ಮೂರು ದಶಕ ಕಳೆದರೂ ಏತನೀರಾವರಿ ಯೋಜನೆಯಲ್ಲಿ ಹನಿ ನೀರು ಹರಿದಿಲ್ಲ
Team Udayavani, Sep 12, 2020, 11:36 AM IST
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿ ಏತನೀರಾವರಿ ಯೋಜನೆ ಅನುಷ್ಠಾನಗೊಂಡು ಮೂರು ದಶಕವಾದರೂ, ನೂರಾರು ಕೋಟಿ ರೂ. ಖರ್ಚು ಮಾಡಿದ್ರೂ ಕಾಮಗಾರಿ ಮುಗಿದಿಲ್ಲ. ಒಂದು ಹನಿ ನೀರೂ ಹರಿದಿಲ್ಲ.
ಬಹುನಿರೀಕ್ಷಿತ ಕಾಚೇನಹಳ್ಳಿ ಏತನೀರಾವರಿ ಯೋಜನೆಗೆ 1991 ಡಿ.27ರಂದು ಅಂದಿನ ಕಾಂಗ್ರೆಸ್ ಸರ್ಕಾರ ಕೇವಲ 8.9 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಕಾಮಗಾರಿಗೆ ಚಾಲನೆ ನೀಡಿತ್ತು. ದಂಡಿಗನಹಳ್ಳಿ, ಶಾಂತಿಗ್ರಾಮ, ದುದ್ದು, ಗಂಡಸಿ ಹೋಬಳಿಯ 12,600 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮೂರು ಹಂತದಲ್ಲಿ ನೀರು ಹರಿಸುವ ಈ ಯೋಜನೆಕುಂಟುತ್ತಾ ಸಾಗಿದೆ.
ಈಗಾಗಲೇ 2002ರ ಅ.19 ಮತ್ತು 2007ರ ಜೂ.30 ರಂದು 2ನೇ ಬಾರಿಗೆ 165 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿ ಮಾಡಿ ಅನುಮೋದನೆ ನೀಡಿದ್ದು, ಮೊದಲನೇ ಹಂತಕ್ಕೆ 57.10 ಕೋಟಿ ರೂ. ಮತ್ತು 2ನೇ ಹಂತಕ್ಕೆ 47.38 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿತ್ತು. ಇದನ್ನು ಮೀರಿ ಕಾಮಗಾರಿಗೆ ಹಣ ವೆಚ್ಚ ಮಾಡಿದ್ದರೂ ಕಾಮಗಾರಿ ಮುಗಿಯುವ ಲಕ್ಷಣಗಳುಕಾಣುತ್ತಿಲ್ಲ.
ಕೆರೆಗೆ ನೀರು ಹರಿಯುತ್ತಿಲ್ಲ: 29 ವರ್ಷಗಳಿಂದ ನಡೆಯುತ್ತಿರುವ ಈ ಕಾಮಗಾರಿ 8.9 ಕೋಟಿ ರೂ.ನೊಂದಿಗೆ ಆರಂಭವಾಗಿ, ಈವರೆಗೂ 101 ಕೋಟಿ ರೂ. ಖರ್ಚು ಆಗಿದೆ. ಆದರೂ, ಕಾಮಗಾರಿ ಮುಗಿದಿಲ್ಲ. ಅಂದಾಜಿನ ಪ್ರಕಾರ ಇನ್ನೂ 30 ಕೋಟಿ ರೂ. ಅಗತ್ಯವಿದೆ. ಹೀಗೆ ಯೋಜನೆಗೆ ಸರ್ಕಾರದಿಂದ ಹಣ ಹರಿಯುತ್ತಿದೆಯೇ ಹೊರತು, ಕೆರೆ ಹಾಗೂ ಕೃಷಿ ಭೂಮಿಗೆ ಒಂದು ಹನಿ ನೀರು ಹರಿದಿಲ್ಲ.
ತಡವಾಗಲು ಕಾರಣವೇನು?: ಯೋಜನೆ ಪ್ರಾರಂಭವಾದ ಅತ್ಯಾಧುನಿಕ ಯಂತ್ರಗಳು ಇಲ್ಲದೆ ಇರಬಹುದು. ಆದರೆ, ಈಗ ದಿನಕ್ಕೆ ಕಿ.ಮೀ. ಗಟ್ಟಲೆ ನಾಲೆ ತೋಡಬಹುದಾದ ಯಂತ್ರಗಳು ಬಂದಿವೆ. ಹಗಲು ರಾತ್ರಿಕೆಲಸ ಮಾಡುವಕಾರ್ಮಿಕರು ಇದ್ದಾರೆ. ಆದರೂ, ಈ ಯೋಜನೆ ವಿಳಂಬವಾಗುತ್ತಿರುವುದು ಏಕೆ ಎಂಬ ಪ್ರಶ್ನೆ ರೈತರನ್ನುಕಾಡುತ್ತಿದೆ.
