ಹುತಾತ್ಮ ಯೋಧರಿಗೆ ಅಕ್ಷರ ನಮನ ಅಮರ್‌ ರಹೇ


Team Udayavani, Jun 20, 2020, 5:45 AM IST

ಹುತಾತ್ಮ ಯೋಧರಿಗೆ ಅಕ್ಷರ ನಮನ ಅಮರ್‌ ರಹೇ

ಗಾಲ್ವಾನ್‌ ಕಣಿವೆಯಲ್ಲಿ ವೀರಸ್ವರ್ಗ ಪಡೆದ ಗುರುದಾಸ್‌ ಪುರದ ಹೆಮ್ಮೆಯ ಸೈನಿಕ ನೈಬ್‌ ಸುಬೇದಾರ್‌ ಸತ್ನಾಮ್‌ ಸಿಂಗ್‌ ಅವರಿಗೆ ಕುಟುಂಬಸ್ಥರಿಂದ ಅಂತಿಮ ನಮನ.

ಭಾರತಾಂಬೆಯ ರಕ್ಷಣೆಯ ಕಾರ್ಯದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಓದುಗರು ಉದಯವಾಣಿ ಕರೆಗೆ ಸ್ಪಂದಿಸಿ ಕಳುಹಿಸಿದ ಆಯ್ದ ನುಡಿನಮನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ರಾಷ್ಟ್ರಸಂರಕ್ಷಣೆಯ ಯಜ್ಞದಲ್ಲಿ ಸಮಿಧೆ ಯಾಗಿ ತಮ್ಮ ದೇಹವನ್ನು ಅರ್ಪಿಸಿರುವ ಭಾರತಾಂಬೆಯ ಧೀರ ಸೈನಿಕರಿಗೆ ಶತಕೋಟಿ ನಮನಗಳು ಸಮರ್ಪಿತ. ಜೈ ಜವಾನ್‌.. ಜೈ ಭಾರತ್‌..
-ನಾಗೇಶ್‌, ಮಣಿಪಾಲ

ತಮ್ಮ ಬಲಿದಾನ ಎಂದೆಂದಿಗೂ ವ್ಯರ್ಥ ವಾಗದು. ತಾಯ್ನಾಡ ರಕ್ಷಣೆಗೆ ಮುನ್ನುಗ್ಗಿ ವೈರಿಗಳನ್ನು ಸದೆಬಡಿದು ವೀರ ಸ್ವರ್ಗವನ್ನೇರಿದ ತಮಗಿದೋ ದೇಶಭಕ್ತ ಭಾರತೀಯರ ಹೃದಯಾಂತರಾಳದ ಶ್ರದ್ಧಾಂಜಲಿ.
-ಶಿವಕುಮಾರ್‌, ಅಂಬಲಪಾಡಿ

ದೇಶಕ್ಕಾಗಿ ಪ್ರಾಣತೆತ್ತ ಭಾರತಾಂಬೆಯ ಹೆಮ್ಮೆಯ ಪುತ್ರರು ನೀವು. ಈ ರಾಕ್ಷಸರ ಅಟ್ಟಹಾಸವನ್ನು ಸದೆಬಡಿಯಲು ಮತ್ತೆ ಹುಟ್ಟಿ ಬನ್ನಿ. ವೀರ ಸೈನಿಕರೇ ನಿಮಗಿದೋ ಶತಕೋಟಿ ನಮನಗಳು.
-ವಿನೋದ ಪ್ರಕಾಶ್‌, ಉಡುಪಿ

ಭಾರತಾಂಬೆಯ ಗಡಿ ರಕ್ಷಣೆಯಲ್ಲಿ ತೊಡಗಿದ್ದಾಗ ಕುತಂತ್ರಿ ಚೀನಿ ನರ- ರಾಕ್ಷಸರ ಅಟ್ಟಹಾಸಕ್ಕೆ ಬಲಿಯಾಗಿ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಸೈನಿಕರಿಗೆ ಭಾವಪೂರ್ಣ ನಮನಗಳು.
-ಅರುಣ್‌ ಶೆಟ್ಟಿ, ಉಡುಪಿ

ಪ್ರತಿಗಳಿಗೆಯೂ ಆತ್ಮಾರ್ಪಣೆಯಿಂದ ತಾಯ್ನಾಡಿನ ರಕ್ಷಣೆಗೆ ನಿಂತು, ಅಪ್ರತಿಮ ಧೀರರಾಗಿ ಭರತ ಭೂಮಿಗಾಗಿ ಹುತಾತ್ಮರಾದ ಸೈನಿಕರೇ ನಿಮಗೆ ನೀವೇ ಸಾಟಿ. ನಿಮಗಿದೋ ನನ್ನ ಅಶ್ರುತರ್ಪಣೆ.
-ಗೌತಮ್‌ ಪ್ರಭು, ಕಾರ್ಕಳ

ದೇಶಕ್ಕಾಗಿ ಪ್ರಾಣ ತೆತ್ತ ಯೋಧರಿಗೆ ದೇವರು ಚಿರಶಾಂತಿ ನೀಡಲಿ. ಚೀನಕ್ಕೆ ಬುದ್ದಿ ಕಲಿಸೋಣ. ಎಲ್ಲರೂ ಒಂದಾಗಿ ಚೀನ ವಸ್ತುಗಳನ್ನು ಬಹಿಷ್ಕರಿಸೋಣ. ಚೀನವನ್ನು ಆರ್ಥಿಕವಾಗಿ ಹಿಮ್ಮೆಟ್ಟಿಸೋಣ .
-ಸುಶ್ಮಿತಾ ಕೆ., ಕುಂದಾಪುರ

ಭಾರತದ ಗಡಿ ಸಂಘರ್ಷವನ್ನು ಯುದ್ಧ ವನ್ನಾಗಿ ಪರಿವರ್ತಿಸಲು ನಮಗೆ ಮನಸ್ಸಿಲ್ಲ. ಎಲ್ಲಕ್ಕಿಂತಲೂ ಮೊದಲು ಮತ್ತು ಸೈನಿಕರ ಪ್ರಾಣ ಅಮೂಲ್ಯ. ಜೈ ಹಿಂದ್‌, ಜೈ ಭಾರತ್‌
-ದೇವಾನಂದ್‌, ಬ್ರಹ್ಮಾವರ

ಶತ್ರು ಸೇನೆಗೆ ಎದೆಯೊಡ್ಡಿ, ಹಸಿವು ನೀರಡಿಕೆಗಳ ಪರಿವೆಯಿಲ್ಲದೆ, ತಮ್ಮ ಕುಟುಂಬವನ್ನು ಮರೆತು, ನಮ್ಮನ್ನು ಕಾಯುತ್ತಿರುವ ವೀರ ಯೋಧರೇ, ನಿಮಗೆ ನಮ್ಮ ನಮನಗಳು.
-ಅನಿತಾ ಸಿಕ್ವೇರ, ಉಡುಪಿ

