾಗ್ರತೆಯನ್ನೂ ಕೈಗೊಂಡಿದ್ದಾರೆ. ವಿಕ್ರಂ ಯಶಸ್ವಿ ಲ್ಯಾಂಡಿಂಗ್ ವಿಜ್ಞಾನಿಗಳ ಬುದ್ಧಿಮತ್ತೆಯನ್ನೂ, ಸೃಜನಶೀಲತೆಯನ್ನೂ ಒರೆಗೆ ಹಚ್ಚಲಿದೆ ಎನ್ನುವದರಲ್ಲಿ ಅನುಮಾನವೇ ಇಲ್ಲ.
ವಿಕ್ರಂ ಇಳಿಯುವ ಮುನ್ನ ಇದಕ್ಕಾಗಿ 100 ಮೀ. ಮೇಲಿನಿಂದಲೇ ಕ್ಯಾಮೆರಾ ಮೂಲಕ ಜಾಗವನ್ನು ಪರಿಶೀಲಿಸಲಿದೆ. ಸಾಧ್ಯವಿದ್ದಷ್ಟೂ ಸಮತಟ್ಟಾದ ಜಾಗವನ್ನೇ ಅದು ಆಯ್ದುಕೊಳ್ಳಲಿದೆ. ಗರಿಷ್ಠ ಅಂದರೆ ಶೇ.15ರಷ್ಟು ನೆಲ ಬಾಗಿರಬಹುದಷ್ಟೇ. ಆದ್ದರಿಂದ ಕುಳಿಗಳ ಬದಿಯಲ್ಲಿ ಅಥವಾ ಎರಡು ಕುಳಿಗಳ ನಡುವಿನ ಜಾಗದಲ್ಲಿ ಅದನ್ನು ಇಳಿಸಲು ಯೋಜನೆ ರೂಪಿಸಲಾಗಿದೆ.
ಇನ್ನು ದಾಖಲೆಗಳ ಪ್ರಕಾರ ವಿವಿಧ ದೇಶಗಳು ಚಂದ್ರನಲ್ಲಿ ನೌಕೆಗಳನ್ನು ಇಳಿಸಿದ್ದರಲ್ಲಿ ಯಶಸ್ವಿಯಾಗಿದದ್ದು ಶೇ.33ರಷ್ಟು ಮಾತ್ರ. ಅಂದರೆ ದೊಡ್ಡ ಪಾಲು ನೌಕೆ ಇಳಿಸುವುದರಲ್ಲಿ ವಿಫಲವಾಗಿದೆ. ಇತ್ತೀಚೆಗೆ ಎ.11ರಂದು ಇಸ್ರೇಲ್ ನೌಕೆಯನ್ನು ಚಂದ್ರನ ಮೇಲಿಳಿಸುವ ಪ್ರಯತ್ನ ಮಾಡಿತ್ತಾದರೂ ಅದರಲ್ಲಿ ವಿಫಲವಾಗಿತ್ತು. ಆದ್ದರಿಂದಲೇ ಇಸ್ರೋಗೆ 15 ನಿಮಿಷಗಳು ಅತೀವ ಮಹತ್ವದ್ದು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.