ಬರ ನಿಯಮ ಬದಲಿಸಿ: ಕೇಂದ್ರ ಸರ್ಕಾರಕ್ಕೆ CM ಸಿದ್ದರಾಮಯ್ಯ ಪತ್ರದ ಮನವಿ


Team Udayavani, Aug 13, 2023, 10:07 PM IST

SIDDARAMAYYA 1

ಬೆಂಗಳೂರು: ರಾಜ್ಯಾದ್ಯಂತ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಬರಗಾಲ ಘೋಷಣೆಗೆ ಅಡ್ಡಿಯಾಗಿರುವ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರಿಗೆ 6 ಪುಟಗಳ ಸುದೀರ್ಘ‌ ಪತ್ರ ಬರೆದಿರುವ ಸಿಎಂ, ಇತ್ತೀಚೆಗಷ್ಟೇ ಕಾವೇರಿ ನೀರಿಗಾಗಿ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿರುವುದನ್ನು ಅರಿತು ಬರಗಾಲದ ಬವಣೆಯನ್ನು ಅರ್ಥ ಮಾಡಿಸಲು ಸಿಎಂ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಬರ ನಿರ್ವಹಣೆ ಕೈಪಿಡಿ-2016ರಲ್ಲಿನ ಮಾರ್ಗಸೂಚಿಗಳನ್ನೇ ಈಗಲೂ ಅನುಸರಿಸಲಾಗುತ್ತಿದ್ದು, ಕೆಲ ನಿರ್ದಿಷ್ಟ ಮಾನದಂಡಗಳು ಕಠಿಣವಾಗಿರುವುದರಿಂದ ಘೋಷಣೆ ಕಷ್ಟವಾಗುತ್ತಿದೆ ಎಂದಿದ್ದಾರೆ. ರಾಜ್ಯದಲ್ಲಿ ಬರಗಾಲದ ತೀವ್ರತೆ ಹೆಚ್ಚುತ್ತಿದ್ದು, ಬೆಳೆ ನಷ್ಟ, ನೀರಿನ ಬವಣೆ, ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಆರ್ಥಿಕ ಸಂಕಷ್ಟ ಎದುರಾಗಿದೆ. ನಾಡಿನ ಕೃಷಿ ವಲಯ, ಕೃಷಿಕರು ಮತ್ತು ನಮ್ಮ ಜನಜೀವನದ ಮಳೆ ಸಾಕಷ್ಟು ಮೇಲೆ ಪರಿಣಾಮ ಬೀರುತ್ತಿದೆ. ಅನಿಮಿಯತ ಹವಾಮಾನ ಅಥವಾ ಹವಾಮಾನ ವೈಪರೀತ್ಯದಂತಹ ಸಂದರ್ಭದಲ್ಲಿ ಬರ ಘೋಷಣೆ ಕಷ್ಟವಾಗುತ್ತಿರುವುದರಿಂ ದ ಮಾನದಂಡಗಳ ಮರುಮೌಲ್ಯಮಾಪನ ಮಾಡುವುದು ಒಳಿತು ಎಂದು ಒತ್ತಾಯಿಸಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಮುಂಗಾರು ಪ್ರವೇಶವು ತಡವಾಯಿತಲ್ಲದೆ, ದುರ್ಬಲವೂ ಆದ್ದರಿಂದ ಜೂನ್‌ನಲ್ಲೇ ಶೇ.56 ರಷ್ಟು ಮಳೆ ಕೊರತೆ ಆಯಿತು. ಕನಿಷ್ಠ 336 ಎಂಎಂ ಮಳೆಯಾಗಬೇಕಿದ್ದ ನೈಋತ್ಯ ಮುಂಗಾರಿನಲ್ಲಿ 234 ಎಂಎಂ ಮಳೆಯಾಗಿದ್ದು, ಶೇ.34 ರಷ್ಟು ಮಳೆ ಕೊರತೆ ಎದುರಿಸುತ್ತಿದ್ದೇವೆ. ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಯೂ ವಿಫ‌ಲವಾಗಿದೆ. ಹಲವು ತಾಲೂಕುಗಳಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಬರ ಘೋಷಣೆಗೆ ಎನ್‌ಡಿಆರ್‌ಎಫ್ ಮಾನಂದಡಗಳು ಅಡ್ಡಿಯಾಗಿವೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ವಲಯ ಆಧಾರಿತ ಮಾನದಂಡವೇ ಸರಿ
ಹವಾಮಾನ ಆಧಾರಿತ ಹದಿನಾಲ್ಕೂ ಕೃಷಿ ವಲಯಗಳಲ್ಲಿ ಒಂದೇ ರೀತಿಯ ಸಮಸ್ಯೆಗಳಿಲ್ಲ. ಬೇರೆ ಬೇರೆ ರೀತಿಯ ಸವಾಲುಗಳಿವೆ. ಹೀಗಾಗಿ ಸ್ಥಳೀಯ ಪರಿಸರ, ನೀರಿನ ಲಭ್ಯತೆ, ಕೃಷಿ ಪದ್ಧತಿಗಳನ್ನು ಆಧರಿಸಿ ವಲಯ ಆಧಾರಿತ ಮಾನದಂಡಗಳನ್ನು ನಿಗದಿಪಡಿಸುವುದು ಸೂಕ್ತ. ಕೇವಲ ಹವಾಮಾನ, ಕೃಷಿ, ಜಲವಿದ್ಯುತ್‌ ಸಾಮರ್ಥ್ಯಗಳನ್ನು ಆಧರಿಸಿ ಬರಗಾಲವನ್ನು ನಿರ್ಧರಿಸುವುದು ಸರಿಯಲ್ಲ. ಮೇ, ಜೂನ್‌, ಜುಲೈನಲ್ಲಿ ಸರಿಯಾಗಿ ಮಳೆಯಾಗದೆ, ತೀವ್ರಗೊಳ್ಳುವ ಮಾರುತಗಳ ಚಲನೆ, ವಾಯುಭಾರ ಕುಸಿತದಂತಹ ಹಲವು ಕಾರಣಗಳಿಂದ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮಳೆಯಾಗುತ್ತದೆ. ಮುಂಗಾರು ಹಂಗಾಮಿನ ಮೊದಲರ್ಧದಲ್ಲಿ ಅತ್ಯಲ್ಪ ಮಳೆಯಾಗುವುದರಿಂದ ಬಿತ್ತನೆ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಬಿತ್ತನೆ ಸಂದರ್ಭದಲ್ಲಿ ಅತ್ಯಲ್ಪ ಮಳೆಯಾಗಿ ಬೆಳೆ ಕೈಕೊಟ್ಟರೆ, ಕೆಲವೊಮ್ಮೆ ಬೆಳೆ ಕೈಗೆ ಬರುವ ವೇಳೆ ಅತಿವೃಷ್ಟಿಯಾಗಿಯೂ ನಷ್ಟವಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯಗಳಿಗೆ ಇರಲಿ ಅವಕಾಶ
ದೇಶಾದ್ಯಂತ ಶೇ.10 ರಷ್ಟು ಮಳೆ ಕೊರತೆ ಆಗಿದೆ ಎಂಬುದನ್ನು ಹವಾಮಾನ ಇಲಾಖೆಯೇ ಹೇಳಿದೆ. ದೇಶದಲ್ಲೂ ಬರಗಾಲದ ಛಾಯೆ ಇದೆ. ಆದರೆ, ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಶೇ.60 ರಷ್ಟು ಮಳೆ ಕೊರತೆಯಾಗಿದ್ದರಷ್ಟೇ ಬರಗಾಲ ಎಂದು ಘೋಷಿಸಲು ರಾಜ್ಯಗಳಿಗೆ ಅವಕಾಶ ಇದೆ. ಹೀಗಾಗಿ ಶೇ.20 ರಿಂದ ಶೇ.59 ರಷ್ಟು ಮಳೆ ಕೊರತೆಯಾದರೂ ಬರಗಾಲ ಎಂದು ಘೋಷಿಸಲು ಮಾರ್ಗಸೂಚಿಗೆ ಅಗತ್ಯ ತಿದ್ದುಪಡಿ ಮಾಡಬೇಕು.