ತಮ್ಮ ಪ್ರಾಣದ ಬಗ್ಗೆ ಕಿಂಚಿತ್ತೂ ಚಿಂತಿಸದೆ ದೇಶಕ್ಕಾಗಿ ಜೀವವನ್ನು ಜೀವನವನ್ನು ಮುಡಿಪಾಗಿಟ್ಟು ಹೋರಾಡಿ ಹುತಾತ್ಮರಾಗಿರುವ ಭಾರತ ಮಾತೆಯ ಹೆಮ್ಮೆಯ ಪುತ್ರರಿಗೆ ನನ್ನದೊಂದು ಸಲಾಂ.
-ವಿದ್ಯಾಶ್ರೀ, ಹೊಂಬಾಡಿ

ಚೀನದ ಅಂತರ್‌ ಪಿಶಾಚಿಗಳನ್ನು ಹಿಡಿದಟ್ಟಿ ಹಿಮ್ಮೆಟ್ಟಿಸಿದ ಭಾರತದ ರಕ್ಷಣಾವಜ್ರ ಕವಚ ವೀರ ಯೋಧರ ಸಾಹಸ ಸಾಧನೆಗಳಿಗೆ ಸಾಟಿಯಿಲ್ಲ, ಹುತಾತ್ಮರು ಅಮರಾತ್ಮರೂ ಹೌದು!! ಜೈ ಜವಾನ್‌.
-ರಾಮಕೃಷ್ಣ ಚಡಗ, ಸಾಸ್ತಾನ

ಭಾರತ ಮಾತೆಯ ಕಾಯುವ ವೀರ ಪುತ್ರರ ಬಲಿದಾನ ವ್ಯರ್ಥ ವಾಗದಿರಲಿ, ಚೀನದ ನಾಶಕ್ಕೆ ಈ ಬಲಿದಾನ ನಾಂದಿಯಾಗಲಿ, ಜೈ ಹಿಂದ್‌
-ಹರೀಶ್‌ ಶೆಟ್ಟಿ, ನಡು ಅಲೆವೂರು

ಚೀನ ಸೈನಿಕರು ನಡೆಸಿದ ಅನಾಗರಿಕ ಹಲ್ಲೆಯಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ನನ್ನ ಮನದಾಳದ ನಮನ. ನಿಮ್ಮ ಅಗಲುವಿಕೆಯಿಂದ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಶತ್ರು ಸಂಹಾರಕ್ಕೆ ಮತ್ತೆ ತಾಯಿ ಭಾರತಾಂಬೆಯ ಮಡಿಲಿನಲ್ಲಿ ಹುಟ್ಟಿ ಬನ್ನಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
-ಶ್ರೀಲತಾ ನಾಯಕ್‌, ಗಂಗೊಳ್ಳಿ

ಚೀನದ ಅತಿಕ್ರಮಣದ ನಮ್ಮ ಯೋಧರು ವೀರಮರಣ ಹೊಂದಿದರು. ಅವರ ತ್ಯಾಗ ಸದಾ ಅನುಕರಣೀಯ,ಸರ್ವ ಶ್ರೇಷೃ. ಭಾರತೀಯರಾದ ನಾವೆಲ್ಲರೂ ವೀರಯೋಧರಿಗೆ ಸದಾ ನಮಿಸೋಣ.
-ಪ್ರವೀಣ್‌ ಕುಮಾರ್‌, ಶಿರ್ವ

ನಮ್ಮ ದೇಶದಲ್ಲಿ ನಾವು ಸ್ವತಂತ್ರವಾಗಿ, ಧೈರ್ಯವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶ ಕಾಯುವ ಯೋಧರು. ವೀರಯೋಧರೆ ನಿಮ್ಮನ್ನು ಹೆತ್ತ ಆ ತಾಯಿ ವೀರಮಾತೆಯೇ ದಿಟ.
-ಸುಜಾತಾ ಟಿ., ಉಡುಪಿ

ಈ ದಿನಗಳಲ್ಲಿ ಭಾರತೀಯ ರಾದ ನಾವೆಲ್ಲರು ಸ್ವತಂತ್ರ, ಸುಖ-ಶಾಂತಿಯಿಂದ ಇದ್ದೇ ವೆಂದರೆ ಅದಕ್ಕೆ ಕಾರಣ ನಮ್ಮ ದೇಶವನ್ನು ಕಾಯುವ ಸೈನಿಕರು. ಹುತಾತ್ಮರಾದ ವೀರ ಯೋಧರಿಗೆ ನಮ್ಮ ಸಲಾಂ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ತ್ಯಾಗ-ಬಲಿದಾನ ಮರೆಯಲಾಗದು. ಜೈ ಹಿಂದ್‌. ಜೈ ಭಾರತ್‌.
-ಬಿ.ಪಿ. ಧೀರಜ್‌ ಪೈ, ಬ್ರಹ್ಮಾವರ

ಭಾರತಮಾತೆಯ ವೀರ ಪುತ್ರರಾಗಿ ಜನಿಸಿ ದೇಶದ ರಕ್ಷಣೆಯಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ನಮ್ಮನ್ನು ರಕ್ಷಿಸುತ್ತಿರುವ ವೀರಯೋಧರೇ ನಿಮಗೊಂದು ಸಲಾಂ.
– ಕಿಶನ್‌ ಪಿ.ಎಂ., ಬಜಗೋಳಿ

ಕಿರಿ ವಯಸ್ಸಿನಲ್ಲಿ ದೇಶಭಕ್ತಿಯ ಕರೆಗೆ ಓಗೊಟ್ಟು, ಹೆತ್ತಬ್ಬೆಯ ಮಡಿಲ ಬಿಟ್ಟು, ಭಾರತಾಂಬೆಯ ಮಡಿಲ ಸೇರಿ ಜೀವನದ ಸಾರ್ಥಕ್ಯ ಪಡೆದ ಕೆಚ್ಚೆದೆಯ ವೀರರೇ ಈ ಪುಣ್ಯ ಭೂಮಿಯಲ್ಲಿ ಮತ್ತೆ ಹುಟ್ಟಿ ಬನ್ನಿ ಸಹೋದರರೇ.
-ಅನುಷಾ ಶಿವರಾಜ್‌, ಹೆರ್ಗ

ನಮ್ಮೆಲ್ಲರ ನಾಳೆಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗಿ ಹೋಗಿರುವ ನನ್ನ ಹೆಮ್ಮೆಯ ವೀರರಿಗೆ ಶತಕೋಟಿ ಪ್ರಣಾಮಗಳು. ವಂದೇ ಮಾತರಂ !
– ಅಲ್ತಾರು ಗೌತಮ ಹೆಗ್ಡೆ, ಬ್ರಹ್ಮಾವರ

ನಿಮ್ಮ ಈ ಬಲಿದಾನಕ್ಕೆ ಇಡೀ ದೇಶ ಕಂಬನಿ ಹರಿಸಿದೆ.ಹೆಮ್ಮೆಯ ಭಾರತಾಂಬೆಯ ರಕ್ಷಕರೆ ನಿಮಗಿದೋ ಹೃದಯಸ್ಪರ್ಶಿ ನಮನಗಳು.
-ಲೋಹಿತ್‌ ಕೆ., ಉಡುಪಿ

ವೀರಯೋಧರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ. ದೇಶಕ್ಕಾಗಿ ಹೋರಾಡುತ್ತಿರುವ ಕೆಚ್ಚೆದೆಯ ವೀರರಿಗೆ ಆತ್ಮಸ್ಥೆçರ್ಯ, ಶತ್ರುಗಳನ್ನು ಬಡಿದೋಡಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.
-ನಳಿನಿ ಪ್ರದೀಪ್‌ ರಾವ್‌, ನೀಲಾವರ

ದೇಶದ ಹೆಮ್ಮೆಯ ಪುತ್ರರೇ, ದೇಶ ರಕ್ಷಣೆಯ ವೀರ ಯೋಧರೇ, ನಿಮಗಾಗಿ ಮಿಡಿದಿದೆ ದೇಶದ ಮನ. ನಿಮಗಿದೋ ಅನಂತ ಅನಂತ ನಮನ.
-ಮಲ್ಲಿಕಾ ಶೆಟ್ಟಿ, ಅಸೋಡು

ಪ್ರತಿದಿನವೂ ನೆನಪಿಸಿಕೊಳ್ಳಬೇಕು..ಇದೇ ನಾವು ಅವರಿಗೆ ನೀಡುವ ಗೌರವ..ಅಂತ ವೀರ ಯೋಧರು ಮತ್ತೆ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸೋಣ.
-ಸುಮಂಗಳಾ,ಬಸ್ರೂರು

ಯೋಧರಿಗೆ ಹೃದಯಸ್ಪರ್ಶಿ ನಮನ. ಆಧಾರವಿಲ್ಲದ ಯೋಧರ ಕುಟುಂಬಗಳಿಗೆ ಸರಿಯಾದ ಹೊಣೆ ಯೊಂದಿಗೆ ಸಿಗಬೇಕು ಸೂಕ್ತ ಜೀವನ ರಕ್ಷಣೆ.
-ರಮೇಶ್‌ ಕೆ, ಕುಂದಾಪುರ

ನಮ್ಮ ಗಡಿ ಕಾಯುವ ದೇವರು ನಮಗಾಗಿ ಜೀವ ಬಿಟ್ಟಿ¨ªಾರೆ, ಪರಮಾತ್ಮ ಅವರ ಆತ್ಮಕ್ಕೆ ಚಿರಶಾಂತಿ ಒದಗಿಸಲಿ . ಅವರ ಕುಟುಂಬಕ್ಕೆ ಮತ್ತು ಭಾರತ ದೇಶಕ್ಕೆ ನ್ಯಾಯ ಸಿಗಲಿ.
-ವಿನಯ್‌ ಪ್ರಸಾದ್‌, ತೆಂಕ ಎರ್ಮಾಳು ಉಡುಪಿ

ನಾವು ನಾಳೆಯ ಕನಸನ್ನು ಹೊತ್ತು ಆರಾಮ ದಾಯಕವಾಗಿ ನಿದ್ರಿಸಲು, ತಮ್ಮ ಇಡೀ ಜೀವನದ ಸುಖದ ಕನಸನ್ನು ತ್ಯಜಿಸಿ ವೀರಗತಿ ಹೊಂದಿದ ಸೇನಾನಿಗಳಿಗೆ ಗೌರವಪೂರ್ವ ನಮನಗಳು.
-ನಿತಿನ್‌, ಗಂಗೊಳ್ಳಿ

ಪ್ರಪಂಚಕ್ಕೆ ಗುರುವಾಗಲು ಹೊರಟ ನೆಲದ ಸಂಸ್ಕೃತಿಯ ತವರು ತೊಟ್ಟಿಲಲ್ಲಿ ಪವಡಿಸಿ ಬಾಲ್ಯದ ಸಂಸ್ಕೃತಿ, ಸಂಸ್ಕಾರ ಗಳನ್ನು ಪಡೆದ ನೀವು, ಯೌವ್ವನದಲ್ಲಿ ದೇಶ ರಕ್ಷಣೆಗೆ ತೆರಳಿ ಹುತಾತ್ಮರಾದ ವೀರಯೋಧರೆ, ಮತ್ತೆ ಹುಟ್ಟಿ ಬನ್ನಿ.
-ದಮಯಂತಿ ಪೆರಾಜೆ, ಶಿರ್ವ

ನಿಮ್ಮೆಲ್ಲರನ್ನು ಕಳೆದುಕೊಂಡ ಬೇಸರ ಎಲ್ಲ ಭಾರತೀಯರಲ್ಲೂ ಇದೆ ಆದರೆ ನೀವು ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನಕ್ಕೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ. ಅಚ್ಚಳಿಯಾಗಿ ಉಳಿದಿದೆ.
-ರೋಶ್ನಿ, ಉಡುಪಿ

ರಾಷ್ಟ್ರ ರಕ್ಷಣೆಯ ಹೊಣೆ ಹೊತ್ತು. ತಮ್ಮ ಪ್ರಾಣದ ಹಂಗು ತೊರೆದು ತಮ್ಮವರಿಂದ ದೂರವಾಗಿ, ನಮ್ಮನ್ನೆಲ್ಲಾ ಕಾಪಾಡುವ ಯೋಧರಿಗೆ ನಮನಗಳು.
-ಸಂಜನಾ, ಅರೂರು

ನಾನು ವಾಪಸ್‌ ಬರ್ತೀನೋ ಇಲ್ವೋ ಅನ್ನೋ ಗ್ಯಾರಂಟಿ ಇಲ್ಲದೆ, ಸಾವಿನ ಎದುರು ನಿಂತು ಗಂಡೆದೆಯ ಗುಂಡಿಗೆ ತೋರೋ ವೀರ ಯೋಧರೇ ಪ್ರಥಮ ದೇಶಭಕ್ತರು.
-ಕೀರ್ತಿಪ್ರಸಾದ್‌ ಕೂರಾಡಿ, ಉಡುಪಿ

ನಿಮ್ಮ ವೀರ ಮರಣವನ್ನಾದರು ನೋಡಿ ಕಷ್ಟಗಳಿಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಕಡಿಮೆಯಾಗಲಿ. ನಿಮ್ಮನ್ನು ಅನುಸರಿಸಿ ಸೈನ್ಯಕ್ಕೆ ಸೇರುವವರ ಸಂಖ್ಯೆ ಅಧಿಕವಾಗಲಿ. ಓ ವೀರ ಯೋಧರೆ ನಿಮಗಿದೊ ನಮ್ಮ ಭಾವಪೂರ್ಣ ನಮನ.
-ರವೀಂದ್ರ ಶೆಟ್ಟಿಗಾರ್‌, ಕಾಳಾವರ

ದೇಶದ ರಕ್ಷಣೆಗಾಗಿ ತನ್ನ ಪ್ರಾಣವನ್ನು ಮುಡಿಪಾಗಿರಿಸಿ ಕೆಚ್ಚೆದೆಯಿಂದ ಹೋರಾಡುವ ವೀರ ಕಲಿಗಳಿಗೆ ಅನಂತಾನಂತ ವಂದನೆಗಳು.
-ಸಂಪತ್‌ ಕುಮಾರ್‌, ಕುತ್ಯಾರು

