ಪಶ್ಚಿಮಘಟ್ಟದ ಲಂಗೂರ್‌ ಜೀವನಕ್ರಮ ಬದಲಾವಣೆ- ಆಹಾರಕ್ಕಾಗಿ ಗ್ರಾಮ, ಪಟ್ಟಣಗಳತ್ತ ಮುಜ್ಜು ವಲಸೆ


Team Udayavani, Feb 2, 2024, 1:07 AM IST

langoor

ಉಡುಪಿ: ಕಪಿಗಳ ಜಾತಿಯಲ್ಲಿ ಅತ್ಯಂತ ವಿಶಿಷ್ಟ ಜೀವನ ಕ್ರಮ ಹೊಂದಿರುವ “ಬ್ಲ್ಯಾಕ್‌ ಫ‌ೂಟೆಡ್‌ ಗ್ರೇ ಲಂಗೂರ್‌’ ಸಂತತಿ ಸಂದಿಗ್ಧತೆಯಲ್ಲಿ ಸಿಲುಕಿದ್ದು, ಇದರ ಬದಲಾದ ಜೀವನಕ್ರಮ ವನ್ಯಜೀವಿ ಪ್ರಿಯರಲ್ಲಿ ಕಳವಳ ಮೂಡಿಸಿದೆ.

ಕರಾವಳಿ ಭಾಗದ ಅರಣ್ಯದಂಚಿನ ಭಾಗದಲ್ಲಿ ಅಪರೂಪಕ್ಕೆ ಕಾಣಸಿಗುತ್ತಿದ್ದ ಈ ಲಂಗೂರ್‌ ಇಂದು ಗ್ರಾಮೀಣ, ಪಟ್ಟಣ ಭಾಗದಲ್ಲೂ ಕಂಡು ಬರುತ್ತಿದೆ. ಉಡುಪಿಯ ಅಲೆವೂರು, ಇಂದ್ರಾಳಿ, ಮರ್ಣೆ ಭಾಗದಲ್ಲಿ ಮನೆಯಂಗಳದಲ್ಲಿ ಬಂದು ಕೂರುತ್ತಿವೆ. ವನ್ಯಜೀವಿಗಳ ಮೇಲೆ ನಗರೀಕರಣ ಪ್ರಭಾವ ಬೀರಿದ ರೀತಿಯಿದು. ಗ್ರೇ ಲಂಗೂರ್‌ ಮತ್ತು ಸಿಂಗಳೀಕ ಜಾತಿಯ ಕೋತಿಗಳು ಭಾರತದ ಮಧ್ಯ ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವುದು ಇಲ್ಲಿನ ಜೀವವೈವಿಧ್ಯತೆಯ ವೈಶಿಷ್ಟé. ಮಳೆಕಾಡು ಮೆಚ್ಚಿನ ಆವಾಸಸ್ಥಾನ. ಕನ್ನಡದಲ್ಲಿ ಕಪ್ಪು ಮೂತಿಯ ಮುಶಿಯ, ತುಳು ಭಾಷೆಯಲ್ಲಿ ಮುಜ್ಜು ಎಂದು ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ದ.ಕ. ಜಿಲ್ಲೆ, ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚು ಕಾಣಸಿಗುತ್ತದೆ.ಆಗುಂಬೆ, ಹೆಬ್ರಿ, ಬಿಸಿಲೇಘಾಟ್‌, ಸಕಲೇಶಪುರ, ಕುದುರೆ ಮುಖ, ದಾಂಡೇಲಿ, ಶಿರಸಿ, ಪುಷ್ಪಗಿರಿ, ಕೊಲ್ಲೂರು ಮೂಕಾಂಬಿಕ ವನ್ಯಜೀವಿ ಪ್ರದೇಶ, ಬೆಳ್ತಂಗಡಿ, ಮಡಿಕೇರಿ, ಸುಳ್ಯ ಭಾಗದ ಅರಣ್ಯ ಪ್ರದೇಶ, ಅರಣ್ಯದಂಚಿನ ಗ್ರಾಮದಲ್ಲಿ ಇವುಗಳನ್ನು ಕಾಣಬಹುದು.