ಮರುವ್ಯಾಖ್ಯಾನ ಅಗತ್ಯ
ಎಲ್ಲೆಡೆಯೂ ಕೃಷಿಯ ಮೇಲೆ ಒಣಹವೆಯ ಪರಿಣಾಮ ಒಂದೇ ರೀತಿ ಇರಬೇಕು ಎಂಬುದನ್ನು ಮಾರ್ಗಸೂಚಿಯು ಒತ್ತಿ ಹೇಳುತ್ತದೆ. ಸತತ ಮೂರರಿಂದ ನಾಲ್ಕು ವಾರಗಳ ಕಾಲ ಒಣಹವೆ ಇರಬೇಕು ಎಂದಿದೆ. ಆದರೆ, ಮಣ್ಣು, ಬೆಳೆ, ಹವಾಗುಣ ಒಂದೇ ರೀತಿ ಇರಲು ಸಾಧ್ಯವಿಲ್ಲ. ಬೆಳವಣಿಗೆ ಹೊಂದುವ ವೇಳೆಗೆ ಸತತ ಎರಡು ವಾರ ಒಣಹವೆ ಇದ್ದರೂ ಬೆಳೆಯನ್ನು ಕುಂಠಿತಗೊಳಿಸುತ್ತದೆ. ಹೀಗಾಗಿ ಎರಡು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಒಣಹವೆ ಇದ್ದರೂ ಬರಗಾಲ ಘೋಷಿಸಲು ಅನುಮತಿಸುವಂತೆ ಮಾರ್ಗಸೂಚಿ ಪರಿಷ್ಕರಿಸಬೇಕು. ಸತತ ಮೂರ್‍ನಾಲ್ಕು ವಾರ ಒಣಹವೆ ಇರಬೇಕು ಎಂಬುದಷ್ಟೆ ಅಲ್ಲದೆ, ಮುಂದಿನ ದಿನಗಳಲ್ಲಿ ಬಿತ್ತನೆ ಕಾರ್ಯ ನಡೆಯುವ ಲಕ್ಷಣಗಳಿಲ್ಲ ಎಂಬುದನ್ನೂ ರಾಜ್ಯ ಸರ್ಕಾರ ಆಖೈರು ಮಾಡಬೇಕೆಂದೂ ಮಾರ್ಗಸೂಚಿ ಹೇಳುತ್ತದೆ. ಒಂದೆರಡು ಹನಿ ಮಳೆ ಬೀಳುತ್ತಿದ್ದಂತೆ ರೈತರು ಆಸೆಯಿಂದ ಬಿತ್ತನೆ ಮಾಡುತ್ತಾರೆ. ಆ ರೀತಿಯಾದರೆ ಇನ್‌ಪುಟ್‌ ಸಬ್ಸಿಡಿಗೆ ಪರಿಗಣಿಸುವುದಿಲ್ಲ ಎನ್ನುವುದು ಸರಿಯಲ್ಲ.

ತಪ್ಪು ಅಳತೆ
ಹವಾಮಾನ ಹಾಗೂ ಕೃಷಿ ಆಧಾರಿತ ಬರಗಾಲವಿದ್ದರೂ ಅಂತರ್ಜಲವನ್ನೂ ಬರಗಾಲಕ್ಕೆ ಸೂಚ್ಯಂಕ ಎಂದು ಪರಿಗಣಿಸುವುದು ತಪ್ಪು. ಅಂತರ್ಜಲದ ಮಟ್ಟವನ್ನು ಉಪಗ್ರಹ ಆಧಾರಿತವಾಗಿ ಕಂಡುಕೊಳ್ಳುತ್ತಿರುವುದರಿಂದ ಈ ವ್ಯವಸ್ಥೆ ತಪ್ಪಾಗಿರಲೂಬಹುದು. ಅದೇ ರೀತಿ ಬೆಳೆನಷ್ಟದ ಸಮೀಕ್ಷೆಯನ್ನು ಉಪಗ್ರಹ ಆಧಾರಿತವಾಗಿ ಮಾಡುವುದರಿಂದ ಬಿತ್ತನೆಯನ್ನೇ ಮಾಡದ ಜಮೀನಿನಲ್ಲಿರುವ ಕಳೆಗಿಡಗಳನ್ನೂ ಬೆಳೆ ಎಂದು ತಪ್ಪಾಗಿ ಸೆರೆಹಿಡಿಯುವ ಅಪಾಯವಿದೆ. ಒಣಹವೆಯ ರೀತಿಯಲ್ಲಿ ಮಣ್ಣಿನ ತೇವಾಂಶವನ್ನೂ ಪರಿಗಣಿಸುವುದು ಸರಿಯಲ್ಲ. ಬಿತ್ತನೆ ಮಾಡಿರುವ ಬೆಳೆಯ ಪೈಕಿ ಶೇ.50 ಕ್ಕಿಂತ ಹೆಚ್ಚು ನಷ್ಟವಾಗಿರಬೇಕು. ಇಲ್ಲದಿದ್ದರೆ ಇನ್‌ಪುಟ್‌ ಸಬ್ಸಿಡಿ ಸಿಗುವುದಿಲ್ಲ. ಇದನ್ನು ಬದಲಾಯಿಸಿ, ಶೇ.33 ಕ್ಕಿಂತ ಹೆಚ್ಚು ಬೆಳೆ ನಷ್ಟವಾದರೂ ನೀಡುವಂತಾಗಬೇಕು.