ನಮ್ಮ ವೀರ ಸೈನಿಕರ ಕೀರ್ತಿ ಅಜರಾಮರ ವಾಗಲಿ. ನಿರಂಕುಶ ಚೀನಕ್ಕೆ ತಕ್ಕ ಶಾಸ್ತಿ ಮಾಡಬೇಕಿದೆ. ಸೈನಿಕರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ.
-ಯುವಿಆರ್‌ ಮಲ್ಯ,
ಹಯಗ್ರೀವ ನಗರ

ತಮ್ಮವರನ್ನು ತೊರೆದು ಈ ಮಣ್ಣಿನ ರಕ್ಷಣೆಗಾಗಿ ಹಗಲಿರುಳೆನ್ನದೆ ದುಡಿದು, ವೈರಿ ಪಡೆಯನ್ನು ಹಿಮ್ಮೆಟ್ಟಿಸಿ ವೀರ ಸ್ವರ್ಗ ಸೇರಿದ ಭಾರತಾಂಬೆಯ ವರಪುತ್ರರಿಗಿದೋ ನಮ್ಮ ಭಾವಪೂರ್ಣ ವಂದನೆ.
-ಅಮೃತಾ ಸಂದೀಪ್‌ , ಹಾರಾಡಿ

ದೇಶ ರಕ್ಷಣೆಗಾಗಿ ನೆತ್ತರನ್ನು ಹರಿಸಿ ಬಲಿದಾನಗೈದ ವೀರ ಯೋಧರ ತ್ಯಾಗಕ್ಕೆ ಗೌರವಪೂರ್ವಕ ನಮನಗಳು . ನಿಮ್ಮ ತ್ಯಾಗ ಅನುಪಮ. ಎಲ್ಲ ವೀರ ಮಾತೆಯರಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ .
-ಗೀತಾ ಪ್ರಸಾದ್‌, ಅಂಬಲಪಾಡಿ

ಯೋಧರ ಮೇಲೆ ಚೀನ ಸೇನೆಯು ಕಾಲು ಕೆರೆದು ಮಾಡಿದ ಆಕ್ರಮಣ ಪೈಶಾಚಿಕವೂ ಹೌದು, ಹೇಡಿತನವೂ ಹೌದು. ಮೋದಿಜಿ ಭರವಸೆಯಿತ್ತಂತೆ ಈ ಬಲಿದಾನ ವ್ಯರ್ಥವಾಗದಿರಲಿ.
-ವಿಘ್ನೇಶ್ ಐತಾಳ್‌, ಮಣಿಪಾಲ

ತಮ್ಮ ಸುಖ ಸಂತೋಷವನ್ನು ದೇಶದ ಗಡಿಯಲಿ ಕಂಡು ಕೊಳ್ಳುವರು. ನಮ್ಮ ದೇಶಕ್ಕಾಗಿ ಶತೃಗಳನು ಸಂಹರಿಸಿ. ಪ್ರಾಣ ಮುಡಿಪಿಟ್ಟಿರುವ, ಅಚ್ಚಳಿಯದೆ ಉಳಿದ ವೀರ ಸೈನಿಕರಿಗೆ ನಮನಗಳು.
-ರತನ್‌ ಕುಮಾರ್‌, ಮಂಜೇಶ್ವರ

ಯೋಧ ತಮ್ಮ ಒಡ ಹುಟ್ಟಿದವರನ್ನೆಲ್ಲ ಬಿಟ್ಟು ಪ್ರಾಣದ ಹಂಗು ತೊರೆದು ನಮ್ಮಂತ ಕೊಟ್ಯಾಂತರ ಜನರ ರಕ್ಷಣೆಗೆ ಗಡಿ ಕಾಯಲು ನಿಂತು ಹುತಾತ್ಮನಾಗುತ್ತಿದ್ದಾನೆ. ಇವರ ತ್ಯಾಗ ಬಲಿದಾನಗಳಿಂದ ದೇಶ ಸುಭದ್ರವಾಗಿದೆ.
-ರವಿರಾಜ್‌, ಬೈಂದೂರು

ಕಾಣದ ದೇವರು ಕಾಯುತ್ತಾನೋ ಇಲ್ಲವೋ ತಿಳಿದಿಲ್ಲ ಆದರೆ ಕಣ್ಣಿಗೆ ಕಾಣುವ, ಕಾಯುವ ದೇವರು ನೀವು. ಎಂದೆಂದೂ ಈ ದೇಶದ ನೆಲ,ಜಲ,ಇಡೀ ಸಂಸಾರವನ್ನೇ ತಮ್ಮವರಂತೆ ರಕ್ಷಿಸಿದ್ದೀರಿ.
-ಮಂಜುನಾಥ ಬಿ.ಜಿ., ಉಡುಪಿ

ದೇಶ ಎಂದಾಗ ಮೌನತಾಳದೆ, ಸೈನ್ಯ ಎಂದಾಗ ಹೆದರಿ ಹಿಂಜರಿಯದೆ, ಮಳೆ ಬಿಸಿಲಿಗೆ ತನು ಅಂಜದೆ, ನಮ್ಮೆಲ್ಲರ ನಗು ಸಂಭ್ರಮ ಕಾಯ್ದ ನಿಮಗೆ ಎನೆನ್ನಬೇಕು? ದೇವನೆಂದರೆ ತಪ್ಪಾದಿತೇ.
-ಶಿಲ್ಪಾ ಹೇರಂಜಾಲ್‌ , ಕುಂದಾಪುರ

ಜೀವಕಾಯುವ ನಮ್ಮುಸಿರುಗಳೇ
ಭಾವ ತುಂಬಿ ಏನೆಂದು ಬರೆಯಲಿ ನಮಗಾಗಿ ಉಸಿರೂ ನಿಲ್ಲಿಸಿದ ನಿಮ್ಮ ಬಗ್ಗೆ.ಸೂರ್ಯ ಚಂದ್ರರಂತೆ ನೀವುಗಳು ಸದಾ ನಮ್ಮ ಮನೆಯ ಮಕ್ಕಳು.
-ಚಂದ್ರನಾರಾಯಣ್‌,ಹೆರಂಜಾಲು

ಎಲ್ಲ ವೀರ ಸೇನಾನಿಗಳಿಗೆ ಕೋಟಿ ಪ್ರಣಾಮಗಳು. ನಮ್ಮೆಲ್ಲ ಕೋಟ್ಯಂತರ ಭಾರತೀಯರ ಹಾರೈಕೆ, ಪ್ರೀತಿಪೂರ್ವಕ ಅಕ್ಕರೆಯ ನುಡಿಗಳು ಅವರಿಗೆ ಇನ್ನಷ್ಟು ನೈತಿಕ ಸ್ಥೆçರ್ಯ ತುಂಬುವಂತಾಗಲಿ.
-ರಾಮ ದೇವಾಡಿಗ, ಹಟ್ಟಿಯಂಗಡಿ