ಜನವಸತಿ ಪ್ರದೇಶದತ್ತ ವಲಸೆಗೆ ಕಾರಣವೇನು ?
“ಬ್ಲ್ಯಾಕ್‌ ಫ‌ೂಟೆಡ್‌ ಗ್ರೇ ಲಂಗೂರ್‌’ ಹೆಚ್ಚಾಗಿ ಮರಗಳ ಮೇಲೆ ಹಸುರು ಎಲೆ, ಹಣ್ಣುಗಳನ್ನು ತಿಂದು ಬದುಕುವ ಕೋತಿಗಳ ಜಾತಿಗೆ ಸೇರಿದ ಪ್ರಾಣಿ. ಕಾಡಿನಲ್ಲಿ ಆಹಾರದ ಕೊರತೆಯಾದಾಗ ವಲಸೆ ಸಾಮಾನ್ಯ. ರಸ್ತೆ ಬದಿಯಲ್ಲಿ ವಾಹನ ಸವಾರರು ಊಟ, ತಿಂಡಿ ನೀಡಿದಾಗ ಹೆಚ್ಚು ಆಕರ್ಷಣೆಗೆ ಒಳಗಾಗುತ್ತವೆ. ಈ ಬಾಯಿರುಚಿ ಸಿಕ್ಕ ಅನಂತರ ಅವುಗಳಿಗೆ ಎಲೆ, ಹಣ್ಣು ಇಷ್ಟವಾಗುವುದಿಲ್ಲ. ಮನುಷ್ಯ ಸ್ನೇಹಿ ಜೀವಿಗಳಾದ್ದರಿಂದ ಪಟ್ಟಣ, ಗ್ರಾಮೀಣ ಭಾಗಕ್ಕೆ ಆಹಾರ ಅರಸಿಕೊಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಐಯುಸಿಎನ್‌ ಕೆಂಪುಪಟ್ಟಿಗೆ
ಗ್ರೇ ಲಂಗೂರ್‌ ಬಗ್ಗೆ ವನ್ಯಜೀವಿ ತಜ್ಞರ ಅಧ್ಯಯನ ವರದಿ ಪರಿಶೀಲಿಸಿದ ಇಂಟರ್‌ನ್ಯಾಶನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಶನ್‌ ನೇಚರ್‌ (ಐಯುಸಿಎನ್‌) ಸಂಸ್ಥೆಯು ಗ್ರೇ ಲಂಗೂರ್‌ ಅಪಾಯಕ್ಕೊಳಗಾಗಬಹುದಾದ ಪ್ರಭೇದ ಎಂದು ಕೆಂಪು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಇದರ ಸಂರಕ್ಷಣೆ, ಜೀವನ ಕ್ರಮದ ಬಗ್ಗೆ ಮುತುವರ್ಜಿ ವಹಿಸುವಂತೆ ಸೂಚಿಸಿದೆ.

ಜಗತ್ತಿನ ಬೇರೆಲ್ಲೂ ಕಾಣಿಸದ ಗ್ರೇ ಲಂಗೂರ್‌ಗಳು ಕರ್ನಾಟಕ, ಕೇರಳ, ಗೋವಾ ರಾಜ್ಯಗಳ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಾತ್ರ ಕಾಣಸಿಗುತ್ತವೆ. ಗುಂಪಿನಲ್ಲಿ ವಾಸಿಸುವ ಗ್ರೇ ಲಂಗೂರ್‌ ಹೆಚ್ಚಾಗಿ ಹಸುರು ಎಲೆ ತಿಂದು ಬದುಕುವ ಕೋತಿಯ ಜಾತಿಗೆ ಸೇರಿದೆ. ಜೀವಿತಾವಧಿ ಸುಮಾರು 30 ವರ್ಷ.
– ಡಾ| ಮನಿತಾ ಟಿ.ಕೆ., ಮುಖ್ಯಸ್ಥರು, ಪ್ರಾಣಿಶಾಸ್ತ್ರ ವಿಭಾಗ, ಎಂಜಿಎಂ ಕಾಲೇಜು

ಕಾಡು ಪ್ರಾಣಿಗಳು ನೈಸರ್ಗಿಕವಾಗಿಯೇ ಆಹಾರ ಸೇವಿಸಬೇಕು.ಅವುಗಳಿಗೆ ಬೇಕರಿ ತಿಂಡಿ, ಅನ್ನ, ಸಾರು, ಮೊದಲಾದ ಆಹಾರ ನೀಡುವುದು ಸೂಕ್ತವಲ್ಲ. ಈ ರೀತಿ ಆಹಾರ ನೀಡದಂತೆ ಆಗುಂಬೆ, ಹೆಬ್ರಿ ಪರಿಸರದಲ್ಲಿ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಾಡಿನಲ್ಲಿ ಎಲ್ಲ ಸಮಯದಲ್ಲಿ ಆಹಾರ ಸಿಗುವುದು ಕಡಿಮೆ. ಮನುಷ್ಯರು ನೀಡುವ ರುಚಿಕರ ಆಹಾರದ ಆಕರ್ಷಣೆಗೊಳಗಾಗಿ ಲಂಗೂರ್‌ನಂತಹ ವಿಶೇಷ ಜಾತಿಯ ಕೋತಿಗಳು ಕಾಡುಬಿಟ್ಟು ನಗರ, ಗ್ರಾಮೀಣ ಭಾಗಕ್ಕೆ ವಲಸೆ ಬರುತ್ತಿರಬಹುದು.
– ಗಣಪತಿ, ಡಿಎಫ್ಒ, ಅರಣ್ಯ ಇಲಾಖೆ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ

 ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige

Udupi; ಗೀತಾರ್ಥ ಚಿಂತನೆ-49: ಕೊನೆಯಲ್ಲೂ ಧೃತರಾಷ್ಟ್ರನ ಲಾಭದ ದೃಷ್ಟಿ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

002

Karkala: ಎದೆ ನೋವಿನಿಂದ ಕೃಷಿಕ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.