ನಿಯಮ ಹೇಗಿದೆ? ರಾಜ್ಯದ ಬೇಡಿಕೆ ಏನು?
ಕನಿಷ್ಠ ಶೇ.60 ರಷ್ಟು ಮಳೆ ಕೊರತೆ ಇರಬೇಕು ಶೇ.20-59 ರಷ್ಟು ಕೊರತೆಯಾದರೂ ಸಾಕು
ಸತತ 3-4 ವಾರ ಒಣಹವೆ ಇರಬೇಕು 2 ವಾರ ಒಣಹವೆ ಇದ್ದರೂ ಬರ ಘೋಷಿಸಬೇಕು
ಬಿತ್ತಿದ ಬೆಳೆಯ ಶೇ.50 ಕ್ಕಿಂತ ಹೆಚ್ಚು ನಷ್ಟವಾಗಿರಬೇಕು ಶೇ.33 ಕ್ಕಿಂತ ಹೆಚ್ಚು ಬೆಳೆನಷ್ಟವಾದರೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು
ಬಿತ್ತನೆ ಕಾರ್ಯ ನಡೆಯದ ಬಗ್ಗೆ ರಾಜ್ಯದ ಪ್ರಮಾಣೀಕರಣ ಅಗತ್ಯ ಬಿತ್ತನೆಗಿಂತ ಮಳೆ ಕೊರತೆಯಿಂದ ಬೆಳೆ ನಷ್ಟವಾದರೂ ಪರಿಗಣಿಸಬೇಕು

ನಿಖರ ಮಾಪನ ಮತ್ತು ಸಂಪನ್ಮೂಲಗಳ ಸಮರ್ಪಕ ಹಂಚಿಕೆಗಾಗಿಯೇ ಮಾರ್ಗಸೂಚಿ ಕಠಿಣವಾಗಿದೆ ಎಂಬುದು ಅರ್ಥವಾಗುತ್ತದೆ. ಆದರೆ, ರಾಜ್ಯ ಮತ್ತು ವಲಯಗಳು ತಮ್ಮದೇ ಆದ ಸವಾಲು ಹಾಗೂ ಅಗತ್ಯಗಳನ್ನು ಹೊಂದಿರುತ್ತವೆ ಎಂಬುದನ್ನು ಗುರುತಿಸಬೇಕು. ಬರಗಾಲ ಘೋಷಣೆಗೆ ಸದ್ಯದ ಪರಿಸ್ಥಿತಿಯಲ್ಲಿ ಮಾರ್ಗಸೂಚಿಗಳನ್ನು ಸಡಿಲಗೊಳಿಸುವ ಅನಿವಾರ್ಯತೆಯೂ ಇದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಬರ ನಿರ್ವಹಣೆ ಕೈಪಿಡಿಯಲ್ಲಿನ ಮಾನದಂಡಗಳನ್ನು ಪರಿಷ್ಕರಿಸಬೇಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ

 

ಟಾಪ್ ನ್ಯೂಸ್

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.