ಸರ್ವ ಭಾವನಾತ್ಮಕ ಸಂಬಂಧ ಪರಿತ್ಯಾಗಿಗಳಾಗಿ ಸೇವೆ ಸಲ್ಲಿಸುವ ಯೋಧ ಮನಸ್ಥಿತಿ ಭಾವ ಜಗತ್ತಿನ ಅತಿಶ್ರೇಷ್ಠ ಮನಸ್ಥಿತಿ. ದೇಶ ರಕ್ಷಣೆಗಾಗಿ ಬಲಿದಾನಗೈದ ಯೋಧರೂಪದ ಮಹಾನ್‌ ಚೇತನಗಳು.
-ಮುಷ್ತಾಕ್‌ ಹೆನ್ನಾಬೈಲ್‌, ಸಿದ್ಧಾಪುರ

ಭಾರತ ಮಾತೆಯ ರಕ್ಷಣೆಗಾಗಿ ಜೀವ ತೆತ್ತ ನಮ್ಮ ಹೆಮ್ಮೆಯ ಯೋಧರಿಗೆ ನಮ್ಮ ಗೌರವ ಪೂರ್ಣ ನಮನಗಳು, ನೀವು ಗಡಿಯಲ್ಲಿ ನಮ್ಮನ್ನು ಕಾಯುವ ದೇವರುಗಳು ನಿಮ್ಮೊಂದಿಗೆ ನಾವಿದ್ದಿವೆ.
-ಭಾಸ್ಕರ್‌ ಪೂಜಾರಿ , ಕಟಪಾಡಿ

ಹುತಾತ್ಮ ಯೋಧರನ್ನು ನೆನೆದರೆ ಅತೀವ ನೋವುಂಟಾಗುತ್ತದೆ. ಯೋಧರ ಸಾವಿಗೆ ಪರೋಕ್ಷವಾಗಿ ನಾವೇ ಕಾರಣವಾಗಿದ್ದೇವೆ. ಸ್ವದೇಶಿ ವಸ್ತುಗಳಿಗೆ ಬೆಲೆಕೊಟ್ಟರೆ ಸ್ವಲ್ಪ ಪ್ರಯೋಜನವಾದೀತು.
-ನಾಗಶ್ರೀ ಭಟ್‌, ಜೋರಾಡಿ

ನಿಮ್ಮ ತ್ಯಾಗ ಬಲಿದಾನ ಅತ್ಯಮೂಲ್ಯ ಹಾಗೂ ನಿಮ್ಮ ತ್ಯಾಗ ಬಲಿದಾನಕ್ಕೆ ನಾವು ಚಿರಋಣಿಯಾಗಿರುತ್ತೇವೆ. ನಿಮ್ಮ ಬಲಿದಾನಕ್ಕೆ ಕಾರಣವಾದ ಚೀನಿಯರಿಗೆ ಪಾಠ ಕಲಿಸಲು ಅವರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸುತೇನೆ ಎಂದು ಹೆಳುವ ಮೂಲಕ ನಿಮ್ಮ ಬಲಿದಾನಕ್ಕೆ ನಮನಗಳನ್ನು ಸಲ್ಲಿಸುತ್ತೇನೆ.
-ಶಿವಪ್ರಸಾದ್‌, ಆತ್ರಾಡಿ

ಭಾರತ ಮಾತೆಯ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಡಿ ವೀರ ಮರಣ ಹೊಂದಿದ ನಮ್ಮ ದೇಶದ ಹೆಮ್ಮೆಯ ವೀರ ಯೋಧರೇ ನಿಮಗಿದೋ ಕೋಟಿ ಕೋಟಿ ನಮನಗಳು. ವಂದೆ ಮಾತರಂ.
-ನೀತಾ ಪೂಜಾರಿ, ಮಧ್ವ

ಅವರ ದೇಶಪ್ರೇಮ ನಮ್ಮ ಅಂತರಂಗ ದಾಳದಲ್ಲಿ ಅಜರಾಮರವಾಗಿರಲಿ. ತಾಯ್ನಾ ಡಿನ ಋಣ ತೀರಿಸಿದ , ಹುತಾತ್ಮ ಯೋಧರು ಈ ಮಣ್ಣಿನಲ್ಲಿ ಮತ್ತೂಮ್ಮೆ ಆವಿರ್ಭವಿಸಿ ಬರಲಿ ಅವರಿಗೊಂದು ಸಲಾಂ. ‰‰‰
-ಅನೀಶ್‌ ಬಿ., ಕಮಲಶಿಲೆ

ಚೀನದ ಹೇಡಿತನಕ್ಕೆ ವೀರತನದ ಉತ್ತರ ಕೊಟ್ಟ ಕೋಟ್ಯಾನುಕೋಟಿ ಪ್ರಜೆಗಳ ರಕ್ಷಣೆಗೆ ದೇವರಾಗಿ ಅವತರಿಸಿದ ನಿಮ್ಮ ಪ್ರಾಣ ರಕ್ಷಣೆ ಆ ದೇವರಿಗೂ ಮುಖ್ಯವೆನಿಸಲಿಲ್ಲವಲ್ಲಾ. ಮತ್ತೆ ಹುಟ್ಟಿ ಬನ್ನಿ ಯೋಧರೇ.
-ರಕ್ಷಿತ್‌ಮೇಲಾರಿಕಲ್‌,ಹೊಸೂರು

ಭಾರತಾಂಬೆಯ ಪುಣ್ಯಗರ್ಭದಿ,
ವೀರರಂದದಿ ಸೆಣಸಿ ಮಡಿದ. ಧೀರರಿಗೆ ನುಡಿನಮನ. ಪುಣ್ಯಚರಿತೆಯ ಕೆಚ್ಚೆದೆಯಲಿ ಕಾಯುತ, ಮೆರೆವನೇಕ ವೀರಯೋಧರಿಗೆ ಅಭಿಮಾನದ ನಮನ..
-ನಿರೀಕ್ಷಾ, ಹೆರಂಜಾಲ

ಕೈಯಲ್ಲಿ ಶಸ್ತ್ರ ಇದ್ದರೂ ರಾಜಕೀಯ ಒಪ್ಪಂದಕ್ಕೆ ಬದ್ಧರಾಗಿ ಕುತಂತ್ರಿ ಚೀನಿಯರ ಮೊಳೆಯುಕ್ತ ರಾಡ್‌ಗಳನ್ನು ಎದುರಿಸಿ ಹುತಾತ್ಮರಾದ ವೀರ ಯೋಧರಿಗೆ ಇದೋ ನಿಮ್ಮ ಪಾದ ಕಮಲಗಳಿಗೆ ಶ್ರಂದ್ಧಾಂಜಲಿ.
-ಧನ್ವಿತ್‌, ಕಲ್ಯಾಣಪುರ

ಧೂರ್ತ ಚೀನ ಕುತಂತ್ರದಿಂದ ನಿಮಗೆ ಹಿಂದಿನಿಂದ ಇರಿಯಿತು. ವೀರ ಯೋಧರೆ ನಿಮ್ಮ ಬಲಿದಾನ ವ್ಯರ್ಥವಾಗದು. ಸಮಸ್ತ ಭಾರತೀಯರು ನಿಮ್ಮ ಜತೆಗಿದ್ದಾರೆ. ನಿಮಗಿದೋ ಆಶ್ರುತರ್ಪಣ.
-ರಾಮಚಂದ್ರ ಆಚಾರ್ಯ,ಉಡುಪಿ