ಮೊದಲ ಹಂತ ಮುಕ್ತಾಯ: ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಹೊಳೆನರಸೀಪುರ ತಾಲೂಕಿನ ಎರಡು, ಚನ್ನರಾಯಪಟ್ಟಣ ತಾಲೂಕಿನ 7 ಗ್ರಾಮದ ಕೆರೆಗಳಿಗೆ ನೀರು ಹರಿಯುತ್ತಿದೆ. 2ನೇ ಹಂತ ಪೂರ್ಣಗೊಂಡರೆಹಾಸನ ತಾಲೂಕಿನಎರಡು ಗ್ರಾಮ, ಹೊಳೆನರಸೀಪುರ ತಾಲೂಕಿನ9, ಚ®ರಾ° ಯಪಟ್ಟಣದ 17 ಗ್ರಾಮಗಳಿಗೆ ನೀರು ಹರಿಯಲಿದೆ. ಆದರೆ, ಕಾಮಗಾರಿ ಮುಕ್ತಾಯ ಆಗಲು ಇನ್ನೂ ಎಷ್ಟು ವರ್ಷ ಬೇಕು ಎನ್ನುವುದನ್ನು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾಹಿತಿ ನೀಡುತ್ತಿಲ್ಲ.
ಕೆಲವು ಕಡೆ ಭೂ ಸ್ವಾಧೀನ ಆಗಿಲ್ಲ: ಕಾಮಗಾರಿ ಪ್ರಾರಂಭವಾಗಿ 29 ವರ್ಷ ಕಳೆದರೂ ಕೆಲವು ಕಡೆ ಇನ್ನೂ ಭೂ ಸ್ವಾಧೀನ ಆಗಿಲ್ಲ, ದಂಡಿಗನಹಳ್ಳಿ, ಮುರಾರನಹಳ್ಳಿ, ತೆಂಕನಹಳ್ಳಿ, ಅವೇರಹಳ್ಳಿಕೊಪ್ಪಲು, ತಿಮ್ಮಲಾಪುರ, ದೊತನೂರು ಕಾವಲು ಗ್ರಾಮಗಳಲ್ಲಿ 280 ಮೀಟರ್‌ಕಾಮಗಾರಿಆಗಬೇಕಿದೆ. 14.17 ಎಕರೆ ಭೂಮಿ ಸ್ವಾಧೀನಕ್ಕೆ ಪರಿಹಾರ ನೀಡಬೇಕಿದೆ. ಸದ್ಯ 18.52 ಕೋಟಿ ರೂ. ಹಣ ಮಾತ್ರ ಯೋಜನೆಗೆ ಇದೆ. ಈ ಹಣವನ್ನು ಭೂಸ್ವಾಧೀನಕ್ಕೆ ಬಳಸಿದರೆ ಕಾಮಗಾರಿ ನಿಲ್ಲಿಸಬೇಕಾಗುತ್ತದೆ, ಕಾಮಗಾರಿ ಮಾಡಿದರೆ ಭೂ ಸ್ವಾಧೀನ ಆಗದ ಕಡೆಯಲ್ಲಿ ನಾಲೆ ಮಾಡದೆ ನೀರು ಮುಂದಕ್ಕೆ ಹರಿಯುವುದಿಲ್ಲ.
3ನೇ ಹಂತಕ್ಕೆ ನೂರು ಕೋಟಿ ರೂ.: ಯೋಜನೆಯ ಎರಡನೇ ಹಂತಕ್ಕೆ ಇಷ್ಟೊಂದು ಅಡೆತಡೆಗಳು ಇರುವಾಗಲೇ ಮೂರನೇ ಹಂತಕ್ಕೆ ನಾಲಾ ವ್ಯಾಪ್ತಿಯ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಪಟ್ಟು ಹಿಡಿದು ಮೈತ್ರಿ ಸರ್ಕಾರದ ವೇಳೆ ಅಂದಿನ ಮುಖ್ಯಮಂತ್ರಿ ಕರೆಯಿಸಿ 3ನೇ ಹಂತಕ್ಕೆ ಭೂಮಿ ಪೂಜೆ ನೆರವೇರಿಸಿ, ಬಜೆಟ್‌ನಲ್ಲಿ 100ಕೋಟಿ ರೂ. ಹಣ ಬಿಡುಗಡೆ ಮಾಡಿಸಿದ್ದಾರೆ. ಈ ಯೋಜನೆ ಯಾವಾಗ ಮುಕ್ತಾಯವಾಗಲಿದೆ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿದೆ.
– ಶಾಮಸುಂದರ್ ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.