ಬಹಳ ಕಠಿನ ಮತ್ತು ಶಿಸ್ತು ಬದ್ಧ ಜೀವನ ಶೈಲಿಯನ್ನು ಹೊಂದಿ, ವಿಪರೀತ ವಾತಾವರಣದಲ್ಲಿಯೂ ದೇಶ ಕಾಯುವ ಕೆಲಸವನ್ನು ನಿರಂತರವಾಗಿ ಕಾಪಾಡುತ್ತಾ ಬಂದ ನಿಮ್ಮ ಬಲಿದಾನ ನಮಗೆ ಸ್ಫೂರ್ತಿ.
-ಶ್ರವ್ಯಾ, ಸಚ್ಚೇರಿಪೇಟೆ

ಭರತ ಖಂಡ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ತಮ್ಮ ಅಮೂಲ್ಯ ಜೀವನವನ್ನು ಧಾರೆ ಎರೆಯುವ ಧೀರ ಸೈನಿಕರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳು.
-ಸುಜಾತಾ, ಕುತ್ಯಾರು

ದೇಶಕ್ಕಾಗಿ ಮೃತ್ಯುವಿನೊಡನೆ ಸೆಣೆಸುವ, ಬಿಸಿಲು ಮಳೆಯೆನ್ನದೆ ಹಗಲಿರುಳು ಶ್ರಮಿಸುವ , ಬಲಿದಾನವೇ ಪರಮಧರ್ಮ ಎಂದಿರುವ ವೀರಯೋಧರನ್ನು ನಾವು ಹೃದಯದಲ್ಲಿಟ್ಟು ಪೂಜಿಸಬೇಕು.
-ಪ್ರಮೋದ್‌ ಭಾಗವತ್‌, ಉಡುಪಿ

ದೇಶಕ್ಕಾಗಿ ಪ್ರಾಣತೆತ್ತ ಭಾರತಾಂಬೆಯ ಹೆಮ್ಮೆಯ ಪುತ್ರರು ನೀವು. ಮತ್ತೆ ಹುಟ್ಟಿ ಬನ್ನಿ. ಈ ಮಣ್ಣಿನ ಋಣವನ್ನು ತೀರಿಸುವ ಕೆಚ್ಚೆದೆಯನ್ನು ಪಡೆದಿರುವ ವೀರ ಸೈನಿಕರೇ ನಿಮಗಿದೋ ಶತಕೋಟಿ ನಮನಗಳು.
-ವಿನೋದಾ ಪ್ರಕಾಶ್‌, ಉಡುಪಿ

ಭಾರತ ಮಾತೆಯ ಸೇವಕರು. ಪ್ರಜೆಗಳ ಪಾಲಿನ ದೇವರು ನಿಮಗೆ ನನ್ನ ಕೋಟಿ ನಮನ ಮರುಜನ್ಮವಿದ್ದರೆ ಮತ್ತೆ ಹುಟ್ಟಿ ಬನ್ನಿ. ಪ್ರಜೆಯ ನಿಮ್ಮ ದುಃಖವನ್ನು ತಡೆಯುವ ಶಕ್ತಿ ಭಗವಂತ ನಮಗೆ ಕರುಣಿಸಲಿ.
-ಪ್ರಸನ್ನ ಶೆಟ್ಟಿ , ಪಡುಕುಡೂರು

ಯೋಧರ ಬಲಿದಾನ ವ್ಯರ್ಥವಾಗು ವುದಿಲ್ಲ ಎಂಬ ಪ್ರಧಾನಿಯವರ ಭರವಸೆಯ ನುಡಿ ಗಮನೀಯ. ಅಮರ ಯೋಧರೇ ನಿಮ್ಮ ತ್ಯಾಗ ಯುವ ದೇಶಪ್ರೇಮಿಗಳೆಲ್ಲರಿಗೂ ಸದಾ ಆದರ್ಶ ಮತ್ತು ಸ್ಫೂರ್ತಿದಾಯಕ.
-ದೀಪಾ ಭಂಡಾಕರ್‌, ನಿಟ್ಟೂರು

ಯೋಧರ ಎಂದಿಗೂ ಅಜರಾಮರ. ಮಡಿದ ಯೋಧರು ಮತ್ತೆ ಭಾರತಾಂಬೆಯ ಮಡಿಲಿಗೆ ಬರುವಂತಾಗಲಿ. ಮನೆಯವರು ನೋವಿನಲ್ಲೂ ಹೆಮ್ಮೆ ಪಡುವಂತಾಗಲಿ. ದೇಶೀಯ ವಸ್ತು ಉಪಯೋಗಿಸೋಣ,
-ಲಕ್ಷ್ಮೀ ಒಎ, ಕುಂದಾಪುರ

ಭಾರತ ಮಾತೆಯ ರಕ್ಷಣೆಗೆ ನಿಂತ ನಿಸ್ವಾರ್ಥ, ನಿಶ್ಕಲ್ಮಶ, ಉತ್ಸಾಹಾದ ಮೂರ್ತಿ ಗಳಾದ ನಿಮ್ಮ ಧೈರ್ಯ, ಸಾಹಸ, ಸ್ಥೆçರ್ಯ ವರ್ಣನೆಗೆ ನಿಲುಕದ್ದು. ನೀವು ನಮ್ಮ ನಿಜವಾದ ಹೀರೋಗಳು.
-ರಾಘವೇಂದ್ರ, ಶಿರೂರು

ದೇಶವೇ ದೇವರೆಂದು ಪೂಜಿಸಿ ಶತ್ರು ಎದೆಯೊಳು ನಡುಕ ಭರಿಸಿ ಸಿಡಿಯುವ ಸಿಡಿಗುಂಡಿಗೆ ಎಂಟೆದೆಯ ಗುಂಡಿಗೆಕೊಟ್ಟು ದೇಶಸೇವೆಯೇ ಈಶಸೇವೆ ಎಂದು ಪ್ರಾಣತ್ಯಾಗ ಮಾಡಿದ ನಿಮಗೆ ನಮನ.
-ಪ್ರಶಾಂತ್‌ ಪೂಜಾರಿ, ಪೆರ್ಡೂರು

ನಮಗಾಗಿ ಜೀವ ತೆತ್ತ ಯೋಧರಿಗೆ ನಮ್ಮ ಭಾವಪೂರ್ಣ ನಮನಗಳು. ತಮ್ಮ ದಿವ್ಯಾತ್ಮ ಸದಾ ನಮ್ಮೊಂದಿಗಿದೆ. ನಮ್ಮ ಕೃತಿಯ ಮೂಲಕ ನೊಂದ, ಬೆಂದ ಹೃದಯಗಳಿಗೆ ಸಾಂತ್ವನ ಹೇಳ್ಳೋಣ.
-ನೀಲಕಂಠ ಹೆಗಡೆ, ಬೆಳ್ಮಣ್ಣು

ದೇಶಕ್ಕೋಸ್ಕರ ವೀರ ಮರಣವನ್ನಪ್ಪುವ, ಊಟ, ನಿದ್ರೆ, ಎಲ್ಲವನ್ನೂ ಮರೆತು ನನ್ನ ದೇಶ ನನ್ನ ಜನ ಎಂಬ ಭಾವದಿಂದ ದೇಶವನ್ನು ಕಾಯುವ ಸೈನಿಕರೇ ನಿಮಗೆ ನೀವೇ ಸಾಟಿ, ಶಿರಬಾಗಿ ನಮಿಸುವೆ ನಿಮಗೆ.
-ಅಲಗೇಶ್ವರಿ ಉಡುಪ, ಕಟಪಾಡಿ

ಗಡಿಕಾಯೋ ಯೋಧರಿಗೆ ಗೌರವ ಮತ್ತು ವೀರಮರಣ ಅಪ್ಪಿದ ನಿಮಗೆ ಕಂಬನಿ ಮತ್ತು ಮೌನ ಇವೆರೆಡು ನೀಡಲು ಮನುಕುಲಕ್ಕೆ ಸಾಧ್ಯ. ಇನ್ನಾದರೂ ಗಡಿಯ ಬಗ್ಗೆ ಕದನ ತುಸು ನಿಂತಲ್ಲಿ ಆತಂಕ ದೂರವಾದೀತು.
-ರಾಘವೇಂದ್ರ ಜಿ ಜಿ, ಉಡುಪಿ

ಚೀನ ಯೋಧರ ಕುತಂತ್ರಕ್ಕೆ ನಮ್ಮ ವೀರ‌ರು ಅವರ ಪ್ರಾಣವನ್ನು ಭಾರತ ಮಾತೆಯ ಮಡಿಲಿಗೆ ಒಪ್ಪಿಸಿದ್ದಾರೆ. ಈ ದೇವರಿಗೆ ನನ್ನದೊಂದು ಗೌರವ ನಮನ ಜೈ ಹಿಂದ್‌, ಜೈ ಭಾರತ್‌.
-ವೆಂಕಟೇಶ್‌ ಶೆಟ್ಟಿ, ಹಳ್ಳಿಹೊಳೆ

ನಮ್ಮನ್ನು ಕಾಪಾಡು ಎಂದು ದೇವರಿಗೆ ಹೋಮ, ಹವನ, ಮಾಡುತ್ತೇವೆ. ಹಾಗೆಯೇ ನಮ್ಮನ್ನು ಕಾಯುವ ಸೈನಿಕರಿಗಾಗಿ ಹೋಮ, ಹವನವನ್ನು ಮಾಡೋಣ ಮತ್ತು ಅವರನ್ನು ಗೌರವಿಸೋಣ
-ಸುಂದರ, ಸಿದ್ದಾಪುರ

ಭಾರತ ಮಾತೆಯ ರಕ್ಷಣೆಯೇ ಮೊದಲೆಂದು, ಪ್ರಾಣ ಲೆಕ್ಕಿಸದೇ ಎದುರಾಳಿಯ ಸೈನಿಕರ ವಿರುದ್ಧ ಎದೆಗುಂದದೇ ಕೆಚ್ಚೆದೆಯ ಧೈರ್ಯ ಸಾಹಸ ತೋರಿದ ನಿಮಗೆ ನಮನಗಳು.
-ರಮಾನಂದ ನಾಯಕ್‌,ಉಡುಪಿ

ರಾತ್ರೋ ರಾತ್ರಿ ನಮ್ಮ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರರು ಮಾಡಿರುವ ತ್ಯಾಗಕ್ಕೆ ನಾವು ಸದಾ ಚಿರಋಣಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಸೈನ್ಯ, ನಮ್ಮ ಹೆಮ್ಮೆ.
-ಪ್ರಣೀತ ಶೆಟ್ಟಿ, ಶಂಕರನಾರಾಯಣ

ಕ್ಷಮೆ ಇರಲಿ ಸೈನಿಕರೆ ನಮ್ಮಿ ಅವಿವೇಕ ತನಕ್ಕೆ. ಗಡಿಯಾಚೆಗಿನ ದುರಾಸೆಯ ಸಂಧಾನ ದೊಳಗೆ ಬೆರೆತ ವಿಕೃತ ಮನೋಭಾವದ ಉದಯಕ್ಕೆ ಕ್ಷಮಿಸಿ ಬಿಡಿ ವೀರ ಯೋಧರೆ. ವ್ಯರ್ಥವಾಗಲು ಬಿಡೆವು.
-ಅಕ್ಷತಾ, ಹುಣ್ಸೆಮಕ್ಕಿ

ದೇಶದ ರಕ್ಷಣೆಯಲ್ಲಿ ಯಾರಿಗೂ ಅಂಜದೇ ಹಗಲಿರುಳು ದುಡಿದು ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಯೋಧರಿಗೆ ನನ್ನ ಪ್ರಣಾಮಗಳು. ನೀವು ಎಂದಿಗೂ ಈ ಪುಣ್ಯ ಭೂಮಿಯಲ್ಲಿ ಅಮರರು.
-ಉಷಾ ಕುಲಾಲ್‌, ಕುಂಜಿಬೆಟ್ಟು

ದೇಶದ ಗಡಿ ಭಾಗದಲ್ಲಿ ಜೀವನದ ಹಂಗು ತೊರೆದು ಚಳಿ ಗಾಳಿ ಮಳೆ ಬಿಸಿಲನ್ನು ಲೆಕ್ಕಿಸದೇ ನಮ್ಮ ದೇಶದ ರಕ್ಷಣೆಗೆ ಪಣತೊಟ್ಟು ನಿಂತಿರುವ ವೀರ ಯೋಧರಿಗೆ ಶತಕೋಟಿ ನಮನಗಳು.
-ನಿಶಾಂತ್‌ ಕುಮಾರ್‌, ಶಿರ್ವ

ವೀರರೇ ನಿಮ್ಮ ಪಡೆದ ಈ ಭರತ ಮಾತೆ ಸದಾ ಧನ್ಯ. ದೇಶ ರಕ್ಷಣೆಗಾಗಿ ನಡೆದ ನಿಮ್ಮ ಬಲಿದಾನ ಮರೆಯಲಾರರೆಂದೂ ಈ ಭರತ ಭೂಮಿಯ ಜನ. ನಿಮಗಿದೋ ನಮ್ಮ ಭಾವಪೂರ್ಣ ಅಶ್ರುತರ್ಪಣ.
-ನಾಗರಾಜ್‌, ಶಂಕರನಾರಾಯಣ

ನಮ್ಮ ಸೇನೆ ಎಂದಾಕ್ಷಣ ಏನೋ ರೋಮಾಂಚನ. ತನ್ನೆಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು ಭಾರತಾಂಬೆ ಯನ್ನು ಸದಾ ರಕ್ಷಣೆ ಮಾಡುವ ವೀರ ಸೈನಿಕರೆ ನಿಮಗಿದೋ ನಮ್ಮ ಸಲಾಮ್‌
-ಗಿರಿಜಾ. ಎಮ್‌,ಕಟ್ ಬೇಲ್ತೂರು

ಅವರ ಬಲಿದಾನದ ಮೌಲ್ಯ ಅರಿಯೋಣ
ಕೋವಿಡ್-19 ಲಾಕ್‌ಡೌನ್‌ನಂತಹ ಸಂದಿಗ್ಧ ಸ್ಥಿತಿಯಲ್ಲಿ ಚೀನದ ಸೈನಿಕರು ಭಾರತೀಯ ಯೋಧರ ಮೇಲೆ ನಡೆಸಿರುವ ದಾಳಿ ಖಂಡನೀಯ. ಅದರಲ್ಲಿಯೂ ಯೋಧರು ಸಾವನ್ನಪ್ಪಿರುವುದು ಊಹಿಸಲೂ ಅಸಾಧ್ಯವಾಗಿದೆ. ಸೈನಿಕರು ದೇಶದ ಬೆನ್ನೆಲುಬಾಗಿದ್ದಾರೆ. ಗಟ್ಟಿತನದಿಂದ ದೇಶದ ಗಡಿಭಾಗಗಳಲ್ಲಿ ಶತ್ರುಗಳಿಗೆ ಎದೆಒಡ್ಡಿ ನಿಲ್ಲುವ ಕಾರಣದಿಂದಾಗಿ ನಾವು ಇಂದು ನೆಮ್ಮದಿಯಿಂದ ಇದ್ದೇವೆ. ಚಳಿ, ಮಳೆ, ಗಾಳಿ, ಬಿಸಿಲು ಇವು ಯಾವುದೂ ಕೂಡ ಅವರಿಗೆ ಮುಖ್ಯವಲ್ಲ. ದೇಶದ ಹಿತಕಾಯುವುದಷ್ಟೇ ಅವರ ಧ್ಯೇಯ. ಸೈನಿಕರಲ್ಲಿರುವ ಕೆಲವೊಂದಷ್ಟು ಅಂಶಗಳನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಈ ದಾಳಿ ಮತ್ತಷ್ಟು ಭೀಕರವಾಗದಿರಲಿ ಎಂದು ಆಶಿಸುತ್ತೇನೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಆದರೂ ಕೂಡ ನಮ್ಮ ಸೈನಿಕರು ಹಾಗೂ ದೇಶದ ಜನರ ಹಿತದೃಷ್ಟಿಯಿಂದ ಈ ವೈಷಮ್ಯ ಇಲ್ಲಿಗೆ ಶಮನವಾದರೆ ಉತ್ತಮ. ಪ್ರತಿಯೊಬ್ಬರೂ ತಮ್ಮ ಕುಟುಂಬ ಸದಸ್ಯರಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಸಹಜ ಕೂಡ ಹೌದು. ಆದರೆ ಸೈನಿಕರು ಆ ಎಲ್ಲ ಕಾಳಜಿಗಳನ್ನು ದೇಶಸೇವೆಯ ಮೇಲಿರಿಸುತ್ತಾರೆ. ದೇಶರಕ್ಷಣೆಯೇ ಅವರ ಮೊದಲ ಧ್ಯೇಯವಾಗಿರುತ್ತದೆ. ಈ ಕಾರಣಕ್ಕಾಗಿ ಸೈನಿಕರಿಗೆ ಸರಕಾರ, ಜನತೆ ಮತ್ತಷ್ಟು ಬೆಂಗಾವಲಾಗಿ ನಿಲ್ಲಬೇಕು.. ದೇಶದ ಜನರು ಹಾಗೂ ಸೈನಿಕರ ಹಿತದೃಷ್ಟಿಯಿಂದ ಭಾರತ ಯುದ್ಧತಂತ್ರದಲ್ಲಿ ಜಾಣ್ಮೆಯ ನಡೆ ಅನುಸರಿಸುವುದು ಅತೀ ಅಗತ್ಯವಾಗಿದೆ.
-ರಕ್ಷಿತ್‌ ಶೆಟ್ಟಿ, ನಟ-ನಿರ್ದೇಶಕ

ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟವನ್ನು ಲೆಕ್ಕಿಸದೆ ಸವಾಲುಗಳನ್ನೆಲ್ಲ ಅನುಕೂಲವಾಗಿ ಪರಿವರ್ತಿಸಿ ಕೊಂಡು, ಊರು, ಸಂಸಾರ ಎಲ್ಲವನ್ನು ದೂರ ಮಾಡಿಕೊಂಡರೂ ಸದಾ ಕಾಲ ದೇಶಕ್ಕಾಗಿ ಹೋರಾ ಡುವ ಸೈನಿಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ ಎನ್ನುವುದು ಅತ್ಯಂತ ಸಂತಸ ನೀಡುತ್ತದೆ. ಸೇನೆಯಲ್ಲಿರುವ ಪ್ರತಿಯೊಬ್ಬನ ಜೀವನದಲ್ಲಿ ಯುದ್ಧ , ದುಷ್ಟ ನಿಗ್ರಹಕ್ಕೆ ಅವಕಾಶ ಸಿಗುವುದು ಹೆಮ್ಮೆಯ ವಿಚಾರ ಹಾಗೂ ದೇಶಕ್ಕಾಗಿ ಕೊನೆ ಉಸಿರಿರುವ ತನಕ ಹೋರಾಡಿ ತನ್ನನ್ನು ದೇಶಕ್ಕೆ ಸಮರ್ಪಿ ಸುವ ಯೋಧ ಅಮರ ಎನಿಸಿಕೊಳ್ಳುತ್ತಾನೆ. ದೇಶದ ಯಾವುದೇ ಮೂಲೆಯಲ್ಲಿ ಸೇವೆ ಸಲ್ಲಿಸುವ ಸೈನಿಕ ತನ್ನ ಇನ್ನೊಬ್ಬ ಸಹಪಾಠಿಯನ್ನ ಕಷ್ಟದ ಸಮಯದಲ್ಲಿ ಕೈಬಿಡಲಾರ. ಅಗತ್ಯ ಬಿದ್ದರೆ ಆತನ ರಕ್ಷಣೆಗೆ ನಿಂತು ತನ್ನ ಜೀವವನ್ನು ಬಲಿಕೊಡುತ್ತಾನೆ. ಗಡಿಯಲ್ಲಿ ಸಂಘರ್ಷಗಳಾದಾಗ, ಶತ್ರು ಸೇನೆಯ ನಡುವೆ ಬಿಗುವಿನ ವಾತಾವರಣದಲ್ಲೂ ಸೈನಿಕ ಹಿಂಜರಿಯಲಾರ. ಲಡಾಯಿ ನಡೆಯುವಾಗ ಸೇವೆಯಲ್ಲಿರುವ ಎಲ್ಲಾ ಸೈನಿಕರಿಗೆ ಆತ್ಮ ಸ್ಥ್ಯೆರ್ಯ ತುಂಬುವ ಕಾರ್ಯ, ತನ್ನ ದೇಶದ ಪರ ನಿಲ್ಲುವ ಕಾರ್ಯ ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯ ರಿಂದ ಆಗಬೇಕು.
-ಮಂಜುನಾಥ್‌ ಪೂಜಾರಿ, ಎನ್‌ಎಸ್‌ಜಿ ಕಮಾಂಡೊ, ಕೋಟ

 

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

1

Kadri: ಬೃಹತ್‌ ಗಾತ್ರದ ಚಿಟ್ಟೆ, ಜೀರುಂಡೆ !

Shimoga: ಮೊಬೈಲ್‌ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

Shimoga: ಮೊಬೈಲ್‌ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.